ಬೆಂಗಳೂರು: ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕೋಚ್ ಅನಿಲ್ ಕುಂಬ್ಳೆ ಮನೆಗೆ ಭೇಟಿ ನೀಡಿದ್ದಾರೆ.
ಕನ್ನಡದ ಹೆಮ್ಮೆಯ ಸ್ಪಿನ್ ಗಾರುಡಿಗ ಅನಿಲ್ ಕುಂಬ್ಳೆ ನಿವಾಸಕ್ಕೆ ಕುಟುಂಬ ಸಮೇತ ನಟ ಗಣೇಶ್ ಭೇಟಿ ನೀಡಿ ಕೆಲವು ಕಾಲ ಕಳೆದಿದ್ದಾರೆ. ಈ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡದ ಹೆಮ್ಮೆಯ ಸ್ಪಿನ್ ಗಾರುಡಿಗ ಅನಿಲ್ ಕುಂಬ್ಳೆ ನಿವಾಸಕ್ಕೆ ಕುಟುಂಬ ಸಮೇತ ನಟ ಗಣೇಶ್ ಭೇಟಿ ನೀಡಿ ಕೆಲವು ಕಾಲ ಕಳೆದಿದ್ದಾರೆ. ಈ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪುತ್ರ ವಿಹಾನ್, ಪುತ್ರಿ ಚಾರಿತ್ರ್ಯ ಜೊತೆಗೆ ಗಣೇಶ್ ಭೇಟಿ ನೀಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡ ಗೋಲ್ಡನ್ ಸ್ಟಾರ್, ನೀವು ಅತ್ಯುತ್ತಮ ಹೋಸ್ಟ್. ನಿಮ್ಮ ಭೇಟಿ ನನಗೂ ಮಕ್ಕಳಿಗೂ ತುಂಬಾ ಖುಷಿಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ತಂಡ ಕೆಸಿಸಿ ಟೂರ್ನಿಯನ್ನು ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಹೀಗಾಗಿ ಗಣೇಶ್ ಗೂ ಕ್ರಿಕೆಟ್ ಗೂ ಅಪಾರವಾದ ನಂಟಿದೆ. ಈ ಗೆಲುವಿನ ಬೆನ್ನಲ್ಲೇ ಸ್ಪಿನ್ ದಿಗ್ಗಜನ ಮನೆಗೆ ಭೇಟಿ ನೀಡಿದ್ದು ವಿಶೇಷ.