Sandalwood Leading OnlineMedia

“ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಸಚಿವ ಹೆಚ್ ಸಿ ಮಹದೇವಪ್ಪ .

 

ವುಡ್ ಕ್ರೀಪರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ತಿಲಕ್ ಶೇಖರ್(ಉಗ್ರಂ ಖ್ಯಾತಿ) ನಾಯಕರಾಗಿ ನಟಿಸಿರುವ “ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ‌ಸಚಿವ ಹೆಚ್ ಸಿ ಮಹದೇವಪ್ಪ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಹಿರಿಯ ನಿರ್ದೇಶಕ ಎಸ್ ನಾರಾಯಣ್ ಹಾಗೂ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಪ್ರಭಾಕರ್, ಆನಂದ್ ಆಡಿಯೋ ಶ್ಯಾಮ್ ಅವರು ಸಹ ಸಮಾರಂಭಕ್ಕೆ ಆಗಮಿಸಿ ಯಶಸ್ಸನ್ನು ಹಾರೈಸಿದರು.

 

ಇನ್ನೂ ಓದಿ  ವರಮಹಾಲಕ್ಷ್ಮೀಗೆ ಜೇಮ್ಸ್ ಡೈರೆಕ್ಟರ್ ಹೊಸ ಸಿನಿಮಾ ಅನೌನ್ಸ್…’ಬರ್ಮ’ ಚಿತ್ರಕ್ಕೆ ಗಟ್ಟಿಮೇಳ ರಕ್ಷ್ ನಾಯಕ

ಈ ಹಿಂದೆ ನಾನು “ಭಾವಚಿತ್ರ” ಎಂಬ ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಮೂರನೇ ಚಿತ್ರ. ನಿರ್ದೇಶನದೊಂದಿಗೆ ನಟನೆ ಕೂಡ ಮಾಡಿದ್ದೇನೆ.‌ ತಿಲಕ್ ಅವರು “ಗ್ಯಾಂಗ್ ಸ್ಟರ್” ಆಗಿ, ನಾನು “ಫ್ರಾಂಕ್ ಸ್ಟರ್” ಆಗಿ ನಟಿಸಿರುವ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇದು ಯೂಟ್ಯೂಬರ್ ಒಬ್ಬನ ಕಥೆಯಾಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಸಚಿವರಿಗೆ ಹಾಗೂ ಗಣ್ಯರಿಗೆ ನನ್ನ ಧನ್ಯವಾದ ಎಂದರು ನಿರ್ದೇಶಕ ಹಾಗೂ ನಟ ಗಿರೀಶ್ ಕುಮಾರ್.

ಇನ್ನೂ ಓದಿ  *”Chef ಚಿದಂಬರ” ನಿಗೆ ನುರಿತ “chef” ಗಳಿಂದ ತರಭೇತಿ* .

ನಾನು “ಗ್ಯಾಂಗ್ ಸ್ಟರ್” ಆಗಿ ಕಾಣಿಸಿಕೊಂಡಿದ್ದೇನೆ. ಗಿರೀಶ್ ಕುಮಾರ್ ಒಳ್ಳೆಯ ಕಥೆ ಮಾಡಿದ್ದಾರೆ. ಚಿತ್ರ ಜನರಿಗೆ ಹತ್ತಿರವಾಗಲಿದೆ ಎಂದು ನಾಯಕ ತಿಲಕ್ ಶೇಖರ್ ತಿಳಿಸಿದರು.ನಾನು ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ ಹಾಗೂ ಚಿತ್ರದ ಪ್ರಮುಖಪಾತ್ರದಲ್ಲೂ ಅಭಿನಯಿಸಿದ್ದೇನೆ.‌ ಚಿತ್ರದಲ್ಲಿ ನಾನು‌ ಸಹ “ಗ್ಯಾಂಗ್ ಸ್ಟರ್” ಎಂದರು ಗಿರೀಶ್ ಬಿಜ್ಜಳ್.ನಾಯಕಿ ವಿರಾನಿಕ ಶೆಟ್ಟಿ ಸೇರಿದಂತೆ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಜಾನ್ ಕೆನಡಿ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಅಜಯ್ ಕುಮಾರ್ ಛಾಯಾಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ಇನ್ನೂ ಓದಿ    *”ಉತ್ತರಕಾಂಡ” ಚಿತ್ರದಲ್ಲಿ ಧನಂಜಯ್ “ಗಬ್ರು ಸತ್ಯ” ಡಾಲಿ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯಿತು ಪಾತ್ರ ಪರಿಚಯದ ಟೀಸರ್*

ತಿಲಕ್ , ಗಿರೀಶ್ ಕುಮಾರ್, ವಿರಾನಿಕ ಶೆಟ್ಟಿ, ಬಾಲ ರಾಜವಾಡಿ, ಗಿರೀಶ್ ಬಿಜ್ಜಳ್, ಹೊನವಳ್ಳಿ ಕೃಷ್ಣ, ಸಂಗೀತ ಅನಿಲ್, ಸುಂದರ್, ರತೀಶ್ ಕುಮಾರ್ , ಮಜಾಟಾಕೀಸ್ ಪವನ್, ಹನುಮಂತೇಗೌಡ, ಭವಾನಿ ಪ್ರಕಾಶ್ ಮುಂತಾದವರ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Share this post:

Related Posts

To Subscribe to our News Letter.

Translate »