Left Ad
ಬಹು ನಿರೀಕ್ಷಿತ "ಘೋಸ್ಟ್" ಚಿತ್ರ ಅಕ್ಟೋಬರ್ 19 ರಂದು ತೆರೆಗೆ . - Chittara news
# Tags

ಬಹು ನಿರೀಕ್ಷಿತ “ಘೋಸ್ಟ್” ಚಿತ್ರ ಅಕ್ಟೋಬರ್ 19 ರಂದು ತೆರೆಗೆ .

 

ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ನಿರ್ಮಿಸಿರುವ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ “ಘೋಸ್ಟ್” ಚಿತ್ರ ಅಕ್ಟೋಬರ್ 19 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

ಇದನ್ನೂ ಓದಿ   ‘ಚಿಕ್ಕಿಯ ಮೂಗುತಿ’ ಚಿತ್ರದ ಪವರ್ ಫುಲ್ ಟೀಸರ್ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್

ನಾನು ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಟಿಸಿರುವ ಮೂರನೇ ಚಿತ್ರವಿದು. ವಿಶೇಷವೆಂದರೆ ನಾನು ಈ ಚಿತ್ರದಲ್ಲಿ ಮೂರು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ಈವರೆಗೂ ಮಾಡಿರದ ಪಾತ್ರವೆನ್ನಬಹುದು. ಶ್ರೀನಿ ನಿರ್ದೇಶನ, ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ. ಎರಡನೇ ಭಾಗದಲ್ಲೂ “ಘೋಸ್ಟ್” ಬರಲಿದೆ. ಈ ಚಿತ್ರದಲ್ಲಿ ಅನುಪಮ್ ಖೇರ್, ಜಯರಾಮ್, ಸತ್ಯಪ್ರಕಾಶ್ ಅವರ ಜೊತೆ ಅಭಿನಯಿಸಿದ್ದು ಖಷಿಯಾಗಿದೆ. ಬಹು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ಪ್ರಚಾರಕ್ಕಾಗಿ ಬೇರೆಬೇರೆ ಊರುಗಳಿಗೆ ತೆರಳುತ್ತಿದ್ದೇನೆ. ಅಲ್ಲಿನ ಜನರು ಕೂಡ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ  ಪ್ರಜ್ವಲ್ ದೇವರಾಜ್‌ಗೆ ‘ಅಂಬಿ ನಿಂಗೆ ವಯಸಾಯ್ತೋ’ ಖ್ಯಾತಿಯ ನಿರ್ದೇಶಕ ಗುರುದತ್ ನಿರ್ದೇಶನ

ನಮ್ಮ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಹೋದಲೆಲ್ಲ ಸಿಗುತ್ತಿರುವ ಬೆಂಬಲಕ್ಕೆ ಮನ ತುಂಬಿ ಬಂದಿದೆ. ಉತ್ತರ ಭಾರತದಲ್ಲಿ ಹಿಂದಿ ಭಾಷೆಯಲ್ಲಿ, ಕೇರಳ ಹಾಗೂ ತಮಿಳುನಾಡಿನಲ್ಲಿ ತಮಿಳಿನಲ್ಲಿ ಅಕ್ಟೋಬರ್ 19 ರಂದು ಬಿಡುಗಡೆಯಾಗಲಿದೆ . ಆಂದ್ರ ಹಾಗೂ ತೆಲಂಗಾಣದಲ್ಲಿ ಮಾತ್ರ ಮುಂದಿನವಾರ ಚಿತ್ರ ತೆರೆಗೆ ಬರಲಿದೆ. ಅಕ್ಟೋಬರ್ 18ರ ಮಧ್ಯರಾತ್ರಿ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನವಿರುತ್ತದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಶ್ರೀನಿ.

ಇದನ್ನೂ ಓದಿ  “ಶುಗರ್ ಫ್ಯಾಕ್ಟರಿ” ಗೆ ಜಯಂತ ಕಾಯ್ಕಿಣಿ ಬರೆದರು “ಜಹಾಪನಾ” ಹಾಡು..

ನಮ್ಮ ಸಂಸ್ಥೆಯ ಮೂರನೇ ಚಿತ್ರದಲ್ಲಿ ನಾಯಕರಾಗಿ ಶಿವಣ್ಣ ನಟಿಸಿದ್ದಾರೆ. ‌ಹಿಂದಿನ ಎರಡು ಚಿತ್ರಗಳು ಸೂಪರ್ ಹಿಟ್ ಆಗಿದೆ. ಈ ಚಿತ್ರ ಕೂಡ ಭರ್ಜರಿ ಯಶಸ್ವಿಯಾಗುವ ನಂಬಿಕೆಯಿದೆ ಎಂದರು ನಿರ್ಮಾಪಕ ಸಂದೇಶ್ ಎನ್.

ಇದನ್ನೂ ಓದಿ  ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ – ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಚಿತ್ರಕ್ಕೆ ಶಿವಣ್ಣ ಎಂಟ್ರಿ

ಛಾಯಾಗ್ರಾಹಕ ಮಹೇಂದ್ರ ಸಿಂಹ ಹಾಗೂ ಸಂಭಾಷಣೆ ಬರೆದಿರುವ ಪ್ರಸನ್ನ ಅವರು “ಘೋಸ್ಟ್” ಚಿತ್ರದ ಬಗ್ಗೆ ಮಾತನಾಡಿದರು.

Spread the love
Translate »
Right Ad