ಗ್ಲೋಬಲ್ ಗಾರ್ನರ್ ಸಂಸ್ಥೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಉದ್ಘಾಟನೆಗೊಂಡ `ಗ್ಲೋಬಲ್ ಗಾರ್ನರ್ ಎಕ್ಸ್ಪೋಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು ಮೇಳವು ಅರಮನೆ ಮೈದಾನದಲ್ಲಿರುವ `ಪ್ರಿನ್ಸಸ್ ಗಾಲ್ಫ್ ಗೇಟ್’ನಲ್ಲಿ ನಡೆಯುತ್ತಿದೆ.ಅರಮನೆ ಮೈದಾನದಲ್ಲಿರುವ ಪ್ರಿನ್ಸಸ್ ಗಾಲ್ಪ್ ಗೇಟ್ 9ರಲ್ಲಿ ನಡೆದ ಗ್ಲೋಬಲ್ ಗಾರ್ನರ್ ಎಕ್ಸ್ಪೋಗೆ ಇಂದು ಅವಧೂತ ವಿನಯ್ ಗುರೂಜಿ, ನಟಿ ಮಾಳವಿಕಾ ಅವಿನಾಶ್ ಇಂದು ಚಾಲನೆ ನೀಡಿದರು . ಈ ವೇಳೆ ಸಂಸ್ಥೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ (ಸಿಎಂಡಿ) ವಿಕಾಸ್ ರಾವತ್ ಭಾಗವಹಿಸಿದ್ದರು ಗ್ರಾಹಕರು ಮತ್ತು ಉತ್ಪಾದಕರು ಇಬ್ಬರಿಗೂ ಸಹಾಯವಾಗುವ ರೀತಿಯಲ್ಲಿ ಮೇಳವನ್ನು ಆಯೋಜಿಸಲಾಗಿದ್ದು,ಹೊಸದಾಗಿ ಬಿಜಿನೆಸ್ ಆರಂಭಿಸುವವರಿಗೆ ಇಲ್ಲಿ ಮಾಹಿತಿ, ತರಬೇತಿ ನೀಡಲಾಗುತ್ತದೆ. ಹೊಸದಾಗಿ ಉತ್ಪನ್ನಗಳನ್ನು ತಯಾರಿಸುವವರಿಗೆ ಮಾರುಕಟ್ಟೆ ಕಲ್ಪಿಸಲು ಬೇಕಾದ ಸಿದ್ಧತೆಗಳನ್ನು ಕೂಡ ಮೇಳದಲ್ಲಿ ತಿಳಿಸಿಕೊಡಲಾಗುತ್ತದೆ.
ಅದೇ ರೀತಿ, ಇಲ್ಲಿ ಯಾವುದೇ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಇದೊಂದು ಬಹು ಆಯಾಮದ ಮೇಳವಾಗಿರಲಿದ್ದು, ಇಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವ್ಯಾಪಾರಿಗಳು, ಗ್ರಾಹಕರು, ಉತ್ಪಾದಕರು, ನವೋದ್ಯಮ ಆರಂಭಿಸಲು ಚಿಂತನೆ ನಡೆಸುತ್ತಿರುವವರು, ಹೊಸದಾಗಿ ಬಿಜಿನೆಸ್ ಆರಂಭಿಸಲು ಸಹಾಯ ಬಯಸುತ್ತಿರುವವರು ಸೇರಿ ಎಲ್ಲ ವರ್ಗದ ಜನರಿಗೆ ಈ ಮೇಳವು ಸಹಾಯವಾಗಲಿದೆ.
ಮೇಳದಲ್ಲಿ ಹೊಸದಾಗಿ ಉತ್ಪನ್ನಗಳನ್ನು ತಯಾರಿಸಿ ಮಾರ್ಕೆಟ್ ಮಾಡುವುದು ಹೇಗೆಂದು ತಿಳಿಯದಿದ್ದವರಿಗೆ ವೇದಿಕೆ ಕಲ್ಪಿಸಲಾಗುತ್ತಿದ್ದು, ಈಗಾಗಲೇ ಮಾರುಕಟ್ಟೆ ಮಾಡುತ್ತಿರುವವರಿಗೆ ಮಾರುಕಟ್ಟೆ ವಿಸ್ತರಿಸಲು ಬೇಕಾದ ಕೌಶಲಗಳನ್ನು ಕೂಡ ನೀಡಲಾಗುತ್ತದೆ. ಗ್ಲೋಬಲ್ ಗಾರ್ನರ್ ಸಂಸ್ಥೆಯಲ್ಲಿ 20 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ವಸ್ತುಗಳಿದ್ದು, ಸುಲಭವಾಗಿ ಖರೀದಿಸಬಹುದಾಗಿದೆ.
ಎಲೆಕ್ಟ್ರಾನಿಕ್ಸ್ ಪರಿಕರಗಳು ಇಲ್ಲಿ ಲಭ್ಯವಾಗಲಿವೆ. ಈ ಎಲ್ಲ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಗ್ರಾಹಕರು ಖರೀದಿ ಮಾಡಬಹುದಾದ ಉತ್ತಮ ಅವಕಾಶವನ್ನು `ಗ್ಲೋಬಲ್ ಗಾರ್ನರ್ ಎಕ್ಸ್ಪೋ’ಕಲ್ಪಿಸಲಿದೆ. ಈ ಮೇಳಕ್ಕೆ `ಚಿತ್ತಾರ’ ಪತ್ರಿಕೆ ಕೂಡ ಸಹಕಾರ ನೀಡುತ್ತಿದೆ.
ಈ ವೇಳೆ ಚಿತ್ತಾರ ಸಿನಿ ಮಾಸ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಶಿವಕುಮಾರ್ ಅವರನ್ನು ಗೌರವಿಸಲಾಯಿತು