ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಈಗಾಗಲೇ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಈ ಬಾರಿಯ ಲೋಕಸಭಾ ಚುನಾವಣೆಗೆ ದೊಡ್ಮನೆಯ ಸೊಸೆ ಕೂಡ ಸ್ಪರ್ಧೆ ಮಾಡುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಗೀತಾ ಶಿವರಾಜ್ ಕುಮಾರ್.
ಇದನ್ನೂ ಓದಿ ತಮಿಳು, ಮಲಯಾಳಂ ಚಿತ್ರರಂಗಗಳಿಗೆ ಕೆಆರ್ ಜಿ ಸ್ಟುಡಿಯೋಸ್ ಪಾದಾರ್ಪಣೆ
ಗೀತಾ ಶಿವರಾಜ್ ಕುಮಾರ್ ಅದಾಗಲೇ ಹಲವು ವರ್ಷಗಳಿಂದ ರಾಜಕೀಯ ರಂಗದಲ್ಲಿ ಸಕ್ರೀಯವಾಗಿದ್ದಾರೆ. ಶಿವಣ್ಣ ಅವರಿಗೂ ಪಕ್ಷಗಳು ಅನೇಕ ಬಾರಿ ಮನವಿ ಮಾಡಿಕೊಂಡಿದ್ದಾರೆ. ಶಿವಣ್ಣ ರಾಜಕೀಯಕ್ಕೆ ಬರುತ್ತಾರೆ ಎಂದರೆ ಕ್ಷೇತ್ರಗಳನ್ನೇ ಬಿಟ್ಟುಕೊಡಲಿವೆ ರಾಜಕೀಯ ಪಕ್ಷಗಳು. ಆದರೆ ಶಿವಣ್ಣ ರಾಜಕೀಯ ಅಖಾಡಕ್ಕೆ ಸ್ಪರ್ಧಿಯಾಗಿ ನುಗ್ಗಲು ಮನಸ್ಸು ಮಾಡುತ್ತಿಲ್ಲ. ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿರುವ ಶಿವಣ್ಣ, ರಾಜಕಾರಣದಲ್ಲಿ ಇರುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ ಧ್ರುವ ಸರ್ಜಾ ಮನೆಯಲ್ಲಿ ಮಗನಿಗೆ ಮಗಳೇ ತಾಯಿ : ಹಯಗ್ರೀವನನ್ನು ಮಲಗಿಸುವ ರುದ್ರಾಕ್ಷಿ
ರಾಜಕಾರಣ ಹಾಗೂ ತಮ್ಮ ಪತ್ನಿ ಬಗ್ಗೆ ಮಾತನಾಡಿದ ಶಿವಣ್ಣ, ನಾನು ರಾಜಕೀಯಕ್ಕೆ ಬರುವುದಿಲ್ಲ. ಆದರೆ ಪತ್ನಿ ಸಂಸದರಾಗಲಿ ಎಂಬ ಆಸೆ ಇದೆ. ಗೀತಾ ಸಂಸದರಾಗುವ ಮೂಲಕ ಮಹಿಳೆಯರಿಗೆ ಮಾದರಿಯಾಗಲಿ. ಒಬ್ಬ ಪತಿಯಾಗಿ ನಾನು ಗೀತಾಳನ್ನು ಸಪೋರ್ಟ್ ಮಾಡುತ್ತೇನೆ. ಶಿವಮೊಗ್ಗದಲ್ಲಿ ಗೀತಾ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಪ್ರಚಾರದ ಕಡೆಗೆ ಗಮನ ಹರಿಸಿಲ್ಲ. ಕೆಲಸಗಳ ಬಗ್ಗೆ ಜನರೊಂದಿಗೆ ಇದ್ದರೆ ಸಾಕು ಎಂದು ಪತ್ನಿಯ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ ಶರಣ್ ಅಭಿನಯದ ಬಹು ನಿರೀಕ್ಷಿತ “ಛೂ ಮಂತರ್” ಚಿತ್ರ ಏಪ್ರಿಲ್ 5 ರಂದು ತೆರೆಗೆ. .
ಇದೇ ವೇಳೆ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಶಿವಮೊಗ್ಗ ಸ್ಪರ್ಧೆ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವಕಾಶ ಸಿಕ್ಕರೆ ಖಂಡಿತ ಸ್ಪರ್ಧೆ ಮಾಡುತ್ತೇನೆ. ಸದ್ಯಕ್ಕೆ ಬಂಗಾರ ಧಾಮ ಮೂಲಕ ಈಗಾಗಲೇ ಸಾಮಾಜಿಕ ಕೆಲವನ್ನು ಮಾಡುತ್ತಿದ್ದೇನೆ. ರಾಜಕೀಯ ಕ್ಷೇತ್ರವನ್ನು ಸೇವಾ ಕ್ಷೇತ್ರವೆಂದು ನಾನು ಪರಿಗಣಿಸಿದ್ದೇನೆ. ಹೀಗಾಗಿಯೇ ಜನರ ಮಧ್ಯೆ ಇರಬೇಕು ಎಂದು ಈಗಾಗಲೇ ನಾನು ಜಿಲ್ಲೆಯಲ್ಲಿ ಓಡಾಟ ನಡೆಸಿದ್ದೇನೆ ಎಂದಿದ್ದಾರೆ.