Left Ad
ಹುಡುಗರ ಎದೆ ನೋವಿಗೆ ಕಾರಣವಾಯ್ತು ಅನುಪಮಾ ಗೌಡ ಬ್ಯೂಟಿ. - Chittara news
# Tags

ಹುಡುಗರ ಎದೆ ನೋವಿಗೆ ಕಾರಣವಾಯ್ತು ಅನುಪಮಾ ಗೌಡ ಬ್ಯೂಟಿ.

ಕನ್ನಡದ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಇತ್ತೀಚೆಗೆ ಯೆಲ್ಲೋ ಕಲರ್‌ ಸ್ಯಾರಿಯಲ್ಲಿ ಫೋಟೋಶೂಟ್‌ ಮಾಡಿಸಿ ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ. ಸದಾ ಸೋಶಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿರುವ ನಟಿಯ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ

ಅಕ್ಕ ಧಾರಾವಾಹಿಯಲ್ಲಿ ಡಬಲ್  ಎಲ್ಲರ ಮನಸ್ಸು ಗೆದ್ದಿದ್ದ ಅನುಪಮಾ ಗೌಡ ಮತ್ತೆ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಸೀರೆಯುಟ್ಟು ಸಖತ್ ಆಗಿ ಕಾಣ್ತಾ ಇದ್ದಾರೆ. ಚೆಂದುಳ್ಳಿ ಚೆಲುವೆ ಇವರು ಎಂದಿದ್ದಾರೆ.

 

ಕಿರುತೆರೆ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಯೆಲ್ಲೋ ಕಲರ್‌ ಸೀರೆ ವಿತ್‌ ರೆಡ್‌ ಬಾರ್ಡರ್‌ ಡಿಸೈನ್‌ ಉಟ್ಟುಕೊಂಡು ಫೋಟೋಶೂಟ್‌ ಮಾಡಿಸಿದ್ದಾರೆ.  ಸದ್ಯ ಪೋಟೋಸ್ ವೈರಲ್ ಆಗಿದೆ.

 

ನಟಿ ಅನುಪಮಾ ಗೌಡ ಸೀರೆಯಲ್ಲಿ ಮಿಂಚಿದ್ದಾರೆ. ಮಹಾಲಕ್ಷ್ಮಿಯಂತೆ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆ ಗೈದಿದ್ದಾರೆ. ಯೆಲ್ಲೋ ಅಂಡ್ ರೆಡ್ ಸ್ಯಾರಿ ನಟಿಗೆ ಮ್ಯಾಚ್ ಆಗಿದೆ.

ಅನುಪಮಾ ಗೌಡ ಶೇರ್ ಮಾಡಿದ ಫೋಟೋಗಳಿಗೆ 20 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ನೈಸ್, ಸೂಪರ್, ಎದೆ ನೋವು ಬರುವಷ್ಟು ಚೆನ್ನಾಗಿ ಕಾಣ್ತಾ ಇದ್ದೀರಾ, ನೀವು ಯಾವಾಗಲೂ ಚಂದ ಎಂದು ಫ್ಯಾನ್ಸ್ ಹೇಳಿದ್ದಾರೆ.

ನಟಿ ಅನುಪಮಾ ಗೌಡ ಅವರಿಗೆ ಪ್ರವಾಸಕ್ಕೆ ಹೋಗೋದು ಅಂದ್ರೆ ತುಂಬಾ ಇಷ್ಟ ಅಂತೆ. ಆಗಾಗ ಟ್ರಿಪ್ ಹೋಗ್ತಾ ಇರ್ತಾರೆ. ಅಲ್ಲದೇ ಅವರಿಗೆ ಸೋಲೋ ಟ್ರಿಪ್ ಹೋಗಲು ಇನ್ನೂ ಇಷ್ಟವಂತೆ.

ಅನುಪಮಾ ಗೌಡ ಅವರು ಒಳ್ಳೆ ಸಿನಿಮಾ ಮಾಡಲು ಕಾಯ್ತಾ ಇದ್ದಾರಂತೆ. ಅಲ್ಲದೇ ಫೋಟೋಗ್ರಫಿ ಅಂದ್ರೂ ಅನುಪಮಾ ಅವರಿಗೆ ಇಷ್ಟ ಅಂತೆ. ಕ್ಯಾಮೆರಾ ಹಿಡಿದು ಪ್ರವಾಸಕ್ಕೆ ಹೋಗ್ತಾ ಇರ್ತಾರೆ.

ನಟಿ ಅನುಪಮಾ ಅಣ್ಣ ತಂಗಿ, ಅಕ್ಕ ಸೀರಿಯಲ್‌ಗಳ ಮೂಲಕ ಮಾತ್ರ ಜನಪ್ರಿಯತೆ ಪಡೆಯದೆ, ಹಳ್ಳಿ ದುನಿಯಾ, ಬಿಗ್‌ಬಾಸ್‌ ಸೀಸನ್‌ 5 ಹಾಗೂ ಬಿಗ್‌ಬಾಸ್‌ ಸೀಸನ್‌ 9 ರಲ್ಲಿಯೂ ಕೂಡ ಕಾಣಿಸಕೊಂಡು ಜನಮನ ಗೆದ್ದಿದ್ದಾರೆ.

ನಟಿ ಅನುಪಮಾ ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯಲ್ಲಿಯೂ ಮೂಡಿಮಾಡಿದ್ದು, ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಹಲವಾರು ಟಿವಿ ಶೋಗಳ ನಿರೂಪಕಿಯಾಗಿ ಬ್ಯುಸಿಯಾಗಿದ್ದಾರೆ.  ರೋಲ್ ಮಾಡಿ

Spread the love
Translate »
Right Ad