ಸಂದೇಶ್ ನಾಗರಾಜ್ (ಎಂ ಎಲ್ ಸಿ) ಅರ್ಪಿಸುವ, ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸುತ್ತಿರುವ, ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ ಚಿತ್ರ “ಘೋಸ್ಟ್”.


ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ನಡೆದ ಭಾರತ – ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ” ಘೋಸ್ಟ್ ” ಚಿತ್ರದ ಪೋಸ್ಟರ್ ರಾರಾಜಿಸಿದೆ. ಅಭಿಮಾನಿಗಳು ಈ ಚಿತ್ರದ ಪೋಸ್ಟರ್ ಹಿಡಿದು ಚಿತ್ರಕ್ಕೆ ವಿಭಿನ್ನ ಶೈಲಿಯಲ್ಲಿ ಶುಭ ಕೋರಿದರು.
ವಿಭಿನ್ನ ಕಥಾಹಂದರ ಹೊಂದಿರುವ, ಅದ್ದೂರಿ ತಾರಾಗಣದೊಂದಿಗೆ, ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.