Left Ad
ಚಿತ್ತಾರ ಮ್ಯೂಸಿಕ್‌ ಅವಾರ್ಡ್‌; ʻಐದನಿ ಐಕಾನ್‌ʼ ಶ್ರೀಹಂಸಲೇಖ ಅವರೀಗ ʻಪ್ರೈಡ್‌ ಆಫ್‌ ಕರ್ನಾಟಕʼ - Chittara news
# Tags

ಚಿತ್ತಾರ ಮ್ಯೂಸಿಕ್‌ ಅವಾರ್ಡ್‌; ʻಐದನಿ ಐಕಾನ್‌ʼ ಶ್ರೀಹಂಸಲೇಖ ಅವರೀಗ ʻಪ್ರೈಡ್‌ ಆಫ್‌ ಕರ್ನಾಟಕʼ

ʼ

ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್‌ ಅವಾರ್ಡ್‌-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು  ಹೀಗಿತ್ತು.

ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.

ರೆಡ್‌ ಕಾರ್ಪೆಟ್‌ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್‌ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.

ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು. ಸಂದರ್ಭದಲ್ಲಿ, ಕನ್ನಡ ಚಿತ್ರರಂಗದ ಕಲೆಗಾರ ʻಐದನಿ ಐಕಾನ್‌ʼ  ಶ್ರೀ ಹಂಸಲೇಖ ಅವರಿಗೆಚಿತ್ತಾರ ಮ್ಯೂಸಿಕಲ್ ಅವಾರ್ಡ್ಸ್ – 2025′ ಕಾರ್ಯಕ್ರಮದಲ್ಲಿ ‘Pride of Karnataka’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಸಿನಿಮಾ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತವಾಗಿಸಿದ ಧೀಮಂತ, ಕನ್ನಡ ಸಿನಿ ಸಂಗೀತವನ್ನು ಮಗದಷ್ಟು ಆಕರ್ಷಕವಾಗಿಸಿದ ಅತ್ಯದ್ಭುತ ಪ್ರತಿಭೆ ಶ್ರೀ ಹಂಸಲೇಖ. ಕತೆಯಲ್ಲಿ ಕವಿತೆ ತರುವ, ಕವಿತೆಯಲ್ಲಿ ಕಥೆ ಹೇಳುವ ಅಪರೂಪದ ಕಲಾಕಾರ, ಸಿನಿಮಾ ಸಾಹಿತ್ಯದ ಅದ್ಭುತ ಪ್ರಾಕಾರ ಶ್ರೀ ಹಂಸಲೇಖ.

ಗಂಗರಾಜು ಎಂಬ ವ್ಯಕ್ತಿ ಹಂಸಲೇಖ ಎಂಬ ಶಕ್ತಿಯಾಗಿ ಕನ್ನಡ ಚಿತ್ರರಂಗ ಆಳಿದ ಪರಿ ಅಮೋಘ.  1973 ರಲ್ಲಿತ್ರಿವೇಣಿಚಿತ್ರದನೀನಾ ಭಗವಂತಹಾಡಿನ ಮೂಲಕ ಗೀತರಚನೆಕಾರರಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ, “ನಾನು ನನ್ನ ಹೆಂಡತಿ” (1985) ಚಿತ್ರದಿಂದ ಸಂಭಾಷಣೆ ಮತ್ತು ಗೀತರಚನೆಕಾರರಾಗಿ ಅಧಿಕೃತವಾಗಿ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪ್ರೇಮಲೋಕದ ಮೂಲಕ ಒಂದಾದ ರವಿಚಂದ್ರನ್ ಮತ್ತು ಹಂಸಲೇಖ ಜೋಡಿ ಮಾಡಿದ ಮೋಡಿ ನಿಬ್ಬೆರಗು ಮೂಡಿಸುವಂಥದ್ದು. ಜೋಡಿಯ ಯಶಸ್ಸು ಕನ್ನಡ ಆಡಿಯೋ ಮಾರುಕಟ್ಟೆಯನ್ನು ಜಗದಗಲ ಬೆಳೆಸಿತು.

ಪ್ರೇಮಲೋಕಚಿತ್ರದಿಂದ ಆರಂಭವಾಗಿ ಕನ್ನಡ ಚಲನಚಿತ್ರ ಸಂಗೀತಲೋಕವನ್ನು ದಶಕಗಳ ಕಾಲ ಯಶಸ್ಸಿನಉತ್ತುಂಗಕ್ಕೇರಿಸಿದ ಹಿರಿಮೆ ಹಂಸಲೇಖ ಅವರಿಗೆ ಸಲ್ಲುತ್ತದೆ. ಡಾ. ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಡಾ. ಅಂಬರೀಶ್, ಅನಂತನಾಗ್, ಶಂಕರ್ ನಾಗ್, ಪ್ರಭಾಕರ್, ರವಿಚಂದ್ರನ್, ಶಿವರಾಜ್ ಕುಮಾರ್, ಶಶಿಕುಮಾರ್, ರಮೇಶ್, ದೇವರಾಜ್, ಜಗ್ಗೇಶ್ ಅವರಿಂದ ಶುರುವಾಗಿ ನೆನಪಿರಲಿ ಪ್ರೇಮ್, ರಾಕಿಂಗ್ ಸ್ಟಾರ್ ಯಶ್ ವರೆಗೂ ಎಲ್ಲಾ ಹೀರೋಗಳಿಗೂ ಭರ್ಜರಿ ಮ್ಯೂಸಿಕಲ್ ಹಿಟ್ ಚಿತ್ರಗಳನ್ನು ಕೊಟ್ಟ ಶ್ರೇಯ ಇವರದ್ದು.

ಪ್ರೇಮಲೋಕ, ರಣಧೀರ, ಅಂಜದ ಗಂಡು, ರಾಮಾಚಾರಿ, ರಣರಂಗ, ಸಾಂಗ್ಲಿಯಾನ, ಅನಂತನ ಅವಾಂತರ, ಯುದ್ಧಕಾಂಡ, ಯುಗಪುರುಷ, ಬಣ್ಣದ ಗೆಜ್ಜೆ, ಮುತ್ತಿನಹಾರ, ಶಾಂತಿ ಕ್ರಾಂತಿ, ಹಳ್ಳಿ ಮೇಷ್ಟ್ರು, ಬೆಳ್ಳಿ ಕಾಲುಂಗುರ, ಚಿಕ್ಕೆಜಮಾನ್ರು, ಗೋಪಿಕೃಷ್ಣ, ಮಣ್ಣಿನ ದೋಣಿ, ಆಕಸ್ಮಿಕ, ಅಣ್ಣಯ್ಯ, ಅನುರಾಗದ ಅಲೆಗಳು, ಬಾ ನಲ್ಲೆ ಮಧುಚಂದ್ರಕೆಹಾಲುಂಡ ತವರು, ಲಾಕಪ್ ಡೆತ್, ಮಹಾಕ್ಷತ್ರಿಯ, ಗಾನಯೋಗಿ ಪಂಚಾಕ್ಷರಿ ಗವಾಯಿ, ಪುಟ್ನಂಜ, ಸರ್ಕಲ್ ಇನ್ಸ್ಪೆಕ್ಟರ್, ಸಿಪಾಯಿ, ಸಿಂಹದ ಮರಿ, ಏಕೆ -47, ಹಗಲುವೇಷ, ಸೂಪರ್ ಸ್ಟಾರ್, ನೆನಪಿರಲಿ, ಪ್ರೇಮಿಸಂ, ನಾನು ನನ್ನ ಕನಸು, ರಾಜಾಹುಲಿ ಸೇರಿದಂತೆ 350 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಹಂಸಲೇಖ ಸಂಯೋಜನೆಯ ಸೂಪರ್ ಹಿಟ್ ಚಿತ್ರಗಳ ಪಟ್ಟಿ ಮಾಡುತ್ತಾ ಹೋದರೆ ಅದು ಕೊನೆಯಿಲ್ಲದ ಪಯಣದಂತೆ. ಇವರ ಸಾಧನೆ ಕೆಲವು ನಿಮಿಷಗಳ ವಿಡಿಯೋದಲ್ಲಿ ಹೇಳಿ ಮುಗಿಸುವಂಥದ್ದಲ್ಲ. ಅದೇ ಒಂದು ಚರಿತ್ರೆಯಾಗಬಲ್ಲದು. ಯಾಕಂದ್ರೆ ಇವರ ಹಾಡುಗಳಿಂದಲೇ ಎಷ್ಟೋ ಕಲಾವಿದರು ಸೂಪರ್ ಸ್ಟಾರ್ ಆದ ನಿದರ್ಶನಗಳಿವೆ

ಬಡವನಿಂದ ಧನಿಕನ ತನಕ, ಮಕ್ಕಳಿಂದ ಮುದುಕರ ತನಕ ಪ್ರತಿಯೊಬ್ಬರು ಇವರ ಸಂಗೀತಕ್ಕೆ ಮಾರು ಹೋದವರೇ. ತಾಯಿ ಮತ್ತು ತಾಯ್ನಾಡಿನ ಕುರಿತು ಹಂಸಲೇಖ ಅವರಷ್ಟು ಅದ್ಭುತವಾಗಿ ಬರೆಯುವ ಮತ್ತೊಬ್ಬರು ಕಾಣಸಿಗುವುದು ವಿರಳ. ರಸಿಕತೆ ಸಾಲುಗಳಾಗಲಿ, ಅಧ್ಯಾತ್ಮದ ತಿರುಳಾಗಲಿ ನಾಲ್ಕೈದು ನಿಮಿಷದ ಹಾಡಿನಲ್ಲಿಯೇ ಹಂಸಲೇಖರವರು ಹಿಡಿದಿಡುವ ರೀತಿ ಊಹೆಗೂ ಮೀರಿದ್ದು.

ನಮ್ಮ ಬದುಕಿನ ಎಲ್ಲಾ ಸಂದರ್ಭಗಳಿಗೂ ಒಪ್ಪುವಂತ, ಜೊತೆಯಾಗುವಂಥ ಚೆಂದದ ಹಾಡುಗಳನ್ನು ಹಂಸಲೇಖ ಬರೆದಿದ್ದಾರೆ. ಏಕತಾನತೆ, ಖಿನ್ನತೆಯಲ್ಲಿದ್ದ ಅನೇಕರಿಗೆ ಹಂಸಲೇಖ ಹಾಡುಗಳು ಜೀವನೋತ್ಸಾಹ ತುಂಬಿದೆ.

ತತ್ವಪದ, ಜಾನಪದ, ಕೀರ್ತನೆ, ವಚನಾಮೃತಗಳ ಸಾರವನ್ನೆಲ್ಲಾ ಸಿನಿ ಸಾಹಿತ್ಯದಲ್ಲಿ ಬಳಸಿ, ಕೇಳುಗರಿಗೆ ತಲುಪಿಸಿದ ಅಪರೂಪದ ಸಾಹಿತಿ.  ಕನ್ನಡ ಸಿನಿ ಗಾಯನ ಲೋಕವನ್ನು ಹೆಚ್ಚಾಗಿ ಆಳಿದವರು ಪರಭಾಷಾ ಗಾಯಕರೇ. ಆದರೆ ಸಂಗೀತದ ವಿಷಯದಲ್ಲಿ ಹಾಗಾಗಲಿಲ್ಲ. ಹಂಸಲೇಖ ಸಂಗೀತ ಪರ್ವ ಆರಂಭವಾದ ನಂತರ ಪರಭಾಷಾ ಸಂಗೀತಕಾರರು ಕನ್ನಡದ ಮಟ್ಟಿಗೆ ಅವಶ್ಯವೆನಿಸಲೇ ಇಲ್ಲ. ಏಕೆಂದರೆ ತಮ್ಮ ವೈವಿಧ್ಯಮಯ ಸಂಗೀತ ಸಂಯೋಜನೆಯಿಂದ ಹಂಸಲೇಖ ಎಲ್ಲಾ ವರ್ಗದಕೇಳುಗರ ಮನಸೂರೆ ಮಾಡಿದರು. ‘ಸಂಗೀತ ಬ್ರಹ್ಮಎಂದೇ ಹೆಸರಾದರು. ತಮ್ಮ ಚಿತ್ರಗಳಲ್ಲಿ ಬಹಳಷ್ಟು ಕನ್ನಡದ ಪ್ರತಿಭೆಗಳನ್ನು ಗಾಯನ ಕ್ಷೇತ್ರಕ್ಕೆ ಪರಿಚಯಿಸಿದರು.

ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ನಿರ್ದೇಶನ ಸೇರಿದಂತೆ ನಾನಾ ವಿಭಾಗಗಳಲ್ಲಿ ಗೆದ್ದು ಬೀಗಿದ ಹಂಸಲೇಖ ಅವರು ಈಗ ನಿರ್ದೇಶಕರಾಗಿ ಮತ್ತೆ ಬೆಳ್ಳಿತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ.

ಹುಟ್ಟೋದ್ಯಾಕೆ ಸಾಯೋದ್ಯಾಕೆ, ಏನಾದರೂ ಸಾಧಿಸಿ ಹೋಗೋಕೆ…’ ಎಂದು ಬದುಕಿನ ಪರಮಾರ್ಥ ತಿಳಿಸಿದವರು. ಒಟ್ಟಾರೆಯಾಗಿ ಸಿನಿಮಾಲೋಕದಲ್ಲಿ ನೆಲೆ, ಬೆಲೆ ಕಂಡುಕೊಂಡ ಕನ್ನಡ ಚಿತ್ರರಂಗದ ಕಲೆಗಾರ ʻಐದನಿ ಐಕಾನ್‌ʼ  ಶ್ರೀ ಹಂಸಲೇಖ ಅವರಿಗೆ ಇಂದುಚಿತ್ತಾರ ಮ್ಯೂಸಿಕಲ್ ಅವಾರ್ಡ್ಸ್ – 2025′ ಕಾರ್ಯಕ್ರಮದಲ್ಲಿ ‘Pride of Karnataka’ ಪ್ರಶಸ್ತಿ ನೀಡಿ ಗೌರವಿಸಿದೆ.

Spread the love
Translate »
Right Ad