Left Ad
'ಮಾರ್ಟಿನ್' ಮೂಲಕ ಸ್ಯಾಂಡಲ್ ವುಡ್'ಗೆ ಜಾರ್ಜಿಯಾ ಎಂಟ್ರಿ; Exclusive Pictures ಇಲ್ಲಿದೆ - Chittara news
# Tags

‘ಮಾರ್ಟಿನ್’ ಮೂಲಕ ಸ್ಯಾಂಡಲ್ ವುಡ್’ಗೆ ಜಾರ್ಜಿಯಾ ಎಂಟ್ರಿ; Exclusive Pictures ಇಲ್ಲಿದೆ

ಎಪಿ ಅರ್ಜುನ್ ನಿರ್ದೇಶನದ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಚಿತ್ರೀಕರಣ ಅಂತಿಮ ಘಟ್ಟ ತಲುಪಿದ್ದು, ಇತ್ತೀಚೆಗೆ ಚಿತ್ರತಂಡ ಚಿತ್ರದ ಹಾಡೊಂದರ ಚಿತ್ರೀಕರಣವನ್ನು ನಡೆಸಿತು. ಹಾಡಿನ ನಲ್ಲಿ ಜಾರ್ಜಿಯಾ ಆಂಡ್ರಿಯಾನಿ ನೃತ್ಯ ಮಾಡಿದ್ದು, ಈ ಮೂಲಕ ಸ್ಯಾಂಡಲ್ ವುಡ್’ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಡಿನ ಚಿತ್ರೀಕರಣವನ್ನು ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ನಡೆಸಲಾಯಿತು.

ಇದನ್ನೂ ಓದಿ:   Sapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..!

ಹಾಡಿನ ನೃತ್ಯ ನಿರ್ದೇಶನವನ್ನು ಇಮ್ರಾನ್ ಸರ್ಧಾರಿಯಾ ಮಾಡಿದ್ದು, ಹಾಡಿನಲ್ಲಿ ಜಾರ್ಜಿಯಾ ಜೊತೆಗೆ ನಟ ಧ್ರುವ ಸರ್ಜಾ ಅವರು ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ 350 ವಿದೇಶಿ ನೃತ್ಯಗಾರರು, ಹೈಟೆಕ್ ಉಪಕರಣಗಳನ್ನು ಬಳಕೆ ಮಾಡಿದ್ದು, ಸುಮಾರು 3.5 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ. ಚಿತ್ರದ ಎರಡು ಹಾಡಿನ ಚಿತ್ರೀಕರಣವನ್ನು ಚಿತ್ರತಂಡ ನಡೆಸುತ್ತಿದ್ದು, ಅಕ್ಟೋಬರ್ 7ಕ್ಕೂ ಮೊದಲೇ ಚಿತ್ರೀಕರಣ ಪೂರ್ಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ಓದಿRukmini Vasanth Exclusive Pictures from Baanadariyalli Film Trailer Launch Event

ಉದಯ್ ಕೆ ಮೆಹ್ತಾ ಅವರು ವಾಸವಿ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ, ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ಸಂಯೋಜಿಸಿದ್ದರೆ, ರವಿ ಬಸ್ರೂರ್ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ.ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ ನೀಡುತ್ತಿದ್ದು, ಹೆಸರಾಂತ ಸ್ಟಂಟ್ ಕೊರಿಯೋಗ್ರಾಫರ್‌ಗಳಾದ ರಾಮ್-ಲಕ್ಷ್ಮಣ್ ಮತ್ತು ರವಿವರ್ಮ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ*ಟೈಗರ್ ನಾಗೇಶ್ವರ್ ಸಿನಿಮಾದ ಮೊದಲ ಹಾಡು ರಿಲೀಸ್..ನೂಪುರ್ ಸನೋನ್ ಜೊತೆ ಹೆಜ್ಜೆ ಹಾಕಿದ ಮಾಸ್ ಮಹಾರಾಜ ರವಿತೇಜ*

ಚಿತ್ರದಲ್ಲಿ ಧ್ರುವ ಸರ್ಜಾ ಜೊತೆಗೆ, ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಅನ್ವೇಶಿ ಜೈನ್ ಮತ್ತು ಸುಕೃತಾ ವಾಗ್ಲೆ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Spread the love
Translate »
Right Ad