Sandalwood Leading OnlineMedia

ಒಟಿಟಿ ಎಂಟ್ರಿಗೆ ರೆಡಿ ಶಿವಣ್ಣನ ‘ಘೋಸ್ಟ್’…ಯಾವಾಗ…ಎಲ್ಲಿ…? ಇಲ್ಲಿದೆ‌ ನೋಡಿ ಮಾಹಿತಿ…

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಶ್ರೀನಿ ಜೋಡಿಯ ಘೋಸ್ಟ್ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಅಕ್ಟೋಬರ್ 19ರಂದು ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ತೆರೆಕಂಡಿತ್ತು. ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿರುವ ಘೋಸ್ಟ್ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ.

ಇದನ್ನೂ ಒದಿ  ದೀಪಾವಳಿ ಹಬ್ಬಕ್ಕೆ ಬಂತು ಡಂಕಿ ಹೊಸ ಪೋಸ್ಟರ್….

ನ.17ರಿಂದ ಜೀ5ನಲ್ಲಿ ಘೋಸ್ಟ್ ಸ್ಟ್ರೀಮಿಂಗ್

ಶಿವರಾಜ್‌ಕುಮಾರ್ ‘ಘೋಸ್ಟ್’ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ರೆಡಿಯಾಗಿದೆ. ಜೀ5ನಲ್ಲಿ ನವೆಂಬರ್ 17ರಿಂದ ಪ್ರಸಾರ ಆಗಲಿದೆ. ಈ ಸಂಬಂಧ ಸ್ಪೆಷಲ್ ಪ್ರೋವೋ ಬಿಡುಗಡೆ ಮಾಡಲಾಗಿದೆ.
ಇಲಿಯೊಂದು ಬಾಯಲ್ಲಿ ಚೀಟಿ ಹಿಡಿದು ಬಂದಿದೆ. ಅದನ್ನು ಅದು ಶಿವಣ್ಣನ ಕೈಗೆ ಇಟ್ಟಿದೆ. ಆ ಚೀಟಿಯ ಹಿಂಭಾಗದಲ್ಲಿ ಬೆಂಕಿ ಹಿಡಿದು ಶಿವರಾಜ್ ಕುಮಾರ್ ಅವರು ನೋಡಿದಾಗ ಅದರಲ್ಲಿ ಒಂದು ಮೆಸೇಜ್ ಕಂಡಿದೆ. ಅದನ್ನು ನೋಡಿ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದಾರೆ. ಅಷ್ಟಕ್ಕೂ ಆ ಮೆಸೇಜ್ ಏನೆಂದರೆ, ಘೋಸ್ಟ್ ಚಿತ್ರವು ಜೀ-5ನಲ್ಲಿ ನವೆಂಬರ್ 17ರಿಂದ ನೋಡಬಹುದು ಎಂಬ ಮೆಸೇಜ್ ಅದು. ನನ್ನ ಗ್ಯಾಂಗ್ ಅಲ್ಲಿ ಇರೋ Informer ಒಬ್ಬ್ರು ನಿಮಗೆ ಒಂದು Messages ಕೊಟ್ಟಿದ್ದಾರೆ ಏನು ಅಂತ ಗೊತ್ತಾಯ್ತು ಅಲ್ವಾ ಎನ್ನುವ ಶೀರ್ಷಿಕೆ ಕೊಟ್ಟಿದ್ದು, ಇದು ಸಕತ್ ವೈರಲ್ ಆಗಿದೆ.

ಇದನ್ನೂ ಒದಿ  ಸಿನಿಮಾ ಲೋಕಕ್ಕೆ ಕಾಲಿಟ್ಟ ಸಕ್ಕತ್ ಸ್ಟುಡಿಯೋ

ಸಂದೇಶನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ಘೋಸ್ಟ್’ ಸಿನಿಮಾ ನಿರ್ಮಾಣಗೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿದೆ. ಅನುಪಮ್ ಕೇರ್, ಜಯರಾಂ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇನ್ನು ಚಿತ್ರದಲ್ಲಿ ನಾಯಕಿ ಇಲ್ಲ. ಅಂದಹಾಗೆ ಶ್ರೀನಿ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಯಾಂಗ್ ಸ್ಟರ್ ಆಗಿ ಅಬ್ಬರಿಸಿರುವ ಶಿವಣ್ಣನ ಘೋಸ್ಟ್ ಸಿನಿಮಾವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಜೀ5 ಒಟಿಟಿಯಲ್ಲಿ‌ ನೋಡಬಹುದು.

Share this post:

Related Posts

To Subscribe to our News Letter.

Translate »