Sandalwood Leading OnlineMedia

ನಾಳೆಯಿಂದ ಲಾಲ್‌ಬಾಗ್‌ನಲ್ಲಿಫಲಪುಷ್ಪ ಪ್ರದರ್ಶನ: ಪುಷ್ಪಗಳಲ್ಲಿ ಪುನೀತ್‌ ನೋಡಲು ಬನ್ನಿ

ನಾಳೆಯಿಂದ ಲಾಲ್‌ಬಾಗ್‌ನಲ್ಲಿಫಲಪುಷ್ಪ ಪ್ರದರ್ಶನ: ಪುಷ್ಪಗಳಲ್ಲಿ ಪುನೀತ್‌ ನೋಡಲು ಬನ್ನಿ

 

ನಾಳೆಯಿಂದ 10 ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ ಪುಷ್ಪ ಲೋಕ ಅನಾವರಣಗೊಳ್ಳಲಿದೆ. ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ನೆನಪಿನಾರ್ಥವಾಗಿ ಈ ಬಾರಿ ಫ್ಲವರ್ ಶೋ ನಡೆಯುತ್ತಿದ್ದು, 10 ಲಕ್ಷಕ್ಕೂ ಹೆಚ್ಚು ಹೂವುಗಳಿಂದ ವಿವಿಧ ಆಕೃತಿಗಳನ್ನು ಸಿಂಗರಿಸಲಾಗಿದೆ.

ಅಪ್ಪು-ರಾಜ್‌ರ ಜೀವನ ಪ್ರದರ್ಶನ ಫಲಪುಷ್ಪ ಪ್ರದರ್ಶನವು ಇಬ್ಬರು ಮೇರು ನಟರ ಕಲೆ, ಜೀವನದ ಮೇಲೆ ಬೆಳಕು ಚೆಲ್ಲಲಿದೆ. ಡಾ.ರಾಜ್‌ ಅವರು ಅಭಿನಯಿಸಿದ ಮೊದಲ ಚಿತ್ರ ಬೇಡರ ಕಣ್ಣಪ್ಪದಿಂದ ಕೊನೆಯ ಚಿತ್ರ ಶಬ್ದವೇಧಿ ವರೆಗೆ ಹಾಗೂ ಅಪ್ಪು ಅವರು ಬಾಲನಟನಾಗಿ ನಟಿಸಿದ ಮೊದಲ ಚಿತ್ರದಿಂದ ಹಿಡಿದು ಅವರ ಎಲ್ಲ ಚಿತ್ರಗಳ ಉದ್ಯಾನದಲ್ಲಿನ ಗಾಜಿನ ಮನೆಯೆ 110ಡಿಜಿಟಲ್ ಪರದೆ ಮೇಲೆ ಪ್ರದರ್ಶನಗೊಳ್ಳಲಿವೆ. ಇದರ ಜತೆಗೆ ಪ್ರದರ್ಶನಕ್ಕೆ ಆಗಮಿಸುವ ಜನರು ಡಾ.ರಾಜ್‌ ಅವರು ಬೆಳೆದ ಗಾಜನೂರಿನ ಮನೆ, ಪುನೀತ್ ಅವರು ಅನಾಥ ಮಕ್ಕಳಿಗಾಗಿ ನಿರ್ಮಿಸಿ ಶಕ್ತಿಧಾಮ ಇನ್ನಿತರ ಅಂಶಗಳನ್ನು ಕಣ್ತುಂಬಿಕೊಳ್ಳಬಹುದು.

ನಾಳೆಯಿಂದ ಆಗಸ್ಟ್ 15ರ ವರೆಗೂ ಫಲಪುಷ್ಪ ಪ್ರದರ್ಶನ ಇರಲಿದ್ದು, ಪ್ರತಿದಿನ ನಿತ್ಯ 12 ಗಂಟೆಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರಲಿದೆ. ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಜಾ ದಿನಗಳಲ್ಲಿ 75 ರೂ.ಪಾಯಿ ಪ್ರವೇಶ ಶುಲ್ಕ ಇದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

 

Share this post:

Translate »