Sandalwood Leading OnlineMedia

ಚಿತ್ತಾರ ಸ್ಟಾರ್ ಅವಾರ್ಡ್ಸ್’ನ ಬಹು ನಿರೀಕ್ಷಿತ `ರೆಡ್‌ಕಾರ್ಪೆಟ್ ಶೋ’ ಇಂದು ಸಂಜೆ 5ಕ್ಕೆ ಜನ ಮೆಚ್ಚಿದ ವಾಹಿನಿ `ಕಲರ್ಸ್ ಕನ್ನಡ’ದಲ್ಲಿ ಪ್ರಸಾರ / Explore the website for exclusive video content

 

  `ಚಿತ್ತಾರಮಾಸ ಪತ್ರಿಕೆ ಮತ್ತು ಕನ್ನಡ ಚಿತ್ರರಂಗದ ನಡುವಿನ ಅವಿನಾಭಾವ ಸಂಬ0ಧ ಒಂದೂವರೆ ದಶಕದಿಂದಲೂ ಇದೆ. `ಚಿತ್ತಾರದ ಇತಿಹಾಸದ ಪುಟಗಳನ್ನು ತಿರುವಿದರೆ ಇದಕ್ಕೆ ಸಾಕಷ್ಟು ಸಾಕ್ಷಿಗಳು ಸಿಕ್ಕಿ ಬಿಡುತ್ತವೆ. ಕನ್ನಡ ಚಿತ್ರೋದ್ಯಮದ ನಾಡಿಮಿಡಿತವನ್ನು ಗಮನಿಸುತ್ತಾ, ಅಲ್ಲಿನ ಬೆಳವಣಿಗೆಗಳನ್ನು ಓದುಗರಿಗೆ ದಾಟಿಸುತ್ತಾ, ತಪ್ಪುಗಳಾದಾಗ ಎಚ್ಚರಿಸುತ್ತಾ, ಸಿನಿಮಾವನ್ನು ಮನೋರಂಜನಾ ಕ್ಷೇತ್ರವಾಗಿಯೂ, ಉದ್ಯಮವಾಗಿಯೂ ನೋಡುವ ಗಾಂಭೀರ್ಯತೆಯನ್ನು `ಚಿತ್ತಾರಉಳಿಸಿಕೊಂಡಿದೆ. ಹೀಗಾಗಿಯೇ ಚಂದನವನವನ್ನು ಉತ್ತೇಜಿಸುವ ಮತ್ತು ಬೆಸೆಯುವ ಅದ್ಭುತ ವೇದಿಕೆಯೊಂದನ್ನು `ಚಿತ್ತಾರ ಸ್ಟಾರ್ ಅವಾರ್ಡ್ಸ್ಮೂಲಕ ಸೃಷ್ಟಿಸಿತು. ಮೊದಲ ಕಾರ್ಯಕ್ರಮದಲ್ಲೇ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದ `ಚಿತ್ತಾರಇದೀಗ `ಚಿತ್ತಾರ ಸ್ಟಾರ್ ಅವಾರ್ಡ್ಸ್-2024ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ

 

           ಚಿತ್ರರಂಗ ಮತ್ತು ಓದುಗನ ನಡುವೆ ಸಿನಿಸೇತುವೆಯಾಗಿ ಕೆಲಸ ನಿರ್ವಹಿಸುತ್ತಿರುವ ಚಿತ್ತಾರ, ಅನೇಕ ಪ್ರತಿಭಾವಂತರಿಗೆ ಅತೀ ದೊಡ್ಡ ವೇದಿಕೆಯಾಗಿದೆ. ಪ್ರತಿ ವರ್ಷದಂತೆ ಚಂದನವನವನ್ನು ಇನ್ನಷ್ಟು ಉತ್ತೇಜಿಸುವ ದೃಷ್ಟಿಯಿಂದ `ಚಿತ್ತಾರ ಸ್ಟಾರ್ ಅವಾರ್ಡ್ಸ್-2024ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಗಣ್ಯಾತಿಗಣ್ಯರು ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು ಪಾಲ್ಗೊಂಡಿರುವುದು ಚಿತ್ತಾರ ತಂಡಕ್ಕೆ ಇನ್ನಷ್ಟು ಉತ್ತೇಜನ ನೀಡಿದ್ದು, `ಕರ‍್ಸ್ಕನ್ನಡದಲ್ಲಿ ಈ ಅಪರೂಪದ ಕಾರ್ಯಕ್ರಮ ಕೊಟ್ಯಾಂತರ ಕನ್ನಡಿಗರನ್ನು ತಲುಪಲಿದೆ. ಚಂದನವನದ ಪ್ರತಿಭೆಗಳನ್ನು ಗುರುತಿಸಲು ಮತ್ತು ಕನ್ನಡ ಚಿತ್ರರಂಗದ ಅಭೂತಪೂರ್ವ ಪರಂಪರೆಯನ್ನು ಎತ್ತಿ ಹಿಡಿಯಲು `ಚಿತ್ತಾರ ಸ್ಟಾರ್ ಅವಾರ್ಡ್ಸ್ವೇದಿಕೆಯಾಗಬೇಕೆಂಬ ಚಿತ್ತಾರ ತಂಡದ ಆಶಯ ಈಡೇರಿದ್ದು, ಸ್ಯಾಂಡ್‌ಲ್‌ವುಡ್‌ನಲ್ಲಿರುವ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ, ಪ್ರಶಂಸಿಸಲಾಗಿದೆ. `ಚಿತ್ತಾರ ಸ್ಟಾರ್ ಅವಾರ್ಡ್ಸ್ಕಾರ್ಯಕ್ರಮ ಜಾಗತಿಕ ಮಟ್ಟದಲ್ಲಿ ಚಂದನವನದ ಅಭೂತಪೂರ್ವ ಸಾಧನೆಗೆ ಕನ್ನಡಿಯಾಗಿದ್ದು, ಇಲ್ಲಿನ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸಿ, ಸಂಭ್ರಮಿಸಿ, ಬೆಸೆಯುವಲ್ಲಿ ಸಫಲವಾಗಿತ್ತು.  ಈ ಅಪರೂಪದ ಕಾರ್ಯಕ್ರಮ ರಾಜ್ಯದ ಜನ ಮೆಚ್ಚಿದ ಟೀವಿ ವಾಹಿನಿಯಾದ ಕಲರ‍್ಸ್ ಕನ್ನಡದಲ್ಲಿ ಇಂದು (06/07/2024) 5ಕ್ಕೆ (ರೆಡ್ ಕಾರ್ಪಟ್) ಮತ್ತು ನಾಳೆ (ರವಿವಾರ /07/07/20244ಕ್ಕೆ(ಸಂಪೂರ್ಣ ಕಾರ್ಯಕ್ರಮ) ಪ್ರಸಾರವಾಗಲಿದೆ.  ಚಿತ್ತಾರ ತಾರೆಗಳ ಸಂಭ್ರಮದಲ್ಲಿ ನೀವು ಭಾಗಿಯಾಗಿ.

 

 

 

 

 

 

 

 

Share this post:

Related Posts

To Subscribe to our News Letter.

Translate »