Sandalwood Leading OnlineMedia

`Forever’ ಸುಮಧರ ತ್ರಿಕೋನ ಪ್ರೇಮಕಾವ್ಯ.

 

 

ಇತ್ತೀಚಿನ ದಿನಗಳಲ್ಲಿ ತಮ್ಮ ಅದ್ಭುತ ಪ್ರತಿಭೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಗಳಿದೆ. ಅದರಲ್ಲಿ ವಿಡಿಯೋ ಸಾಂಗ್ ಕೂಡ ಒಂದು. ಎಷ್ಟೊಂದು ವಿಡಿಯೋ ಸಾಂಗ್ಸ್‌ ಚಿತ್ರಗೀತೆಗಳನ್ನು ಮೀರಿಸುವಷ್ಟು ಅದ್ದೂರಿಯಾಗಿರುತ್ತದೆ.

 

ಇದನ್ನೂ ಓದಿ:- ಕುತೂಹಲ‌ ಮೂಡಿಸಿದೆ  “ಸ್ಪೂಕಿ ಕಾಲೇಜ್”ನ ಟೀಸರ್

 

ಯು.ಎಸ್ ನಿವಾಸಿ ಆದರ್ಶ್ ಅಯ್ಯಂಗಾರ್ ಅವರು “ಫಾರೆವರ್” ಎಂಬ ಅದ್ದೂರಿ ವಿಡಿಯೋ ಸಾಂಗ್ ನಿರ್ಮಾಣ ಮಾಡಿದ್ದಾರೆ. ತ್ರಿಕೋನ ಪ್ರೇಮಕಥೆಯ ಈ ಸುಂದರ ಪ್ರೇಮಕಾವ್ಯವನ್ನು ರಕ್ಷಿತ್ ತೀರ್ಥಹಳ್ಳಿ ನಿರ್ದೇಶಿಸಿದ್ದಾರೆ.

ಆದರ್ಶ್ ಅಯ್ಯಂಗಾರ್, ಸಿರಿ ಪ್ರಹ್ಲಾದ್, ಸುಮನ್, ರಾಜ್, ದರ್ಶನ್ ಕುಮಾರ್ ಇದರಲ್ಲಿ ನಟಿಸಿದ್ದಾರೆ. ಕಾಲೇಜು ಜೀವನದಲ್ಲಿ ಪ್ರೀತಿ, ಪ್ರೇಮ ಸಾಮಾನ್ಯ. “ಫಾರೆವರ್” ಸಹ ಕಾಲೇಜ್ ವೊಂದರಲ್ಲಿ ನಡೆಯುವ ತ್ರಿಕೋನ ಪ್ರೇಮಕಥೆಯನ್ನಾಧರಿಸಿದೆ‌. ಕೆಲವು

 ಪ್ರೇಮ ಪ್ರಕರಣಗಳು ಮನೆಯವರಿಂದ ದೂರವಾಗುತ್ತದೆ. ಆದರೆ “ಫಾರೆವರ್” ನಲ್ಲಿ ಇದು  ಯಾವುದೇ ಅಡೆತಡೆಗಳು ಇಲ್ಲದಿದ್ದರೂ, ವಿಧಿಯಿಂದ ಪ್ರೇಮಕಥೆ ತಿರುವು ಪಡೆದುಕೊಳ್ಳುತ್ತದೆ. ಹಾಗಾಗಿ “ಫಾರೆವರ್” ಗೆ “ಪ್ರೀತಿಯಂಬ ರಹದಾರಿಯಲ್ಲಿ ವಿಧಿಯೆಂಬ ಅನಿರೀಕ್ಷಿತ ನಿಲ್ದಾಣ” ಎಂಬ ಅಡಿಬರಹವಿದೆ. ಪ್ರೇಮಿಗಳ ಭಾವನೆ ಮತ್ತು ಹಾಡಿನ ಅಂತ್ಯ ಪ್ರೀತಿಯ ನಿರೀಕ್ಷೆಯನ್ನು ಪ್ರೇಮಿಗಳಲ್ಲಿ ಸದಾ ಇರುವಂತೆ ಮಾಡುವುದು ಈ ಹಾಡಿನ ವಿಶೇಷ.

 

 

ಇದನ್ನೂ ಓದಿ:- “ವೀರ ಕಂಬಳ”ದ ಪರ ಪ್ರಕಾಶ್ ರೈ ವಾದ, ಪ್ರತಿವಾದಿಯಾಗಿ ರವಿಶಂಕರ್

 

ಮೂಲತಃ ಇಲ್ಲಿಯವರಾಗಿದ್ದರೂ ಯು.ಎಸ್ ನಲ್ಲಿ ನೆಲೆಸಿರುವ ಆದರ್ಶ್ ಅಯ್ಯಂಗಾರ್ ಈ ಹಿಂದೆ ಕೂಡ ಕೆಲವು ವಿಡಿಯೋ ಸಾಂಗ್ ಗಳನ್ನು ನಿರ್ಮಿಸಿ, ನಟಿಸಿದ್ದಾರೆ. “ಫಾರೆವರ್” ಇತ್ತೀಚೆಗೆ ಬಿಡುಗಡೆಯಾಗಿದ್ದು, ನೋಡುಗರ ಹಾಗೂ ಕೇಳುಗರ ಮನ ಗೆದ್ದಿದೆ.ಹಿಂದೆ “ಹೊಂಬಣ್ಣ” ಎಂಬ ಚಿತ್ರ ನಿರ್ದೇಶಿಸಿದ್ದ ರಕ್ಷಿತ್ ತೀರ್ಥಹಳ್ಳಿ ಈ ಹಾಡನ್ನು ನಿರ್ದೇಶಿಸಿದ್ದಾರೆ. ದರ್ಶನ್ ಕುಮಾರ್ ಸಂಗೀತ ಹಾಗೂ ಗೀತರಚನೆ, ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ ಹಾಗೂ ಸುಧೀರ್ ಎಸ್ ಜೆ ಅವರ ಸಂಕಲನ “ಫಾರೆವರ್” ಗಿದೆ.

 

ಈ ವಿಡಿಯೋ ಸಾಂಗ್ ವೀಕ್ಷಿಸಿರುವ ನಟಿ ರುಕ್ಮಿಣಿ ವಸಂತ್, ನಿರ್ದೇಶಕ ಪ್ರೀತಂ ಗುಬ್ಬಿ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆದರ್ಶ್ ಅಯ್ಯಂಗಾರ್ ತಮ್ಮ ಶ್ರೀಕೃಷ್ಣ ಪ್ರೊಡಕ್ಷನ್ಸ್ ಮೂಲಕ ನೂತನ ಪ್ರತಿಭೆಗಳಿಗೆ ಅವಕಾಶ ನೀಡುವ ಯೋಜನೆ ಹಾಕಿಕೊಂಡಿದ್ದಾರೆ.

 

Share this post:

Related Posts

To Subscribe to our News Letter.

Translate »