ತುಳುನಾಡಿನ ಇತಿಹಾಸದಲ್ಲಿ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೆರುಗಳ `ಗರಡಿ’ ಇತಿಹಾಸ ಪ್ರಸಿದ್ಧ ಗರಡಿಯಾಗಿದೆ. ಪ್ರಸ್ತುತ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ, ಕೊಡಗು ಜಿಲ್ಲೆಯಲ್ಲಿ ಸುಮಾರು 200ಕ್ಕು ಹೆಚ್ಚು ಗರಡಿಗಳಿವೆ. ಈಗಾಗಲೇ ಮುಂಬೈನಲ್ಲಿಯೂ ಒಂದು ಗರಡಿ ನಿರ್ಮಾಣಗೊಂಡಿದೆ. ಆದರೆ, ಭಟ್ರು ಹೇಳ ಹೊರಟಿರುವ `ಗರಡಿ’ಯ ಕಥೆ ಇದೇ ಎಂದಾದರೆ ನಿಮ್ಮ ಊಹೆ ತಪ್ಪು. ಕೋಟಿ ಚೆನ್ನಯ್ಯರ ಕಥೆಗೂ ಭಟ್ಟರ `ಗರಡಿ’ಗೂ ಯಾವುದೇ ಸಂಬ0ಧವಿಲ್ಲ. ಭಟ್ರು ಹೇಳ ಹೋರಟಿದ್ದು, ಸುಮಾರು ಎರಡು ದಶಕಗಳ ಹಿಂದಿದ್ದ `ಗರಡಿ’ ವೈಭವದ ಬಗ್ಗೆ. ಹಿಂದೆ ನಮ್ಮ ದೇಶದ ಬಹುತೇಕ ಹಳ್ಳಿಗಳಿಗೆ ಇನ್ನೇನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿಯೇ ಅಲ್ಲೊಂದು ಸುಮಾರಾಗಿರುವ ಕಟ್ಟಡ ಅದರ ಮೇಲೊಂದು ಕೇಸರಿ ಬಾವುಟ ಎದ್ದು ಕಾಣುತ್ತಿದ್ದಲ್ಲಿ ಆ ಊರಿನಲ್ಲಿ ಯಾವುದೇ ಕಳ್ಳಕಾಕರ ಭಯವಿಲ್ಲ. ಆ ಊರಿನ ಹೆಣ್ಣುಮಕ್ಕಳು ನಿರ್ಭಿಡೆಯಾಗಿ ಯಾವ ಹೊತ್ತಿನಲ್ಲಾದರೂ ಓಡಾಡಬಹುದು. ಅಲ್ಲಿ ಯಾವುದೇ ಪುಂಡ ಪೋಕರಿಗಳ ಕಾಟವಿರುವುದಿಲ್ಲ ಎಂಬ ಭರವಸೆಯನ್ನು ಮೂಡಿಸುತ್ತಿದ್ದವು. ಅರೇ, ಒಂದು ಕಟ್ಟಡದಿಂದಾಗಿ ಇಷ್ಟೊಂದು ಸಾಮಾಜಿಕ ಬದಲಾವಣೆಯೇ ಎಂದು ತಿಳಿದಲ್ಲಿ, ಆ ಕಟ್ಟಡ ಸಾಮ್ಯಾನ್ಯ ಕಟ್ಟಡವಾಗಿರದೇ, ಅದನ್ನು ಗರಡಿ ಮನೆ ಎಂದು ಕರೆಯಲಾಗುತ್ತಿತ್ತು. ಇಂಥಹ ಗರಡಿ ಮನೆಯ ಕಥೆಯನ್ನು ಕಮರ್ಶಿಯಲ್ ಆಗಿ ಪ್ರೇಕ್ಷಕನ ಮುಂದಿಡುವ ಪ್ರಯತ್ನ ಭಟ್ಟರದ್ದು.
ಇದನ್ನೂ ಓದಿ: ಚೀತಾ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಎದುರು ನಾಯಕಿಯಾಗಿ ಮೇಘಾ ಶೆಟ್ಟಿ ನಟಿಸಿದ್ದಾರೆ.
ಸಾಕಷ್ಟು ಅಡ್ದಿ ಆತಂಕಗಳ ನಡುವೆಯೂ ಒಂದಷ್ಟು ಬೆರಳಣಿಕೆಯ ಜನರು ಇಂದಿಗೂ ಗರಡಿ ಮನೆಗಳು ಹಾಗೂ ಕುಸ್ತಿ ಕ್ರೀಡೆಯನ್ನು ಮುಂದಿನ ತಲೆಮಾರಿನ ಜನರಿಗೆ ಕೊಂಡೊಯ್ಯವ ನಿಟ್ಟಿನಲ್ಲಿ ಆಸ್ಥೆಯಿಂದ ಶ್ರಮವಹಿಸುತ್ತಿರುವ ಪರಿಣಾಮವಾಗಿ ಅಲ್ಲೊಂದು ಇಲ್ಲೊಂದು ಗರಡಿ ಮನೆಗಳು ಉಸಿರಾಡುತ್ತಿವೆ. ಈ ನಿಟ್ಟಿನಲ್ಲಿ ದೇಸಿ ಕ್ರೀಡೆಯ ಬಗ್ಗೆ ಬೆಳಕು ಚೆಲ್ಲುವ ಗರಡಿ ಮನೆಗಳ ಕುರಿತು ಹೇಳುವ ಚಿತ್ರ ತಂಡದ ಒತ್ತಾಸೆ ಮೆಚ್ಚುವಂಥದ್ದೆ. ಆದರೆ ಆ ಕಥೆಯೊಳಗೆ ಅನಾವಶ್ಯಕ ಹೊಡೆದಾಟಗಳು, ಮನಸ್ಸಿಗೆ ಹತ್ತಿರವಾಗದ ಪ್ರೇಮ್ ಕಹಾನಿ.. ಬಿಡಿ ಬಿಡಿಯಾಗಿ ಸೇರಿಕೊಂಡಾದ ಪ್ರೇಕ್ಷಕ ಮೊಬೈಲ್ ಹೊಕ್ಕಿ ಬಿಡುತ್ತಾನೆ! ಎಂದಿನ0ತೆ ಭಟ್ಟರ ತುಂಟತನ, ಅಸಾಧಾರಣ ಪ್ರೇಮ-ಪ್ರಣಯ-ವಿರಹ.. ಹೀಗೆ `ಭಟ್ರ style’ ಚಿತ್ರವನ್ನು ಮನಸ್ಸಲ್ಲಿಟ್ಟುಕೊಂಡು ಹೋದರೆ ನಿರಾಸೆ ಖಂಡಿತಾ. ಈಗಲೂ ಸ್ವಲ್ಪ ಹಿರಿಯರನ್ನು ಕೇಳಿದಲ್ಲಿ, ಗರಡಿ ಮನೆಯಲ್ಲಿ ಸಿಗುವ ಆನಂದ ಆಧುನಿಕ ಜಿಮ್‌ಗಳಲ್ಲಿ ಖಂಡಿತವಾಗಿಯೂ ಸಿಗಲು ಸಾಧ್ಯವೇ ಇಲ್ಲ. ಗರಡಿ ಮನೆಯಲ್ಲಿ ದೈವೀಕ ಭಾವನೆಯ ಆಯಸ್ಕಾಂತೀಯ ಗುಣವಿದ್ದು ಅಲ್ಲಿ ನಿರಂತರವಾಗಿ ಅಭ್ಯಾಸ ಮಾಡುವ ಮಜವೇ ಬೇರೆ. ಅರಿಶಿಣ, ಕುಂಕುಮ, ತುಪ್ಪ ಮಿಶ್ರಿತ ಮಣ್ಣಿನ ಘಮಲಿನಲ್ಲಿ ಮಿಂದೆದ್ದರೆ ಮನಸ್ಸಿಗೆ ಮುದನೀಡುತ್ತಿದ್ದದ್ದಲ್ಲದೇ, ಹೊಸ ಹುರುಪು ಕೂಡಾ ಬರುತ್ತಿತ್ತು. ಆ ಮುದವನ್ನು, ಮಜವನ್ನು, ಹುರುಪನ್ನು `ಗರಡಿ’ ಸಿನಿಮಾದಲ್ಲೂ ನಿರೀಕ್ಷಿಸುವುದೂ ತಪ್ಪಾಗಬಹುದು. ಏಕೆಂದರೆ `ಗರಡಿ’ ಇಲ್ಲಿ ಹಲವು ಆಯಾಮದಲ್ಲಿ `ಹರಡಿ’ಕೊಂಡಿದೆ!
ಇದನ್ನೂ ಓದಿ: ಸಿದ್ದಲಿಂಗಯ್ಯ ಅವರ ಸಿನಿಮಾಗಳನ್ನು ನೆನಪಿಸುವ “ರಾಜಯೋಗ” ಚಿತ್ರ 17ಕ್ಕೆ ತೆರೆಗೆ
ಯೋಗರಾಜ್ ಭಟ್ಟರ ಸಿನಿಮಾಗಳೆಂದರೆ `ಮಳೆ’ಯಲ್ಲಿ ತೋದಷ್ಟು ಮುದ ನೀಡುವ ಪ್ರೇಮ, ಸಿನಿಮಾ ಮುಗಿದ ಮೇಲೂ ಕಚಗುಳಿಯಿಡುವ ಫಿಲಾಸಫಿ, ಮಾನವ ಸಂಬ0ಧಗಳ ನಡುವಿನ ಬಯ್ದಾಟ-ತೋಯ್ದಾಟ.. ಎಲ್ಲವೂ ಇರುತ್ತದೆ. ಅಂತಹ ಭಟ್ಟರು ಆ್ಯಕ್ಷನ್ ಸಿನಿಮಾವನ್ನು ನಿರ್ದೇಶಿಸಲು ಹೋಗಿ ಅಲ್ಲಲ್ಲಿ ಎಡವಿದ್ದಾರೆ. ಹಾಗೆಂದು, ಒಂದೇ ತರದ ಚಿತ್ರಗಳನ್ನೇ ಮಾಡುತ್ತಿರಬೇಕೆ? ಖಂಡಿತಾ ಇಲ್ಲ ಆದರೆ ಚಿತ್ರ ನೋಡಿದಾಗ `ಮೊದ್ಲಿನ ಭಟ್ರೆ’ ವಾಸಿ ಅನ್ನಿಸೋದು ಸುಳ್ಳಲ್ಲ. ತಮ್ಮ ಸಿನಿಮಾ ಕೃಷಿಯಲ್ಲಿ ಹೊಸ ಜಾನರ್ ಅನ್ನು try ಮಾಡಿರುವ ಭಟ್ಟರ ಕ್ರಿಯಾಶೀಲತೆಗೆ ಮೆಚ್ಚಲೇ ಬೇಕು. ಆದರೆ, ಅವರಂದುಕೊ0ಡ ಕಥೆಯನ್ನು ಜನರಿಗೆ ಕಮರ್ಶಿಯಲ್ ಆಗಿ ತಲುಪಿಸುವ ಧಾವಂತದಲ್ಲಿ ಒಂದು ಅದ್ಭುತ ಕಥೆಯನ್ನು ಸಹಜವಾಗಿ ನೇರವಾಗಿ ಪ್ರೇಕ್ಷಕರ ಮುಂದಿಡುವಲ್ಲಿ ಎಡವಿದ್ದಾರೆ. `ಗರಡಿ’ಯ ಕುಸ್ತಿ ಪೈಲ್ವಾನನೊಬ್ಬನ ಮರ್ಡರ್‌ನೊಂದಿಗೆ `ಗರಡಿ’ ಬಾಗಿಲು ಇಂಟ್ರೆಸ್ಟಿ0ಗ್ ಆಗಿ ತೆರೆದುಕೊಳ್ಳುತ್ತದೆ. ರಾಣೆ (ರವಿಶಂಕರ್) ಕುಟುಂಬ ಗರಡಿ ಮನೆಯನ್ನು ಯಶಸ್ವಿಯಾಗಿ ಮುಂದುವರಿಸಿಕೊ0ಡು ಬರುತ್ತಿರುತ್ತದೆ. ಇದೇ ಗರಡಿಯ ಲೀಡರ್ ಕೋರಾಪಿಟ್ ರಂಗಪ್ಪ (ಬಿ.ಸಿ.ಪಾಟೀಲ್). ರಂಗಪ್ಪನ ಸ್ನೇಹಿತನ ಮಕ್ಕಳು ಶಂಕರ (ದರ್ಶನ್) ಮತ್ತು ಸೂರಿ (ಸೂರ್ಯ). ತನ್ನ ಕುಚುಕು ಗೆಳಯನ ಮರ್ಡರ್ ಆದ ಬಳಿಕ ಕೋರಾಪಿಟ್ ರಂಗಪ್ಪ ಅನಾಥರಾದ ಶಂಕರ ಮತ್ತು ಸೂರಿಯನ್ನು ಸಾಕಿ ಸಲಹಿ ಶಂಕರನನ್ನು ಕುಸ್ತಿ ಪಟುವಾಗಿ ಮಾಡುತ್ತಾನೆ. ಆದರೆ ಒಂದು ನಿರ್ದಿಷ್ಟ ಕಾರಣಕ್ಕೆ ಶಂಕರ ಊರು ಬಿಡುವ ಪರಿಸ್ಥಿತಿ ಬರುತ್ತದೆ. ಶಂಕರ ಮತ್ತು ಸೂರಿ `ಗರಡಿ’ ಮಕ್ಕಳಾದರೂ ಅಖಾಡಕ್ಕೆ ಕಾಲಿಡುವಂತಿಲ್ಲ ಎಂಬ ರಂಗಪ್ಪನ ಕಟ್ಟಪ್ಪಣೆ ಚಿತ್ರದ ಅಸಲಿ ಒನ್‌ಲೈನ್. ಹಾಗಿದ್ದರೆ, ರಂಗಪ್ಪ ಶಂಕರನನ್ನು ಕುಸ್ತಿ ಪಟು ಮಾಡಿದ್ದಾದ್ದರೂ ಯಾಕೆ ಎಂದು ಲಾಜಿಕ್ ಕೇಳಬಾರದು, ಸುಮ್ಮನೆ ನೀವಂದುಕೊ0ಡ0ತೆಯೇ ಸಾಗುವ ಕಥೆಯನ್ನು ನೋಡುತ್ತಲೇ ಸಾಗಬೇಕು!
ಇದನ್ನೂ ಓದಿ: ನವರಸನ್ ಸಾರಥ್ಯದ MMB legacy ಗೆ ಮೊದಲ ವರ್ಷದ ಸಡಗರ .
ಚಿತ್ರ ನೋಡುತ್ತಿದ್ದರೆ ಚಿತ್ರದ ಕಥೆ ಬಹುಶಃ ಬಿ.ಸಿ.ಪಾಟೀಲರಿಗಾಗಿಯೇ ಸಿದ್ಧವಾಗಿದ್ದು ಎಂದೆನಿಸಿ ಬಿಡುತ್ತದೆ. ಓಪನಿಂಗ್, ಇಂಟರ್‌ವಲ್, climax.. ಹೀಗೆ ಚಿತ್ರದುದ್ದಕ್ಕೂ `ಪಟ್ಟು’ ಹಾಕುವ ಪಾಟೀಲರು ಸಂಭಾಷಣೆಯಲ್ಲಿ ಫುಲ್ ಮಾರ್ಕ್ಸ್ ತೆಗೆದುಕೊಳ್ಳುತ್ತಾರೆ. ಆದರೆ ಸಹಜ ಅಭಿನಯದಲ್ಲಿ? ಪಾಟೀಲರ ಅಳಿಯ ಸುಜಯ್ ಅವರಿಗೆ ಒಂದು ಪ್ರಮುಖ ಪಾತ್ರವಿದ್ದ ಮಾತ್ರಕ್ಕೆ `ಇದೊಂದು ಕುಟುಂಬ ರಾಜಕಾರಣದ ಸಿನಿಮಾ’ ಎಂದು ಊಹಿಸಬಾರದು, ಕಾರಣ ಸುಜಯ್ ಸುಲಲಿತವಾಗಿ ಅಭಿನಯಿಸಿ ಭಟ್ಟರನ್ನು ತಕ್ಕ ಮಟ್ಟಿಗೆ ಬಚಾವ್ ಮಾಡಿದ್ದಾರೆ. ಪೈಲ್ವಾನ್ ಆಗಲು ತೆರೆಯ ಹಿಂದೆ ಸುಜಯ್ ಪಟ್ಟಿರುವ ಶ್ರಮ ತೆರೆಯೆ ಮೇಲೆ ಕಾಣುತ್ತದೆ. ಇಷ್ಟೆಲ್ಲಾ ಇದ್ದರೂ, ಒಟ್ಟಾರೆಯಾಗಿ ಚಿತ್ರ ನೋಡಿದಾಗ ಚಿತ್ರದ ನಿರೂಪಣೆ ಒಂದು ದೇಸಿ ಕ್ರೀಡೆಯ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕತೆ ನೋಡುಗನನ್ನು ಮೊಬೈಲ್ ನೊಡದೇ ಇರುವಂತೆ ತನ್ನೊಳಗೆ ಸೆಳೆದುಕೊಳ್ಳುವಲ್ಲಿ ಸೋಲುತ್ತದೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಸಿನಿಮಾದ ಬಹುಪಾಲು ಚಿತ್ರೀಕರಣ ನಡೆದಿದ್ದು, ಅಲ್ಲಿನ ಪರಿಸರದ ಜೊತೆಗೆ ಅಲ್ಲಿನ ಪ್ರಾದೇಶಿಕ ಭಾಷೆಯ ಸ್ಲಾಂಗ್ ಅನ್ನು ಬಳಸಿದ್ದರೆ ಚಿತ್ರ ಇನ್ನಷ್ಟು ಹತ್ತಿರವಾಗುತ್ತಿತ್ತು. ಚಿತ್ರತಂಡ `ಲೋಕಲ್ ಈಸ್ ಆಲ್‌ವೇಸ್ ಗ್ಲೋಬಲ್’ ಎಂಬ ಸೂತ್ರವನ್ನು ಮರೆತು ಕೆಲಸ ಮಾಡಿದ್ದಾರೆ. ಇದರಿಂದ ಚಿತ್ರಕ್ಕೆ ಸಿಗಬೇಕಾಗಿದ್ದ ಪ್ರಾದೇಶಿಕತೆಯ ನ್ಯಾಯ ಮಿಸ್ ಆಗಿ, ಹಳೆ ಮೈಸೂರು ಭಾಗದ ಕನ್ನಡದಿಂದ ಎಲ್ಲರನ್ನೂ ತಲುಪುವ ಐಡಿಯಾ ಕೈ ಕೊಟ್ಟಿದೆ.
ಇದನ್ನೂ ಓದಿ: “ದ ಜಡ್ಜ್ ಮೆಂಟ್” ಬಗ್ಗೆ ತಂತ್ರಜ್ಞರ ಮಾತು .
ಒಂದು ದೊಡ್ಡ ಬ್ರೇಕ್‌ನ ನಿರೀಕ್ಷೆಯಲ್ಲಿದ್ದ ನಟ ಯಶಸ್ ಸೂರ್ಯ ತಮ್ಮ ನಟನೆಯಲ್ಲಿ ಯಶ ಸಾಧಿಸಿದ್ದಾರೆ. ವಿದ್ಯಾಭ್ಯಾಸ ವಂಚಿತ ಅನಾಥ, ಹಿಡಿ ಪ್ರೀತಿಗಾಗಿ ಕಾಯುವ ಪ್ರೇಮಿ, ಬದುಕಲ್ಲಿ ಫೈಲ್ ಆದ್ರೂ ಹರಿವ ನದಿಯ ಸುಳಿಯಂತೆ ಅಗೋಚರವಾಗಿ ಬೆಳೆದು ನಿಲ್ಲುವ ಪೈಲ್ವಾನ.. ಹೀಗೆ ಹಲವು ಶೇಡ್‌ನಲ್ಲಿ ಸೂರ್ಯ ಪ್ರಜ್ವಲಿಸಿದ್ದಾರೆ. ಎಂದಿನAತೆ ನಟ ದರ್ಶನ್ ಅವರ ಅಭಿಮಾನಿಗಳಿಗೆ ಇಷ್ಟವಾಗುವಂತಹ ಡೈಲಾಗ್, ಹೊಡೆದಾಟದೊಂದಿಗೆ climaxನಲ್ಲಿ `ಹಾರಾಡು’ತ್ತಾರೆ. ಚಿತ್ರವನ್ನು ಪ್ರೇಕ್ಷರಿಗೆ ತಲುಪಿಸಲು `ಬಾಸ್’ ಎಷ್ಟು ಸಹಾಯ ಮಡುತ್ತಾರೆ ಕಾದುನೋಡಬೇಕಿದೆ. ನಾಯಕ ನಟಿ ಸೋನಾಲ್ ಮಾಂತೆರೋ ಅವರಿಗೆ ಚಾಲೆಂಜಿAಗ್ ಅನ್ನಿಸುವಂತಹ ಪಾತ್ರ ಇಲ್ಲಿಲ್ಲ. ಭಟ್ಟರ ಹಾಕಿಕೊಟ್ಟ ಬೇಲಿಯಲ್ಲಿ ಸೋನಾಲ್ ತಮ್ಮ ಪ್ರಯತ್ನ ಮಾಡಿದ್ದಾರೆ. ಕಲಾವಿದರಾಗಿ ರವಿಶಂಕರ್, ಧರ್ಮಣ್ಣ ಇಷ್ಟವಾಗುತ್ತಾರೆ ಕೆಲವೊಮ್ಮ ಕಷ್ಟವಾಗುತ್ತಾರೆ! ಚಿತ್ರದ ಟೈಟಲ್ ಸಾಂಗ್ ಇಷ್ಟವಾದಷ್ಟು ಉಳಿದ ಹಾಡುಗಳು ಹತ್ತಿರವಾಗುವುದಿಲ್ಲ. `ಹೊಡಿರೆಲೆ ಹಲಗಿ’ ಹಾಡು ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡರೂ ಚಿತ್ರದ ಓಘವನ್ನು ಹೆಚ್ಚಿಸುಲ್ಲಿ ವಿಫಲವಾಗುತ್ತದೆ. ಡ್ಯಾನ್ಸ್ ಮಾಸ್ಟರ್ ಅವರ ಕೆಲಸ `ಹರ್ಷ’ ಪಡಿಸುವುದಿಲ್ಲ. ಕಾಸ್ಟೂಮರ್ ಪುಟ್ಟರಾಜು ನಿಶ್ವಿಕಾ ಅವರ ಕಾಸ್ಟೂಮ್ ಇನ್ನಷ್ಟು `ಸಹಿಸೆಬೆಲ್’ ಮಾಡಬಹುದಿತ್ತು. ಹರಿಕೃಷ್ಣ ಅವರ ಸಂಗೀತದಲ್ಲಿ ಅಂಥಹ ವಿಶೇಷತೆ ಏನಿಲ್ಲ. ನಿರಂಜನ್ ಬಾಬು ಕ್ಯಾಮರ ಕೈ ಚಳಕ ಸೂಪರ್. ಎಡಿಟರ್ ಸುರೇಶ್ ಆರಸ್ ತಮ್ಮ ಕೈಲಾದ `ಕತ್ತರಿ’ ಪ್ರಯೋಗ ಮಾಡಿದ್ದಾರೆ.
ಇದನ್ನೂ ಓದಿ: ಮಾಸ್ ಮಹಾರಾಜ ರವಿತೇಜ ನಟನೆಯ ‘ಈಗಲ್’ ಸಿನಿಮಾದ ಟೀಸರ್ ರಿಲೀಸ್.. ಜನವರಿ 13ಕ್ಕೆ ತೆರೆಗೆ
ಕೊನೆಯಲ್ಲಿ, `ಗರಡಿ’ ಸಿನಿಮಾ ನೋಡಿದ ಮೇಲೆ, ಕಮರ್ಶಿಯಲ್ ಸಿನಿಮಾವನ್ನು ನಿರಾಯಾಸವಾಗಿ ಮಾಡಿ `ಮುಗಿಸ’ಬಲ್ಲ ಭಟ್ಟರು, `ಮಳೆ-ಕಳೆ-ಬೆಳೆ’ಯನ್ನು ದೂರಕ್ಕಿಟ್ಟು `ತಿಥಿ’ಯಂತಹ ಲೋಕಮಾನ್ಯ ಚಿತ್ರಗಳ ಕಡೆಗೆ ಮಗ್ಗಲು ಬದಲಿಸಲು ಇದು ಪರ್ವಕಾಲ ಎಂದು ಪ್ರೇಕ್ಷಕ ಅಂದುಕೊಳ್ಳಬೇಕಾ?