Left Ad
ಆರಕ್ಕೆ ನಾಲ್ಕು! ಇಂಟ್ರೆಸಿಂಗ್‌ ಸಿನ್ಮಾಗಳಲ್ಲಿ ಗೆಲುವು ಯಾರಿಗೆ? - Chittara news
# Tags

ಆರಕ್ಕೆ ನಾಲ್ಕು! ಇಂಟ್ರೆಸಿಂಗ್‌ ಸಿನ್ಮಾಗಳಲ್ಲಿ ಗೆಲುವು ಯಾರಿಗೆ?

ಹೊಸ ವರ್ಷದಲ್ಲಿ ನಿಧಾನವಾಗಿ ಕನ್ನಡ ಚಿತ್ರರಂಗ ಗರಿಗೆದರುತ್ತಿದೆ. ‘ಲ್ಯಾಂಡ್‌ಲಾರ್ಡ್’ ಹಾಗೂ ‘ಕಲ್ಟ್’ ಚಿತ್ರಗಳಿಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಕಳೆದ ವಾರ ‘ಸೀಟ್ ಎಡ್ಜ್’, ‘ರಕ್ತಕಾಶ್ಮೀರ’, ‘ವಲವಾರ’ ಸೇರಿ 8 ಸಿನಿಮಾಗಳು ತೆರೆಗಪ್ಪಳಿಸಿದ್ದವು. ಈ ವಾರ ಮತ್ತೆ 4 ಕನ್ನಡ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿವೆ.

ಈ ವಾರ ಅಂದರೆ ಫೆಬ್ರವರಿ 6ರಂದು ಇಂಟ್ರೆಸ್ಟಿಂಗ್ ಸಿನಿಮಾಗಳು ಬೆಳ್ಳಿ ಪರದೆ ಅಲಂಕರಿಸಲಿವೆ. ಈಗಾಗಲೇ ಟ್ರೈಲರ್, ಸಾಂಗ್ಸ್ ಮೂಲಕ ಆ ಸಿನಿಮಾಗಳು ಸದ್ದು ಮಾಡ್ತಿದೆ. ಧನಂಜಯ್ ನಿರ್ಮಾಣದ ‘JC’ ಹಾಗು ರಾಜ್ ಬಿ ಶೆಟ್ಟಿ ನಟನೆಯ ‘ರಕ್ಕಸಪುರದೊಳ್’ ಚಿತ್ರಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ರಕ್ಕಸಪುರದೊಳ್ / ರಾಜ್‌ ಬಿ ಶೆಟ್ಟಿ ಖಡಕ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿರುವ ‘ರಕ್ಕಸಪುರದೊಳ್’ ಸಿನಿಮಾ ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆ ಆಗಿ ಗಮನ ಸೆಳೆದಿದೆ. ಹಾಸ್ಯ ಪಾತ್ರಗಳಲ್ಲಿ ಮಾತ್ರವಲ್ಲ ಖಡಕ್ ಮಾಸ್ ಅವತಾರದಲ್ಲಿ ಕೂಡ ಅಬ್ಬರಿಸಬಲ್ಲೆ ಎಂದು ರಾಜ್ ಪದೇ ಪದೆ ಸಾಬೀತು ಮಾಡುತ್ತಿದ್ದಾರೆ. ‘ಲ್ಯಾಂಡ್‌ಲಾರ್ಡ್’ ಚಿತ್ರದಲ್ಲಿ ದುಷ್ಟ ಜಮೀನ್ದಾರನಾ ಪಾತ್ರದಲ್ಲಿ ದರ್ಬಾರ್ ನಡೆಸುತ್ತಿದ್ದಾರೆ. ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ವಿಚಿತ್ರವಾಗಿ ಆಡುವ ಮೆಂಟಲ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಈ ಬಾರಿ ಸರ್‌ಪ್ರೈಸ್ ನೀಡಲು ರಾಜ್ ಬಿ ಶೆಟ್ಟಿ ಅಣಿಯಾಗಿದ್ದಾರೆ. ಸದಾ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಉಢಾಪೆ ಆಗಿದ್ದರೂ ಬಹಳ ಚಾಲಾಕಿ ಆಸಾಮಿ ಈತ. ಶಾಸಕನ ಮಗಳ ಕೊಲೆ ಪ್ರಕರಣವನ್ನು ಮೆಂಟಲ್ ಪೊಲೀಸ್ ಆಫೀಸರ್ ಹೇಗೆ ಭೇದಿಸುತ್ತಾನೆ ಎನ್ನುವ ಕಥೆ ಚಿತ್ರದಲ್ಲಿ ಇರುವಂತೆ ಕಾಣ್ತಿದೆ. ರವಿ ಸಾರಂಗ ನಿರ್ದೇಶನದ ಚಿತ್ರಕ್ಕೆ ಸ್ಟಂಟ್ ಮಾಸ್ಟರ್ ರವಿವರ್ಮಾ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ.

ಜೆಸಿ ದಿ ಯೂನಿವರ್ಸಿಟಿ / ಒಂದ್ಕಡೆ ನಟನಾಗಿ ಸದ್ದು ಮಾಡುತ್ತಿರುವ ಧನಂಜಯ್ ಮತ್ತೊಂದು ಕಡೆ ನಿರ್ಮಾಪಕರಾಗಿ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಕಳೆದ ವರ್ಷ ‘ವಿದ್ಯಾಪತಿ’ ಎಂಬ ಕಾಮಿಡಿ ಸಿನಿಮಾ ನಿರ್ಮಿಸಿದ್ದರು. ಈ ವಾರ ‘ಜೆಸಿ’ ಎಂಬ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ತರುತ್ತಿದ್ದಾರೆ. ಸೂರ್ಯ ಪ್ರಖ್ಯಾತ್ ಹೀರೊ ಆಗಿ ನಟಿಸಿದ್ದು ಭಾವನಾ ರೆಡ್ಡಿ ನಾಯಕಿಯಾಗಿ ಮಿಂಚಿದ್ದಾರೆ. ಜೆಸಿ ಅಂದರೆ ಜುಡಿಷಿಯಲ್ ಕಸ್ಟಡಿ. ಅಮಾಯಕನೊಬ್ಬ ಜೈಲು ಸೇರುತ್ತಾನೆ. ಅಲ್ಲಿ ಇತರೆ ಕೈದಿಗಳಿಂದ ಎದುರಾಗುವ ಕಷ್ಟಗಳು, ಬಿಡುಗಡೆ ಆಗಿ ಬಂದ ಬಳಿಕ ಆತನ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದು ಚಿತ್ರದ ಕಥಾಹಂದರ. ಚೇತನ್ ಜೈರಾಮ್ ಚಿತ್ರ ನಿರ್ದೇಶನ ಮಾಡಿದ್ದಾರೆ.

ಕರಿಕಾಡ / ನಟರಾಜ್ ಹಾಗೂ ನಿರೀಕ್ಷಾ ಶೆಟ್ಟಿ ಲೀಡ್ ರೋಲ್‌ಗಳಲ್ಲಿ ನಟಿಸಿರುವ ‘ಕರಿಕಾಡ’ ಚಿತ್ರಕ್ಕೂ ಈ ವಾರವೇ ಬಿಡುಗಡೆ ಭಾಗ್ಯ. ರಿದ್ದಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ಗಿಲ್ಲಿ ವೆಂಕಟೇಶ್ ಕಟ್ಟಿಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಸ್ಯಾಂಪಲ್‌ಗಳನ್ನು ನೋಡಿದ್ರೆ ಇದು ಹಳ್ಳಿ ಸೊಗಡಿನ ಸಿನಿಮಾ ಎನ್ನುವುದು ಗೊತ್ತಾಗುತ್ತದೆ. ಅಲ್ಲಿನ ಸ್ನೇಹ, ಪ್ರೀತಿ, ದ್ವೇಷದ ಕಥಾಹಂದರ ಚಿತ್ರದಲ್ಲಿದೆ. ಕಳೆದ ವಾರವೇ ಬಿಡುಗಡೆ ಆಗಬೇಕಿದ್ದ ‘ಕರಿಕಾಡ’ ಸಿನಿಮಾ ಒಂದು ವಾರ ತಡವಾಗಿ ಪ್ರೇಕ್ಷಕರ ಮುಂದೆ ಬರ್ತಿದೆ.

ಘಾರ್ಗಾ / ಕಈ ವಾರ ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ‘ಘಾರ್ಗಾ’ ಸಿನಿಮಾ ತೆರೆಗಪ್ಪಳಿಸಲಿದೆ. ಅಶ್ವಿನಿ ರಾಮ್ ಪ್ರಸಾದ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಪುತ್ರ ಅರುಣ್ ರಾಮ್‌ಪ್ರಸಾದ್‌ ಹೀರೊ ಆಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಘಾರ್ಗಾ ಎಂಬ ಊರಿನಲ್ಲಿ ನಡೆಯುವ ಕಥೆಯಿದು. ಡೈಲಾಗ್ ಕಿಂಗ್ ಸಾಯಿಕುಮಾರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Spread the love
Translate »
Right Ad