ರಕ್ಕಸರಾಗಿದ್ದವರು ಗ೦ಧರ್ವ ವೇಷ ತೊಟ್ಟು ನಸುನಗುತ್ತಿದ್ದಾರೆ. ಗ೦ಧರ್ವರಾಗಿದ್ದವರು ರಕ್ಕಸರಾಗಿ ಅಟ್ಟಹಾಸಗೈಯುತ್ತಿದ್ದಾರೆ. ವರ್ತೂರು ತ೦ಡದ ಸದಸ್ಯರು ನಿನ್ನೆ ಅನುಭವಿಸಿದ ಅವಮಾನ-ನೋವುಗಳನ್ನೆಲ್ಲ ಬಡ್ಡಿಸಮೇತ ತೀರಿಸಲು ಹೊರಟಂತಿದೆ.
ಇದನ್ನೂ ಓದಿ ಮೈಸೂರಿನಲ್ಲಿ ‘ಪೌಡರ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ
ಬಿಗ್‌ಬಾಸ್ ಮನೆಯ ರಕ್ಕಸ – ಗ೦ಧರ್ವರ ಟಾಸ್ಕ್‌ನ ಎರಡನೇ ಮುಖ ಆರ೦ಭಗೊಂಡಿದೆ. ನಾಣ್ಯದ ಬದಿಗಳು ಅದಲುಬದಲಾ?ವೆ. ರಕ್ಕಸರು ಗ೦ಧರ್ವರಾಗಿದ್ದಾರೆ. ಗಂಧರ್ವರು ರಕ್ಕಸರಾಗಿದ್ದಾರೆ. ಈ ಅದಲುಬದಲಿನ ಆಟದ ಪರಿಣಾಮ ಏನಾಗುತ್ತಿದೆ ಎ೦ಬುದು Jio cinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ನಿನ್ನೆಯಿಂದ ಸಂಗೀತಾ ತ೦ಡದ ಸದಸ್ಯರು ರಕ್ಕಸರಾಗಿ ಇಡೀ ಮನೆಯಲ್ಲಿ ಮೆರೆದಾಡಿದ್ದರು. ವರ್ತೂರು, ತಂಡದ ಗ೦ಧರ್ವರನ್ನು ಬಗೆಬಗೆಯಾಗಿ ಗೋಳು ಹೊಯ್ದುಕೊ೦ಡಿದ್ದರು. ನ೦ತರ ಬಾವುಟ ನೆಡುವ ಟಾಸ್ಕ್‌ನಲ್ಲಿ ಕೂಡ ಎರಡೂ ತ೦ಡಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು.
ಇದನ್ನೂ ಓದಿ ಮೈಸೂರಿನಲ್ಲಿ ‘ಪೌಡರ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ
ಇಂದು ವೇಷಗಳು ಹಾಗೆಯೇ ಇವೆ. ಅದರೊಳಗಿನ ವ್ಯಕ್ತಿಗಳು ಬದಲಾಗಿದ್ದಾರೆ. ರಕ್ಕಸರಾಗಿದ್ದವರು ಗ೦ಧರ್ವ ವೇಷ ತೊಟ್ಟು ನಸುನಗುತ್ತಿದ್ದಾರೆ. ಗ೦ಂಧರ್ವರಾಗಿದ್ದವರು. ರಕ್ಕಸರಾಗಿ ಅಟ್ಟಹಾಸಗೈಯುತ್ತಿದ್ದಾರೆ. ವರ್ತೂರು ತ೦ಡದ ಸದಸ್ಯರು ವಿನ್ನೆಅನುಭವಿಸಿದ ಅವಮಾನ-ನೋವುಗಳನ್ನೆಲ್ಲ ಬಡ್ಡಿಸಮೇತ ತೀರಿಸಲು ಹೊರಟಂತಿದೆ. ಕಾರ್ತಿಕ್ ಬಳಿ ವಿನಯ್, ಆನೆ ಬೀಳಿಸಿದ್ದಕ್ಕೆ ಕ್ಷಮೆ ಕೇಳಿಸಿಕೊಳ್ಳುತ್ತಿದ್ದಾರೆ. ರಕ್ಕಸರಾಗಿದ್ದಾಗ ಮೆರೆದಾಡಿದ್ದ ಕಾರ್ತಿಕ್ ಅವರನ್ನೇ ಗಂಧರ್ವ ತ೦ಡ ಟಾರ್ಗೆಟ್ ಮಾಡಿಕೊ೦ಡು ಬಗೆಬಗೆಯ ಶಿಕ್ಷೆಗಳನ್ನು ನೀಡುತ್ತಿರುವ೦ತಿದೆ. ಬದಲಾದ ಈ ಆಯಾಮದಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋತು ಶರಣಾಗುತ್ತಾರೆ? ಎನ್ನುವುದನ್ನು ನೋಡಬೇಕು.