Left Ad
ಗಿಲ್ಲಿಯೇ ಬಿಗ್ ಬಾಸ್ ಮನೆಗೆ ಜೀವ ತುಂಬ್ತಿದ್ದಾನೆ: ಪ್ರಶಾಂತ್ ಸಂಬರ್ಗಿ ಪ್ರಶಂಸೆ - Chittara news
# Tags

ಗಿಲ್ಲಿಯೇ ಬಿಗ್ ಬಾಸ್ ಮನೆಗೆ ಜೀವ ತುಂಬ್ತಿದ್ದಾನೆ: ಪ್ರಶಾಂತ್ ಸಂಬರ್ಗಿ ಪ್ರಶಂಸೆ

ಬಿಗ್ ಬಾಸ್ ಕನ್ನಡ ಸೀಸನ್ 12 ಈಗಾಗಲೇ ಚರ್ಚೆಯ ವಿಷಯವಾಗಿದೆ. ಈ ಬಾರಿ ಪ್ರೇಕ್ಷಕರ ಮನಗೆದ್ದಿರುವ ಸ್ಪರ್ಧಿ ಎಂದರೆ ಗಿಲ್ಲಿ ನಟ. ತಮ್ಮ ಹಾಸ್ಯ, ಚುಟುಕು ಮಾತು ಹಾಗೂ ಪ್ರಾಪರ್ಟಿ ಕಾಮಿಡಿ ಶೈಲಿಯಿಂದ ಅವರು ಮನೆಮಾತಾಗಿದ್ದಾರೆ. ಈಗ ಅವರ ಆಟದ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಪ್ರಶಾಂತ್ ಸಂಬರ್ಗಿ ಅವರು ತಮ್ಮ ಸಾಮಾಜಿಕ ಮಾಧ್ಯಮದ ವಿಡಿಯೋದಲ್ಲಿ ಗಿಲ್ಲಿ ಬಗ್ಗೆ ಮಾತನಾಡುತ್ತಾ, “ಈ ಸೀಸನ್‌ನಲ್ಲಿ ಗಿಲ್ಲಿಯೇ ಎಂಟರ್‌ಟೇನರ್. ಅವನು ಇಲ್ದಿದ್ದರೆ ಈ ಸೀಸನ್ ಶೂನ್ಯವಾಗುತ್ತಿತ್ತು. ಗಿಲ್ಲಿ ಶೋಗೆ ಜೀವ ತುಂಬ್ತಿದ್ದಾನೆ. ಅಶ್ವಿನಿ ಮೊದಲಾದ ಸ್ಪರ್ಧಿಗಳು ಸಹ ಒಳ್ಳೆಯ ಆಟವಾಡ್ತಿದ್ದಾರೆ, ಆದರೂ ಗಿಲ್ಲಿಯೇ ಬೆಸ್ಟ್,” ಎಂದು ಹೇಳಿದ್ದಾರೆ.

ಬಿಗ್ ಬಾಸ್ ಸೀಸನ್ 8 ಮತ್ತು 9ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಪ್ರಶಾಂತ್ ಸಂಬರ್ಗಿ, ತಮ್ಮ ನೇರ ನುಡಿಗೆ ಹಾಗೂ ಸ್ಫೋಟಕ ಅಭಿಪ್ರಾಯಗಳಿಗೆ ಹೆಸರಾಗಿದ್ದರು. ಈಗ ಗಿಲ್ಲಿ ಬಗ್ಗೆ ನೀಡಿದ ಅವರ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ನಂತರದಿಂದಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದ್ದಾರೆ. ಕಿಚ್ಚ ಸುದೀಪ್ ಅವರಿಂದಲೇ ಈಗಾಗಲೇ ಮೆಚ್ಚುಗೆಯ ಚಪ್ಪಾಳೆ ಪಡೆದಿರುವ ಗಿಲ್ಲಿ, ಮುಂದಿನ ಎಪಿಸೋಡ್‌ಗಳಲ್ಲಿ ಮತ್ತಷ್ಟು ಶ್ಲಾಘನೆ ಗಳಿಸುವ ನಿರೀಕ್ಷೆಯಿದೆ.

ಈ ಸೀಸನ್‌ನ ಮನರಂಜನಾ ಹೃದಯವೇ ಗಿಲ್ಲಿ ಎಂದು ಅನೇಕ ಪ್ರೇಕ್ಷಕರು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಗಿಲ್ಲಿ ಇಲ್ಲದಿದ್ದರೆ ಈ ಸೀಸನ್ ಝೀರೋ” ಎಂಬ ಪ್ರಶಾಂತ್ ಸಂಬರ್ಗಿಯ ಮಾತು ಇದೀಗ ಬಿಗ್ ಬಾಸ್ ವೀಕ್ಷಕರ ನುಡಿಯಾಗಿದೆ.

Spread the love
Translate »
Right Ad