Sandalwood Leading OnlineMedia

ಬಹುನಿರೀಕ್ಷಿತ ‘ಗಾಳಿಪಟ-2’ ಚಿತ್ರ ಆಗಸ್ಟ್ 12ಕ್ಕೆ ಬಿಡುಗಡೆ

ಬಹುನಿರೀಕ್ಷಿತ ‘ಗಾಳಿಪಟ-2’ ಚಿತ್ರ ಆಗಸ್ಟ್ 12ಕ್ಕೆ ಬಿಡುಗಡೆ

ನಿರ್ದೇಶಕ ಯೋಗರಾಜ್‌ ಭಟ್‌ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್‌ ಕಾಂಬಿನೇಶನ್‌ನಲ್ಲಿ ತಯಾರಾಗಿರುವ ಬಹುನಿರೀಕ್ಷಿತ ‘ಗಾಳಿಪಟ-2’ ಚಿತ್ರ ಆಗಸ್ಟ್ 12ಕ್ಕೆ ಬಿಡುಗಡೆಯಾಗಲಿದೆ.ಚಿತ್ರತಂಡ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದು ಆಗಸ್ಟ್‌ 12ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

ಯೋಗರಾಜ್ ಭಟ್‌ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ ಈ ಹಿಂದೆ ಬಿಡುಗಡೆಯಾಗಿದ್ದ “ಗಾಳಿಪಟ’ ಚಿತ್ರ ಹಿಟ್‌ ಆಗಿತ್ತು. ಈಗ ಅದೇ ಜೋಡಿ ಮತ್ತೂಮ್ಮೆ ಜೊತೆಯಾಗಿ ‘ಗಾಳಿಪಟ-2’ ಮಾಡಿದ್ದಾರೆ. ಈ ಚಿತ್ರವನ್ನು ಸೂರಜ್‌ ಪ್ರೊಡಕ್ಷನ್ಸ್‌ನಡಿ ರಮೇಶ್‌ ರೆಡ್ಡಿ ನಿರ್ಮಾಣ ಮಾಡಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ ಎನ್ನಲಾಗಿದೆ.

ಚಿತ್ರವನ್ನ ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಗಣೇಶ್, ದಿಗಂತ್, ಪವನ್ ಕುಮಾರ್ ಜೊತೆಗೆ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯಾ, ಸಂಯುಕ್ತ ಮೆನನ್, ನಿಶ್ವಿಕಾ ನಾಯ್ಡು, ಅನಂತ್ ನಾಗ್, ರಂಗಾಯಣ ರಘು, ಸುಧಾ ಬೆಳವಾಡಿ ಸೇರಿದಂತೆ ಅನೇಕರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ರಮೇಶ್ ರೆಡ್ಡಿ ಅವರ ಸೂರಜ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಕ್ರಮವಾಗಿ ಜೀ ಕನ್ನಡ ಮತ್ತು ಜೀ 5 ಗೆ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ.

 14 ವರ್ಷಗಳ ‘ಗಾಳಿಪಟ’ ಸಿನಿಮಾವು ಆ ಸಮಯಕ್ಕೆ ದೊಡ್ಡ ಮ್ಯೂಸಿಕಲ್ ಹಿಟ್ ಎನಿಸಿಕೊಂಡಿತ್ತು. ಇದೀಗ ಅದೇ ಸೀಕ್ವೆಲ್‌ ಮೇಲೂ ಅಷ್ಟೇ ನಿರೀಕ್ಷೆ ಇದೆ. ಈ ಬಾರಿಯೂ ಯೋಗರಾಜ್ ಭಟ್, ಗಣೇಶ್, ದಿಗಂತ್ ಕಾಂಬಿನೇಷನ್‌ ಭರ್ಜರಿ ಮನರಂಜನೆ ನೀಡಲಿದೆಯೇ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಇನ್ನು, ‘ಗಾಳಿಪಟ 2’ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಜೀ ಕನ್ನಡ ವಾಹಿನಿ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಚಿತ್ರದ ಓಟಿಟಿ ಹಕ್ಕುಗಳು ಜೀ5 ಪಾಲಾಗಿವೆ. ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಪಡೆದುಕೊಂಡಿದೆ.

 

 

Share this post:

Translate »