Sandalwood Leading OnlineMedia

ಸಿನಿರಸಿಕರಿಗೆ ಮನೋರಂಜನೆಯ “ಫುಲ್ ಮೀಲ್ಸ್” ನೀಡಲಿದ್ದಾರೆ ಲಿಖಿತ್ ಶೆಟ್ಟಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿರ್ಮಾಣದ “ಫ್ಯಾಮಿಲಿ ಪ್ಯಾಕ್” ಚಿತ್ರದಲ್ಲಿ ನಟಿಸಿ ಜನಪ್ರಿಯರಾಗಿರುವ ಲಿಖಿತ್ ಶೆಟ್ಟಿ ನಾಯಕರಾಗಿ ಅಭಿನಯಿಸುತ್ತಿರುವ “ಫುಲ್ ಮೀಲ್ಸ್” ಚಿತ್ರದ ಚಿತ್ರೀಕರಣ ಬೆಂಗಳೂರಿನ ಅರಮನೆಯಲ್ಲಿ ನಡೆಯುತ್ತಿದೆ. ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು. ಇದೊಂದು ಸಂಪೂರ್ಣ ಮನೋರಂಜನಾತ್ಮಕ ಚಿತ್ರ. ನನ್ನ ಮೊದಲ ನಿರ್ದೇಶನದ ಚಿತ್ರ ಕೂಡ. ಲಿಖಿತ್ ಶೆಟ್ಟಿ ನಾಯಕರಾಗಿ, ಖುಷಿ ರವಿ, ತೇಜಸ್ವಿನಿ ಶರ್ಮ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ ಸೇರಿದಂತೆ ಅನೇಕ ಅನುಭವಿ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಷಿ ಛಾಯಾಗ್ರಹಣ ಹಾಗೂ ಗುರುಕಿರಣ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಬೆಂಗಳೂರು, ರಾಮನಗರ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಎನ್.ವಿನಾಯಕ ಚಿತ್ರದ ಕುರಿತು ಮಾಹಿತಿ ನೀಡಿದರು.

ಫೆಬ್ರವರಿ 17 ರಂದು ಅದ್ದೂರಿಯಾಗಿ ನಡೆಯಲಿದೆ “ಸಿರಿ ಲಂಬೋದರ ವಿವಾಹ” (ಎಸ್ ಎಲ್ ವಿ)

 

ನಾನು ಈ ಚಿತ್ರದಲ್ಲಿ ಫೋಟೋಗ್ರಾಫರ್. ಮದುವೆ ಮನೆಗೆ ಫೋಟೋ ತೆಗೆಯಲು ಹೋದಾಗ ಮದುಮಗಳ ಮೇಲೆ ಪ್ರೀತಿಯಾಗುತ್ತದೆ. ಆನಂತರ ಏನಾಗುತ್ತದೆ? ಎಂಬುದನ್ನು ಚಿತ್ತದಲ್ಲೇ ನೋಡಬೇಕು. ಒಟ್ಟಿನಲ್ಲಿ ನಾವು ಇಡೀ ತಂಡ ಸೇರಿ ಪ್ರೇಕ್ಷಕರಿಗೆ ಮನೋರಂಜನೆಯ “ಫುಲ್ ಮೀಲ್ಸ್” ನೀಡಲಿದ್ದೇವೆ ಎಂದರು ನಾಯಕ ಲಿಖಿತ್ ಶೆಟ್ಟಿ. ನಾಯಕಿಯರಾದ ಖುಷಿ ರವಿ, ತೇಜಸ್ವಿನಿ ಶರ್ಮ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಕಲಾವಿದರಾದ ರಂಗಾಯಣ ರಘು, ಚಂದ್ರಕಲಾ ಮೋಹನ್, ರಮೇಶ್ ಪಂಡಿತ್, ಗಣೇಶ್ ರಾವ್, ವಿಜಯ್ ಚೆಂಡೂರ್,  ಛಾಯಾಗ್ರಾಹಕ ಮನೋಹರ್ ಜೋಶಿ ಹಾಗೂ ಸಂಭಾಷಣೆ ಬರೆಯುತ್ತಿರುವ ಹರೀಶ್ ರಾಜಣ್ಣ “ಫುಲ್ ಮೀಲ್ಸ್” ಬಗ್ಗೆ ಮಾತನಾಡಿದರು.

Share this post:

Related Posts

To Subscribe to our News Letter.

Translate »