Sandalwood Leading OnlineMedia

ದಾಖಲೆಗೆ ಬೆಲೆಗೆ ಮಾರಾಟವಾದ ‘ವಿಕ್ರಾಂತ್ ರೋಣ’ ಚಿತ್ರದ ಓವರ್‌ಸೀಸ್ ರೈಟ್ಸ್

ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರವು ಓವರ್ ಸೀಸ್ ಮಾರುಕಟ್ಟೆಯಲ್ಲಿ ದಾಖಲೆಯ ಮೊತ್ತಕ್ಕೆ ವ್ಯಾಪಾರವಾದ ಮೊದಲ ಕನ್ನಡ ಚಿತ್ರವಾಗಿದೆ.

ವಿದೇಶಿ ಮಾರುಕಟ್ಟೆಯ ‘ವಿಕ್ರಾಂತ್ ರೋಣ’ ಚಿತ್ರದ ಹಕ್ಕುಗಳನ್ನು ‘ಒನ್ ಟ್ವೆಂಟಿ 8 ಮೀಡಿಯಾ’ ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ವಿದೇಶಿ ಹಕ್ಕುಗಳು ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ನಿರ್ಮಾಪಕ ಜಾಕ್ ಮಂಜುನಾಥ್ ಮಾತನಾಡಿ, ‘ಸಿನಿಮಾದ ಕಂಟೆಂಟ್ ಯೂನಿವರ್ಸಲ್ ಆಗಿರುತ್ತದೆ ಎಂಬುದನ್ನು ನಾನು ಯಾವಾಗಲೂ ಕಾಪಾಡಿಕೊಂಡು ಬಂದಿದ್ದೇನೆ. ಭಾವನೆಗಳು ಪ್ರಪಂಚದಾದ್ಯಂತ ಒಂದೇ ಸ್ವರ ಮತ್ತು ತಾಳದಲ್ಲಿ ಕೂರುತ್ತದೆ ಮತ್ತು ಈ ಒಪ್ಪಂದವು ಅದಕ್ಕೆ ಸಾಕ್ಷಿಯಾಗಿದೆ. ಖರೀದಿಯ ಬಗ್ಗೆ ಅತ್ಯಂತ ಸಂತೋಷವಿದೆ ಮತ್ತು ಉಳಿದ ವಿವರಗಳನ್ನು ಆದಷ್ಟು ಬೇಗ ಪ್ರಕಟಿಸುತ್ತೇನೆ.’ ‘ಇದು ಕನ್ನಡ ಚಿತ್ರಕ್ಕೆ ಅತ್ಯಧಿಕ ಮತ್ತು ಇತರ ದಕ್ಷಿಣ ಭಾರತದ ಭಾಷೆಗಳಿಗೆ ಸಮಾನವಾಗಿದೆ’ ಎಂದು ಮಂಜುನಾಥ್ ಅವರು ಹೇಳಿದರು.

‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವದಾದ್ಯಂತ 3D ನಲ್ಲಿ ಬಿಡುಗಡೆಯಾಗಲಿದೆ. ಅನುಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವಾದ್ಯಂತ 3D ನಲ್ಲಿ ಬಿಡುಗಡೆಯಾಗಲಿದೆ, ಇದರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಝೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದ್ದು, ಜಾಕ್ ಮಂಜುನಾಥ್ ಅವರು ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡುತ್ತಿದ್ದಾರೆ.

Share this post:

Related Posts

To Subscribe to our News Letter.

Translate »