ವಾಮಾಚಾರದ (ಬ್ಲಾಕ್ ಮ್ಯಾಜಿಕ್) ಸುತ್ತ ನಡೆಯುವ ಘಟನೆಗಳನ್ನಿಟ್ಟುಕೊಂಡು ಮಾಡಿರುವ ಚಿತ್ರ “ಗದಾಯುದ್ದ” ಜೂನ್ 9 ರಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಡಿ ನಡೆಯಿತು. ಈ ಹಿಂದೆ ಮೃಗಶಿರ ಚಿತ್ರ ನಿರ್ದೇಶಿಸಿದ್ದ, ಶ್ರೀವತ್ಸ ರಾವ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಬೆಳಗಾವಿ ಮೂಲದ ನಿತಿನ್ ಶಿರಗೂರ್ ಕರ್ ನಿರ್ಮಾಣ ಮಾಡಿದ್ದಾರೆ. ಅವರ ಪುತ್ರ ಸುಮಿತ್ ಮೊದಲಬಾರಿಗೆ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ನಿರ್ದೇಶಕ, ನಾಯಕ ಹಾಗೂ ಚಿತ್ರದ ನಾಯಕಿ ಧನ್ಯ ಪಾಟೀಲ್ ಮಾತ್ರವೇ ವೇದಿಕೆಯಲ್ಲಿ ಹಾಜರಿದ್ದು ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಂಡರು.
ಇದನ್ನೂ ಓದಿ: ಸಕ್ಸಸ್ ಖುಷಿಯಲ್ಲಿ ‘ಡೇರ್ ಡೆವಿಲ್ ಮುಸ್ತಾಫಾ’…ಅಮೋಘ ಪ್ರದರ್ಶನ ಕಾಣ್ತಿದೆ ಪೂಚಂತೇ ಕಥೆಯಾಧಾರಿತ ಸಿನಿಮಾ
ಮೊದಲಿಗೆ ಮಾತನಾಡಿದ ನಿರ್ದೇಶಕ ಶ್ರೀವತ್ಸ ನಮ್ಮ ಚಿತ್ರಕ್ಕೆ ಮಾದ್ಯಮದವರು ನೀಡಿದ ಪ್ರೋತ್ಸಾಹಕ್ಕೆ ಇಡೀ ಚಿತ್ರತಂಡ ಚಿರಋಣಿಯಾಗಿದೆ. ಈಗ ವೇದಿಕೆಯ ಮೇಲೆ ನಾವು ಮೂವರು ಮಾತ್ರ ಇದ್ದೇವೆ. ಆದರೆ ಗದಾಯುದ್ದ ಚಿತ್ರಕ್ಕಾಗಿ ಸಾಕಷ್ಟು ಜನ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದುಡಿದಿದ್ದಾರೆ. ಅವರ ಬಗ್ಗೆ ನಾನಿಲ್ಲಿ ಹೇಳಲೇಬೇಕಿದೆ. ಗಡಿಭಾಗದಲ್ಲಿನ ಖಂಡಾಲ ಘಾಟ್ಸ್ ಬಳಿಯ ನೂರೈವತ್ತು ಅಡಿ ಎತ್ತರದ ಬಾಬಾ ಫಾಲ್ಸ್ ಮೇಲೆ ಹೆಲಿಕ್ಯಾಮ್ ನಲ್ಲಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ಮಾಡುವಾಗ ಆಪರೇಟರ್ ಆಯತಪ್ಪಿ ಕೆಳಗೆ ಬಿದ್ದುಬಿಟ್ಟರು. ನಂತರ ಅವರನ್ನು ಮೇಲಕ್ಕೆತ್ತಿ ಚಿಕಿತ್ಸೆ ಕೊಡಿಸಲಾಯಿತು. ಅವರು ಸುರಕ್ಷಿತವಾಗಿದ್ದರು. ಕ್ಲೈಮ್ಯಾಕ್ಸ್ ನ ಬೆಂಕಿ ಸೀನ್ ಸಮಯದಲ್ಲೂ ಅದೇರೀತಿ ಆಯಿತು. ಅಲ್ಲದೆ ಸೈಂಟಿಸ್ಟ್ ಪಾತ್ರ ಮಾಡಿದ ಶಿವರಾಮಣ್ಣ ಅವರು ಬಾಂಬ್ ಬ್ಲಾಸ್ಟ್ ಸಮಯದಲ್ಲಿ ಎದುರೇ ಇದ್ದರು. ಇನ್ನು ಸತ್ಯಜಿತ್ ಕೂಡ ಬಂದು ಕೆಲಸ ಮಾಡಿಕೊಟ್ಟರು. ಈ ಶುಕ್ರವಾರ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ನಮ್ಮ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ.
ಇದನ್ನೂ ಓದಿ: ಬರೋಬ್ಬರಿ 23ವರ್ಷಗಳ ನಂತರ ವಿ.ಮನೋಹರ್ `ದರ್ಬಾರ್’! ಇದೇ ಶುಕ್ರವಾರ ಬಹುನಿರೀಕ್ಷಿತ ಚಿತ್ರ ತೆರೆಗೆ
ಜೂನ್ ೧೬ ಅಥವಾ ೨೩ಕ್ಕೆ ಉಳಿದ ಭಾಷೆಗಳಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಗಣೇಶ್ ತಮ್ಮ ಮಹೇಶ್ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪೈಟ್ ಮಾಸ್ಟರ್ ಅರ್ಜುನ್ ರಾಜ್ ರಿಸ್ಕಿ ಶಾಟ್ ಮಾಡಿದ್ದಾರೆ. ಹೆಸರು ಹೇಗೆ ಗದಾಯುದ್ದವೋ ಹಾಗೇ ಹಾಗೇ ಹಾಗೇ ಫೈಟರ್ಸ್ ಕೂಡ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಬೆಂಕಿಯ ಜೊತೆ ಚೆಲ್ಲಾಟವಾಡಿದ್ದಾರೆ. ಇದೆಲ್ಲವೂ ಜನಕ್ಕೆ ರೀಚ್ ಆಗಬೇಕು ಎಂದು ಹೇಳಿದರು. ಚಿತ್ರದಲ್ಲಿ ಮನರಂಜನೆಯ ಜೊತೆಗೆ ಮಾಹಿತಿ ನೀಡುವ ಪ್ರಯತ್ನವನ್ನೂ ಮಾಡಲಾಗಿದೆ. ವೈಜ್ಞಾನಿಕವಾಗಿ ಚಿತ್ರದ ಕಥೆ ಮಾಡಿಕೊಂಡು ಕಮರ್ಷಿಯಲ್ ಆಗಿ ಹೇಳಲಾಗಿದೆ.
ಇದನ್ನೂ ಓದಿ: “ಯಾವ ಮೋಹನ ಮುರಳಿ ಕರೆಯಿತು” ಕನ್ನಡದಲ್ಲಿ ಬರುತ್ತಿದೆ ಮತ್ತೊಂದು ಶ್ವಾನದ ಪ್ರೀತಿ ಕಥೆ
ನಂತರ ನಾಯಕ ಸುಮಿತ್ ಮಾತನಾಡಿ, ನಾನು ಅಭಿನಯಿಸಿರುವ ಮೊದಲ ಚಿತ್ರ ರಿಲೀಸಾಗುತ್ತಿರುವ ಖುಷಿಯಿದೆ. ಚಿತ್ರದಲ್ಲಿ ನಾನು ಭೀಮ ಎನ್ನುವ ಮೆಡಿಕಲ್ ಸ್ಟೂಡೆಂಟ್ ಪಾತ್ರ ಮಾಡಿದ್ದೇನೆ. ಇಡೀ ತಂಡ ತುಂಬಾ ಎಫರ್ಟ್ ಹಾಕಿದ್ದಾರೆ. ಆಕ್ಷನ್ , ಕಾಮಿಡಿ, ಥ್ರಿಲ್ಲರ್, ನಾಲೆಡ್ಜ್ , ಸೈಂಟಿಫಿಕ್ ವಿವರಣೆ ಇದೆ. ನಮ್ಮ ಸುತ್ತಲೂ ಏನೆಲ್ಲ ನಡೆಯುತ್ತಿದೆ ಅಂತ ಹೇಳುವಚಿತ್ರ. ಇವತ್ತು ಚಿಂತಾಮಣಿಯಲ್ಲಿ ರೋಡ್ ಪ್ರೊಮೋಷನ್ ಮಾಡಿದಾಗ ರೋಡ್ ಬ್ಲಾಕ್ ಆಗುವಷ್ಟು ಜನ ಸೇರಿದ್ದರು ಎಂದು ಹೇಳಿದರು.
ನಾಯಕಿ ಧನ್ಯ ಪಾಟೀಲ್ ಮಾತನಾಡಿ ಮಾಟಗಾರ ಡ್ಯಾನಿಯಲ್ ಕುಟ್ಟಪ್ಪ ಅವರ ಮಗಳು ಪ್ರತ್ಯಕ್ಷ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕೆಲ ಹುಡುಗಿಯರ ಮೈಂಡ್ ಸೆಟ್ ಬೇರೆ ಥರ ಇರುತ್ತದೆ. ನಾನು ಬ್ಲಾಕ್ ಮ್ಯಾಜಿಕ್ ನಂಬಲ್ಲ, ಆದರೆ ಆ ಬಗ್ಗೆ ತಿಳಿದುಕೊಳ್ಳಬೇಕಾದಂಥ ಸಾಕಷ್ಟು ವಿಷಯಗಳು ಚಿತ್ರದಲ್ಲಿ ಎಂದರು.
ಕ್ಲೈಮಾಕ್ಸ್ ಸಾಹಸ ದೃಶ್ಯವನ್ನು 14 ದಿನಗಳವರೆಗೆ ಚಿತ್ರೀಕರಣ ಮಾಡಲಾಗಿದ್ದು, ಇದಕ್ಕಾಗಿಯೇ ಒಂದು ಕೋಟಿ ಖರ್ಚು ಮಾಡಲಾಗಿದೆ. ಚಿತ್ರದಲ್ಲಿ ಶರತ್ ಲೋಹಿತಾಶ್ವ, ಅಯ್ಯಪ್ಪ ಶರ್ಮಾ, ಸಾಧುಕೋಕಿಲ, ಸ್ಪರ್ಷ ರೇಖಾ, ಶರತ್ ಲೋಹಿತಾಶ್ವ ಸೇರಿದಂತೆ ಮತ್ತಿತರು ನಟಿಸಿದ್ದಾರೆ. ಸಂಗೀತ ನಿರ್ದೇಶಕರಾಗಿ ವೈಸ್ ಕಿಂಗ್ ಕೆಲಸ ಮಾಡಿದ್ದಾರೆ.