Sandalwood Leading OnlineMedia

ತಮಿಳುನಾಡಿನಲ್ಲಿಯೂ “ಗ್ಲೋಪಿಕ್ಸ್‌”

https://glopixs.com/

ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಹುಭಾಷಾ OTT ಪ್ಲಾಟ್‌ಫಾರ್ಮ್ ಗ್ಲೋಬಲ್ ಪಿಕ್ಸ್ ಇಂಕ್, ಇದೀಗ ತಮಿಳುನಾಡಿನಲ್ಲಿ ಡಿಜಿಟಲ್ ಮನರಂಜನಾ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ. ಅಂದರೆ, ಕಂಪನಿಯು ಅಧಿಕೃತವಾಗಿ ಗ್ಲೋಬಲ್ ಪಿಕ್ಸ್ ಇಂಕ್ ಅನ್ನು ತಮಿಳುನಾಡಿನಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಮೂಲಕ ಗಮನಾರ್ಹ ವಿಸ್ತರಣೆಯತ್ತ ದಾಪುಗಾಲಿರಿಸಿದೆ.

ವಿನ್ಸಿ ಎಲ್ ಎ ಮತ್ತು ಸಹ- ಸಂಸ್ಥಾಪಕಿ ಅನಿತಾ ಅವರಿಂದ ಸ್ಥಾಪಿತವಾದ ಗ್ಲೋಪಿಕ್ಸ್ ಒಟಿಟಿ, ಎಲ್ಲಾ ವಯೋಮಾನದ ಪ್ರೇಕ್ಷಕರಿಗೆ ಸಮಗ್ರ ಮನರಂಜನಾ ಅನುಭವವನ್ನು ನೀಡಲು ಸಜ್ಜಾಗಿದೆ. ತಮಿಳುನಾಡಿನಲ್ಲಿ ಗಾಯತ್ರಿ ತ್ಯಾಗರಾಜನ್ ಇದನ್ನು ಮುನ್ನಡೆಸಲಿದ್ದಾರೆ. ಶ್ರೀಕಸ್ತೂರಿ ರಾಮನ್ ಸಿಒಒ ಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಗವಲನ್ ತಮಿಳುನಾಡು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

“ಗ್ಲೋಪಿಕ್ಸ್ ಅನ್ನು ತಮಿಳುನಾಡಿಗೆ ತರಲು ನಾವು ರೋಮಾಂಚನಗೊಂಡಿದ್ದೇವೆ” ಎಂದು ಗ್ಲೋಪಿಕ್ಸ್ ಸಂಸ್ಥಾಪಕ ವಿನ್ಸಿ ಎಲ್ ಎ ಹೇಳಿದರೆ, “ಸಿನಿಮಾಗಳು, ಆಕರ್ಷಕ ವೆಬ್ ಸರಣಿಗಳು, ರೋಮಾಂಚಕ ಕ್ರೀಡೆಗಳು ಸೇರಿ ಸಾಕಷ್ಟು ಕಾರ್ಯಕ್ರಮಗಳನ್ನು ನೀಡುವುದು ನಮ್ಮ ದೃಷ್ಟಿಕೋನವಾಗಿದೆ. ಸಿನಿಮಾಗಳು, ವೆಬ್ ಸರಣಿಗಳು, ಮಕ್ಕಳ ಕಂಟೆಂಟ್‌ಗಳು, ಶಿಕ್ಷಣ, ಸಾಕ್ಷ್ಯಚಿತ್ರಗಳು, ರಿಯಾಲಿಟಿ ಶೋಗಳು ಮತ್ತು ಸಂಬಂಧಿತ ವಿಷಯವನ್ನು ಒಳಗೊಂಡ 360-ಡಿಗ್ರಿ ಮನರಂಜನಾ ಅನುಭವವನ್ನು ಗ್ಲೋಪಿಕ್ಸ್ ಒಟಿಟಿ ನೀಡುವ ಗುರಿಯನ್ನು ಹೊಂದಿದೆ.

ಈ ಗ್ಲೋಫಿಕ್ಸ್‌ ಒಟಿಟಿ ವೇದಿಕೆಯು ಬಳಕೆದಾರ ಸ್ನೇಹಿ ಇಂಟರ್ಫೇಸ್ ಮತ್ತು ಉತ್ತಮ- ಗುಣಮಟ್ಟದ ಸ್ಟ್ರೀಮಿಂಗ್ ಅನ್ನು ಸಾಟಿಯಿಲ್ಲದ ವೀಕ್ಷಣಾ ಅನುಭವವನ್ನು ವಿನ್ಯಾಸಗೊಳಿಸಿದೆ. ತಮಿಳುನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ಮನರಂಜನಾ ಉದ್ಯಮದ ಜತೆಗೆ ತಾಜಾ ಮತ್ತು ಹೊಸ ಹೊಸ ಕಾರ್ಯಕ್ರಮಗಳ ಜತೆಗೆ ಪ್ರೇಕ್ಷಕರನ್ನು ಸೆಳೆಯಲಿದ್ದೇವೆ. ಅವನ್ನು ತಲುಪಿಸಲು ನಾವು ಬದ್ಧರಾಗಿದ್ದೇವೆ” ಎಂಬುದು ಗಾಯತ್ರಿ ತ್ಯಾಗರಾಜನ್ ಮಾತು.

 

ಇತ್ತೀಚೆಗಷ್ಟೇ ಗ್ಲೋಪಿಕ್ಸ್‌ ಒಟಿಟಿ ಮತ್ತು ಗ್ಲೋಪಿಕ್ಸ್‌ ತಮಿಳುನಾಡು ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಗ್ಲೋಪಿಕ್ಸ್ ತಂಡದ ಪ್ರತಿಭಾ ಪಟವರ್ಧನ್ – CCO, ಶಿಜಿ ಸುನಿಲ್ – CXO, ಪ್ರಕಾಶ್. ಜೆ – ವಾಣಿಜ್ಯ ಮತ್ತು ಹಣಕಾಸು ಉಪಾಧ್ಯಕ್ಷ, ಜೈ ಆನಂದ್ – ಕಾರ್ಯತಂತ್ರದ ಯೋಜನಾ ಉಪಾಧ್ಯಕ್ಷ, ಮಾರುತಿ ರಾಜೀವ್ – CTO ಉಪಸ್ಥಿತರಿದ್ದರು. ಗ್ಲೋಪಿಕ್ಸ್ ತಮಿಳುನಾಡು ಈ ವರ್ಷದ ಬೇಸಿಗೆಯ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಮತ್ತು ಪ್ರೇಕ್ಷಕರು ಅತ್ಯಾಕರ್ಷಕ ವಿಷಯಗಳಿಗಾಗಿ ಎದುರು ನೋಡಬಹುದು

ಗ್ಲೋಪಿಕ್ಸ್ ಬಗ್ಗೆ
ಗ್ಲೋಪಿಕ್ಸ್ ವೈವಿಧ್ಯಮಯ ಮತ್ತು ಆಕರ್ಷಕವಾದ ಮನರಂಜನಾ ವಿಷಯವನ್ನು ಒದಗಿಸಲು ಮೀಸಲಾಗಿರುವ ಬಹುಭಾಷಾ OTT ವೇದಿಕೆಯಾಗಿದೆ. ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಬೇರೂರಿರುವ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ತರುವುದು ವೇದಿಕೆಯ ಧ್ಯೇಯವಾಗಿದೆ. ಗುಣಮಟ್ಟ ಮತ್ತು ನಾವೀನ್ಯತೆಯ ಮೇಲೆ ಕೇಂದ್ರೀಕರಿಸಿ, ಗ್ಲೋಪಿಕ್ಸ್ ಡಿಜಿಟಲ್ ಮನರಂಜನಾ ಅನುಭವವನ್ನು ಮರು ವ್ಯಾಖ್ಯಾನಿಸುವ ಗುರಿಯನ್ನು ಹೊಂದಿದೆ.

 

 

Share this post:

Translate »