Left Ad
ಅಮೆರಿಕದ ಕಡಲ ಕಿನಾರೆಯಲ್ಲಿ ಶಿವಣ್ಣ & ಗೀತಕ್ಕ ಓಡಾಟ - Chittara news
# Tags

ಅಮೆರಿಕದ ಕಡಲ ಕಿನಾರೆಯಲ್ಲಿ ಶಿವಣ್ಣ & ಗೀತಕ್ಕ ಓಡಾಟ

ಚಿಕಿತ್ಸೆಗೆಂದು ಅಮೆರಿಕಗೆ ಹೋಗಿರುವ ಶಿವಣ್ಣ ಅವರು ಚೇತರಿಸಿಕೊಳ್ತಿದ್ದಾರೆ. ಶಿವಣ್ಣ ಅಭಿಮಾನಿಗಳು ಖುಷಿಯಾಗುವಂತಹ ಮಾಹಿತಿಯನ್ನು ಗೀತಾ ಶಿವರಾಜ್​ಕುಮಾರ್ ಹಂಚಿಕೊಂಡಿದ್ದಾರೆ.ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಶಿವಣ್ಣ ಅವರು ತಾವು ಉಳಿದುಕೊಂಡಿರುವ ನಿವಾಸದ ಹತ್ತಿರ ಇರುವ ಬೀಚ್​​​ಗೆ ಭೇಟಿ ನೀಡಿದ್ದಾರೆ. ಅಲ್ಲಿ ವಾಯುವಿಹಾರ ನಡೆಸಿ ಕುಟುಂಬದ ಜೊತೆ ಕಾಲ ಕಳೆದಿದ್ದಾರೆ. ಆ ಕ್ಷಣವನ್ನು ಗೀತಕ್ಕ ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ. ಕೆಲವು ಫೋಟೋಗಳನ್ನು ಅಭಿಮಾನಿಗಳ ಜೊತೆ ಗೀತಕ್ಕ ಹಂಚಿಕೊಂಡಿದ್ದಾರೆ. ಶಿವಣ್ಣ ಕೂಡ ಗೀತಕ್ಕ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಶಿವಣ್ಣ ಅವರಿಗೆ ಕ್ಯಾನ್ಸರ್​​ ಕಾಡಿತ್ತು. ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕ್ಯಾನ್ಸರ್​ಗೆ ಸರ್ಜರಿ ಮಾಡಿಸಿಕೊಂಡಿರುವ ಅವರು ಆರೋಗ್ಯದಲ್ಲಿ ಚೇತರಿಕೆ ಕಾಣ್ತಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಆರೋಗ್ಯದ ಬಗ್ಗೆ ವಿಡಿಯೋ ಮಾಡಿದ್ದ ಶಿವಣ್ಣ, ನಾನು ಆರೋಗ್ಯವಾಗಿದ್ದೇನೆ. ವೈದ್ಯರು ಮೊದಲು ಒಂದು ತಿಂಗಳು ನಿಧಾನವಾಗಿ ಇರಬೇಕು ಎಂದು ಹೇಳಿದ್ದಾರೆ. ಆ ಮೇಲೆ ಬೇಕಾದರೆ ನೀವು ಮೊದಲಿನಂತೆ ಏನು ಬೇಕಾದರೂ ಮಾಡಿ ಎಂದಿದ್ದಾರೆ. ಐ ವಿಲ್​ ಬಿ ಬ್ಯಾಕ್. ಶಿವಣ್ಣ ಆವಾಗ ಹೇಗಿದ್ದನೋ ಈಗ ಅದಕ್ಕಿಂತ ಡಬಲ್ ಪವರ್ ಇದ್ದೇ ಇರುತ್ತೆ. ಡ್ಯಾನ್ಸ್​, ಫೈಟ್, ಲುಕ್​ ಎಲ್ಲದರಲ್ಲೂ ಇರುತ್ತೆ. ಮತ್ತೆ ನೀವು ನೋಡುತ್ತೀರಾ. ನಿಮ್ಮ ಪ್ರೀತಿ ವಿಶ್ವಾಸ ಯಾವಾತ್ತೂ ಮರೆಯಲ್ಲ, ನಿಮ್ಮ ಆಶೀರ್ವಾದ ಇರುವವರೆಗೂ ನಾನು ಖುಷಿಯಾಗಿ ಇರುತ್ತೇನೆ ಎಂದಿದ್ದಾರೆ.

ಸದ್ಯ ಅಮೆರಿಕಾದಲ್ಲಿ ಗೀತಾ, ಶಿವಣ್ಣ, ನಿವೇದಿತಾ ಜೊತೆಗೆ ಆತ್ಮೀಯರು ಜೊತೆಗಿದ್ದಾರೆ. ವಿಶ್ರಾಂತಿಯ ನಡುವೆಯೇ ಹಾಗೇ ಒಂದು ರೌಂಡ್‌ ಕಡಲ ತೀರದಲ್ಲಿ ಸಮಯ ಕಳೆದಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣರ ಚಿತ್ರವನ್ನು ಗೀತಕ್ಕ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿರುವುದನ್ನು ಕಂಡು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

Spread the love
Translate »
Right Ad