ಹೊಸಬರ ತಂಡಕ್ಕೆ ನಾವಿಕನಾಗಿ ‘ಕಾಂತಾರ’ ಎಡಿಟರ್.
ಕನ್ನಡದ ಬ್ಲಾಕ್ ಬಸ್ಟರ್ ‘ಕಾಂತಾರ’ ಸಿನಿಮಾದ ಆನ್ ಲೈನ್ ಎಡಿಟರ್ (ಸ್ಪಾಟ್ ಎಡಿಟರ್) ಆಗಿ ಕೆಲಸ ಮಾಡಿದ್ದ ಮಂಜುನಾಥ್ ಬಿ ನಾಗ್ಬಾ ಗರುಡ ಪುರಾಣ ಚಿತ್ರಕ್ಕೆ ಸಾರಥಿಯಾಗಿದ್ದಾರೆ. ಬಹುಪಾಲು ಹೊಸಬರನ್ನೆ ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಕಲನ, ನಿರ್ದೇಶನ ಮತ್ತು ಚಿತ್ರಕ್ಕೆ ನಾಯಕನಾಗಿ ಜವಾಬ್ದಾರಿ ಹೊತ್ತಿದ್ದಾರೆ ಮಂಜುನಾಥ್ ನಾಗ್ಬಾ. ಇವರಿಗೆ ಕಳೆದ ಐದು ವರ್ಷಗಳ ಹಿಂದೆ ಹೊಳೆದ ಕಥೆಯ ಒಂದು ಎಳೆಗೆ ಹೊಸ ರೂಪ ಕೊಟ್ಟು ಗರುಡ ಪುರಾಣ ಚಿತ್ರವನ್ನು ೨೭ ಫ್ರೇಮ್ಸ್ ಕ್ರಿಯೇಷನ್ಸ್ ಬ್ಯಾನರ್‌ನಡಿಯಲ್ಲಿ ಹೊರ ತರುತ್ತಿದ್ದಾರೆ.
ಎಂತೆAಥಾ ಶಿಕ್ಷೆ ಇರುತ್ತದೆ?
ಗರುಡ ಪುರಾಣ ಇದೊಂದು ಸಂಪೂರ್ಣ ಸಸ್ಪೆನ್ಸ್ ಕ್ರೆöÊಂ ಥ್ರಿಲ್ಲರ್ ಕಥೆ. ಚಿತ್ರದಲ್ಲಿ ಸರಣಿ ಕೊಲೆ, ಅದರ ತನಿಖೆ ಮತ್ತು ಪ್ರೇಮ ಕಥೆ ಮೂರು ಬೆರೆತು ಚಿತ್ರದ ಚಿತ್ರಕಥೆ ಸಾಗುತ್ತದೆ. ನಿರ್ದೇಶಕರು ಚಿತ್ರಕಥೆಯಲ್ಲಿ ನೈಜತೆಗೆ ಒತ್ತುಕೊಟ್ಟಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಕ್ರೆöÊಂನ ನೈಜ ಸ್ವರೂಪವನ್ನು ಗಂಭೀರವಾಗಿ ಹೇಳಿಕೊಂಡು ಸಾಗುವ ಕಥೆಗೆ ಗರುಡ ಪುರಾಣ ಎನ್ನುವ ಶೀರ್ಷಿಕೆಯೇ ಪ್ರೇಕ್ಷಕನ್ನು ಹಿಡಿದು ಕೂರಿಸುತ್ತದೆ ಎನ್ನುತ್ತಾರೆ. ಇದೇನು ಮಾಡಿದ ತಪ್ಪಿಗೆ ಸಿಗುವ ಶಿಕ್ಷೆಯಾ? ಎಂದು ಕೇಳಿದರೆ “ಇದು ಗರುಡ ಪುರಾಣವೇ, ಆದರೇ ನೀವು ನೋಡುವ ದೃಷ್ಠಿಕೋನದಲ್ಲಿ ಇಲ್ಲಾ” ಎಂದು ಮಾತು ಮುಗಿಸುತ್ತಾರೆ. ಅಂದರೇ ಈ ಗರುಡ ಪುರಾಣದಲ್ಲಿ ಹೊಸದೇನೋ ಹೇಳುವಂತೆ ಕಾಣಿಸುತ್ತದೆ. ಅದು ಚಿತ್ರದ ಟೀಸರ್ ನಲ್ಲೂ ಪ್ರತಿಬಿಂಬಿಸುತ್ತಿದೆ.
ಇನ್ನೂ ಒದಿ ಮಾತಿನಮನೆಯಲ್ಲಿ “chef ಚಿದಂಬರ”
ಕಲಾವಿದ, ಎಡಿಟರ್, ನಿರ್ದೇಶಕ
ನಾಯಕನಾಗಲು ಸಿನಿಮಾ ಇಂಡಸ್ಟಿçಗೆ ಬಂದ ನಿರ್ದೇಶಕ ಮಂಜುನಾಥ್ ತಮ್ಮ ಸಿನಿಮಾ ಕರಿಯರ್‌ಅನ್ನು ಸಹಾಯಕ ನಿರ್ದೇಶಕನಾಗಿ ಶುರುಮಾಡಿ ನಂತರ ಸಿನಿಮಾ ಎಡಿಟಿಂಗ್ ಕಲಿತು ಸಿನಿಮಾದಲ್ಲಿ ಸ್ಪಾಟ್ ಎಡಿಟಿಂಗ್ ಕೆಲಸವನ್ನು ಮಾಡಿ ತಮ್ಮ ಕನಸನ್ನು ನೆರವೇರಿಸಿಕೊಂಡಿದ್ದಾರೆ. ಈ ನಿರ್ದೇಶಕರಿಗೆ ಎಡಿಟಿಂಗ್ ಗೊತ್ತಿರುವುದರಿಂದ ಸಿನಿಮಾದ ಕಥೆಯಲ್ಲಿ ಮತ್ತು ಮೇಕಿಂಗ್‌ನಲ್ಲಿ ಹಿಡಿತವಿದೆ. ನಿರ್ದೇಶಕರು ಫೈನ್ ಆರ್ಟ್ಸ್ ಕಲಿತಿರುವುದು ಸಿನಿಮಾಗೆ ಪ್ಲಸ್ ಆಗಿದೆ. ಆ ಕಾರಣದಿಂದಲೇ ಸಿನಿಮಾದ ದೃಶ್ಯಗಳು ನೈಜತೆಯಂತೆ ಸೆರೆ ಹಿಡಿದಿದ್ದಾರೆ. ಸಿನಿಮಾದಲ್ಲಿ ಕಾಮಿಡಿ, ಫೈಟ್ ಎರಡೂ ಸಹಜ ರೀತಿಯಲ್ಲಿ ಚಿತ್ರಿಸಿರುವುದು ಈ ಕಲಾವಿದ ಎಡಿಟರ್ ಮತ್ತು ನಿರ್ದೇಶಕ ಮಂಜುನಾಥ್‌ರ ಟ್ಯಾಲೆಂಟ್. ಚಿತ್ರವನ್ನು ಸಿಂಧು ಕೆ.ಎಂ ರವರು ನಿರ್ಮಿಸಿದ್ದಾರೆ, ಸಹ ನಿರ್ಮಾಪಕರಾಗಿ ಬಿ.ಎಲ್. ಯೋಗೇಶ್ ಕುಮಾರ್‌ರವರು ಜೊತೆಯಾಗಿದ್ದಾರೆ ಛಾಯಾಗ್ರಹಣ ಸುನಿಲ್ ನರಸಿಂಹ ಮೂರ್ತಿ, ಸಂಗೀತ ನಿರ್ದೇಶನ ರಾಕೇಶ್ ಆಚಾರ್ಯ, ಪುನೀತ್ ಆರ್ಯ ರವರ ಸಾಹಿತ್ಯ, ಮಹೇಂದ್ರ ಗೌಡರವರ ಸಂಬಾಷಣೆ ಚಿತ್ರಕ್ಕಿದೆ. ಗರುಡ ಪುರಾಣ ಚಿತ್ರ ಬಿಡುಗಡೆಗೆ ಸಿದ್ಧವಿದ್ದು, ನವೆಂಬರ್‌ನಲ್ಲಿ ಬಿಡುಗಡೆಯಾಗುವ ಸಾದ್ಯತೆಯಿದೆ. ರಾಜ್ಯೋತ್ಸವದಲ್ಲಿ ಬಿಡುಗq ಮಾಡಲು ಚಿತ್ರತಂಡ ಉತ್ಸುಕತೆಯಲ್ಲಿದೆ.
ಇನ್ನೂ ಒದಿ ಕನಸು ಹೊತ್ತ ಕಂಗಳಲ್ಲಿ ಕಥೆಗಳು ತುಂಬಿದ್ದವು, ಯುವ ನಿರ್ದೇಶಕ ವೈಭವ್ ಜರ್ನಿ …
ಚಿತ್ರದ ತಾರಾಗಣದಲ್ಲಿ;- ನಾಯಕನಾಗಿ ಮಂಜುನಾಥ್. ಬಿ.ನಾಗ್ಬಾ., ದಿಶಾ ಶೆಟ್ಟಿ,. ಕೆಂಚಣ್ಣ, ರಾಜ್‌ಕುಮಾರ್, ಆಕಾಶ್ ವಾಗಮರೆ, ಚÀಲುವರಾಜ್, ಮಹೇಂದ್ರ ಗೌಡ, ಸಂತೋಷ್ ಕರ್ಕಿ, ಜಯಚಂದ್ರ, ಚನ್ನಕೇಶವ, ರಕ್ಷಿತ, ಮತ್ತು ಪ್ರದೀಪ್‌ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಇನ್ನೂ ಒದಿ ದಿ untold ಸ್ಟೋರಿ ಆಫ್ ಬಸರಿಕಟ್ಟೆ ,ನವೆಂಬರ್ 3 ಕ್ಕೆ ಬಿಡುಗಡೆಯಾಗಲಿದೆ
ನೂರಕ್ಕೆ ನೂರರಷ್ಟು ನಂಬಿಕೆ.
ಈ ಚಿತ್ರಕ್ಕೆ ಎಲ್ಲಾ ತಂತ್ರಜ್ಞರು ಮತ್ತು ಕಲಾವಿದರು ನೂರಕ್ಕೆ ನೂರರಷ್ಟು ಶ್ರಮ ಹಾಕಿ ಕೆಲಸ ಮಾಡಿದ್ದಾರೆ. ಈ ಚಿತ್ರ ನಮ್ಮೆಲ್ಲರಿಗೂ ಒಂದು ಹೆಗ್ಗುರುತಾಗುತ್ತದೆ ಅನ್ನುವುದು ನನ್ನ ನಂಬಿಕೆ, ನಮ್ಮ ನಿರ್ಮಾಪಕರು ನಮ್ಮ ತಂಡದ ಮೇಲೆ ಇಟ್ಟ ನಂಬಿಕೆಯನ್ನು ‘ಗರುಡ ಪುರಾಣ’ ಕಾಪಾಡುತ್ತದೆ ಅನ್ನುವುದು ನಮ್ಮೆಲ್ಲರ ವಿಶ್ವಾಸ.
– ಮಂಜುನಾಥ್ ನಾಗ್ಬಾ. ನಿರ್ದೇಶಕರು.