ಕನ್ನಡದಲ್ಲೂ ‘ ದಿ ಲೆಜೆಂಡ್’ ಸಿನಿಮಾ…ತಮಿಳುನಾಡಿನ ಖ್ಯಾತ ಉದ್ಯಮಿ ಅರುಲ್ ಸರವಣನ್ ಈಗ ಪ್ಯಾನ್ ಇಂಡಿಯಾ ಸ್ಟಾರ್
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಗಾಳಿಪಟ-2′ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಸಿನಿಮಾದ ಹಾಡುಗಳು ಎಲ್ಲೆಡೆ ಸದ್ದು ಮಾಡುತ್ತಿದೆ. ಇದೀಗ ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಬಿಡುಗಡೆಯಾದ ಕೇವಲ ನಿಮಿಷಗಳಲ್ಲಿ ಉತ್ತಮ ವೀವ್ಸ್ ಪಡೆದುಕೊಂಡಿದೆ.
ಸಿರಿಕನ್ನಡದಲ್ಲಿ `ವಿಜಯ ದಶಮಿ’ಯ ಜೊತೆ `ಅಮ್ಮನ ಮದುವೆ’
ಗಣೇಶ್, ದಿಗಂತ್, ಪವನ್ ಒಟ್ಟಿಗೆ ನಿಂತಿರುವುದರಿಂದ ಆರಂಭವಾಗುವ ಈ ಟ್ರೈಲರ್ ನೀರುಕೋಟೆ ಎನ್ನುವ ಊರಿನಲ್ಲಿ ನಡೆಯುವ ಕಥೆಯನ್ನು ಯೋಗರಾಜ್ ಭಟ್ಟರ ಧ್ವನಿಯಲ್ಲಿ ಕೇಳಬಹುದು. ಶಿಕ್ಷಕರ ಪಾತ್ರದಲ್ಲಿ ಅನಂತ್ ನಾಗ್ ಎಂದಿನಂತೆ ಸಿನಿಮಾಗೆ ಒಂದು ಲುಕ್.
ಅದ್ದೂರಿ ಸೆಟ್ ನಲ್ಲಿ `ಪರಿಮಳ ಡಿಸೋಜಾ` ಚಿತ್ರದ ಚಿತ್ರೀಕರಣ
ಮೂವರು ಜನರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದರ ಝಲಕ್ ಅನ್ನು ನಾವು ಟ್ರೈಲರ್ನಲ್ಲಿ ನೋಡಬಹುದು. ಭೈರೇಗೌಡರ ಮಗ ಗಣೇಶ್, ಮುಗಿಲ್ ಪೇಟೆ ದಿಗಂತ, ವಿಧೇಯ ವಿದ್ಯಾರ್ಥಿ ಭೂಷಣ್ ಹೀಗೆ ಮೂರು ವಿಚಿತ್ರ ಕ್ಯಾರೆಕ್ಟರ್ಗಳು, ಅವರ ತರಲೆಗಳಿರುವ ಈ ಟ್ರೈಲರ್ ಸಿನಿಮಾ ಎಷ್ಟು ಮಜಾವಾಗಿರಬಹುದು ಎಂಬುದರ ಬಗ್ಗೆ ಐಡಿಯಾ ಕೊಡುತ್ತದೆ.
ಅರಸು ಚಿತ್ರದ ಮೀರಾ ಜಾಸ್ಮಿನ್ ಇವರೇನಾ? ಹೇಗಿದೆ ಗೊತ್ತಾ ಹೊಸ ಲುಕ್..?
ಮೂವರು ಜೀವನ ಮೊದಲು ಹೇಗಿರುತ್ತೆ, ಹುಡುಗಿಯರು ಬಂದ ಮೇಲೆ ಹೇಗೆ ಬದಲಾಗುತ್ತದೆ ಎಂಬುದನ್ನು ಸಹ ನಾವು ಸಣ್ಣದಾಗಿ ತಿಳಿಯಬಹುದು. ಯೋಗರಾಜ್ ಭಟ್ಟರ ಧ್ವನಿಯಲ್ಲಿ ಇದು ಭಾನು ಭೂಮಿಗೆ ಸೇತುವೆ ಕಟ್ಟಿದವರು ಸಂಕಟದ ಕಥೆ, ಸಂಕಟದ ಕಥೆ ಎಂಬ ಮಾತು ಕೇಳಿದಾಗ ಸಿನಿಮಾ ಬಗ್ಗೆ ನಿರೀಕ್ಷೆ ಇನ್ನೂ ಹೆಚ್ಚಾಗುತ್ತದೆ ಹಾಗೂ ಮನಸ್ಸಿಗೆ ನಾಟುತ್ತದೆ.
ಕಾಮಿಡಿ ದೃಶ್ಯಗಳ ಜೊತೆ ಎಮೋಷನ್ಗಳು ಸಹ ಇದ್ದು, ಕೊನೆಯಲ್ಲಿ ಗಣೇಶ್ ನಾನು ಯಾವಾಗಲೂ ನಗುತ್ತಿರುತ್ತೇನೆ, ಅಳುವುದಿಲ್ಲ ಎಂಬ ಮಾತು ಕಾಡುತ್ತದೆ. ಈ ಟ್ರೈಲರ್ ನಿಮ್ಮನ್ನ ನಗಿಸುವುದಲ್ಲದೇ, ಅಳಿಸುತ್ತದೆ ಎಂದರೆ ತಪ್ಪಲ್ಲ.
ನಿರ್ದೇಶಕ ಯೋಗರಾಜ್ ಭಟ್ ಎಂದರೆ ಒಂದು ರೀತಿಯ ಡಿಫರೆಂಟ್ ಎಂದು ಹೇಳಬಹುದು. ಅವರ ನಿರ್ದೇಶನದ ಗಾಳಿಪಟ ಚಿತ್ರದ ಸೀಕ್ವೆಲ್ ಆಗಿ ಗಾಳಿಪಟ 2 ತೆರೆಕಾಣಲು ಸಿದ್ದವಾಗಿದೆ. ಈಗಾಗಲೇ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ‘ಒಂದಿಷ್ಟು ಮೊಹಬ್ಬತ್ ಜೊತೆಗೆ ಮತ್ತೊಂದಷ್ಟು ಸ್ನೇಹವನ್ನು ಹೊತ್ತು ಇದೇ ಆಗಸ್ಟ್ 12ರಂದು ನಿಮ್ಮ ಮುಂದೆ ಬರ್ತಿದ್ದೀವಿ. ಅದೇ ಹಳೆಯ ಅಕ್ಕರೆ ಮತ್ತು ಪ್ರೀತಿಯನ್ನು ಬಯಸುವ ಗಾಳಿಪಟ 2 ಚಿತ್ರತಂಡ‘ ಎಂದು ಬರೆದು ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರು.
ಆಗಸ್ಟ್ 26 ರಂದು ಚಾಣಕ್ಷ ನಿರ್ದೇಶಕನ, ‘ಕೌಟಿಲ್ಯ’ ದರ್ಶನ
ಇನ್ನು, ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಶನ್ನಲ್ಲಿ ಮೂಡಿಬಂದಿದ್ದ ‘ಗಾಳಿಪಟ’ ಚಿತ್ರ ಸೂಪರ್ ಹಿಟ್ ಆಗಿತ್ತು. ಈಗ ಮತ್ತದೇ ಜೋಡಿ ಮತ್ತೂಮ್ಮೆ ‘ಗಾಳಿಪಟ-2′ ಚಿತ್ರವನ್ನು ಸಿದ್ಧಗೊಳಿಸಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿದೆ. ಅಲ್ಲದೇ ಈಗಾಗಲೇ ಬಿಡುಗಡೆಯಾಗಿರುವ ಎಕ್ಸಾಂ ಲಿರಿಕಲ್ ವಿಡಿಯೋ ಸಾಂಗ್ ಸಖತ್ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
3ಡಿ ಮೋಡಿಯಲ್ಲಿ ಕಲರ್‌ಫುಲ್ ಗುಮ್ಮ!
ಈ ಚಿತ್ರವನ್ನು ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ ಎನ್ನಲಾಗಿದೆ.ಚಿತ್ರದಲ್ಲಿ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್ ನಾಗ್, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ.