ಯುವ ನಿರ್ದೇಶಕ ಕಿಶೋರ್ ನಿರ್ದೇಶನದ ಮರ್ಡರ್ ಮಿಸ್ಟ್ರಿ ಕಥಾಹಂದರ ಒಳಗೊಂಡ ಫ್ಲ್ಯಾಟ್ #9 ಚಿತ್ರದ ಇಂಟ್ರಸ್ಟಿಂಗ್ ಟ್ರೇಲರ್ ಬಿಡುಗಡೆಯಾಗಿದೆ. ‘ರಾಧಾ ರಮಣ’ ಖ್ಯಾತಿಯ ಸ್ಕಂದ ಅಶೋಕ್, ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಚಂದು ಗೌಡ ಅಭಿನಯದ ಚಿತ್ರ ಫ್ಲ್ಯಾಟ್ #9. ಚಿತ್ರದಲ್ಲಿ ‘ಇಂಗ್ಲೀಷ್ ಮಂಜ’ ಖ್ಯಾತಿಯ ತೇಜಸ್ವಿನಿ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು ಟ್ರೇಲರ್ ಮೂಲಕ ಎದುರುಗೊಂಡ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಚಂದು ಗೌಡ ಮಾತನಾಡಿ ಚಿತ್ರದಲ್ಲಿ ಸೈಕಿಯಾಟ್ರಿಸ್ಟ್ ಪಾತ್ರವನ್ನು ನಿರ್ವಹಿಸಿದ್ದು, ಈ ಪಾತ್ರ ತುಂಬಾ ಡಿಫ್ರೆಂಟ್ ಅಂತ ಅನ್ನಿಸ್ತು ಜೊತೆಗೆ ಸ್ಕಂದ ಅಶೋಕ್ ನನ್ನ ಅದ್ಭುತ ಗೆಳೆಯ ಆತನಿಗಾಗಿ ಒಪ್ಪಿಕೊಂಡೆ ಎಂದೇ ಹೇಳಬಹುದು. ಸಿನಿಮಾ ಚಿತ್ರೀಕರಣ ಒಂದೊಳ್ಳೆ ಅನುಭವವನ್ನು ನೀಡಿದೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದ್ರು.
“ನಾಟ್ ಔಟ್” ಇದು ಹುಲಿ – ಕುರಿ ಆಟ.
ನಿರ್ದೇಶಕ ಕಿಶೋರ್ ಮಾತನಾಡಿ ನನ್ನ ಮೊದಲ ಸಿನಿಮಾವಿದು. ಕ್ರೈಂ ಬೇಸ್ಡ್ ಸಿನಿಮಾ ಕಥೆಯಿದು, ಹೊಸಬನಾದರು ನಾನು ಮಾಡಿಕೊಂಡ ಕಥೆ ಕೇಳಿ ನಂಬಿಕೆಯಿಟ್ಟು ನನ್ನ ಜೊತೆ ಸಿನಿಮಾ ಮಾಡಲು ಸ್ಕಂದ ಅಶೋಕ್ ಹಾಗೂ ಚಂದು ಗೌಡ ಹಾಗೂ ತೇಜಸ್ವಿನಿ ಶರ್ಮಾ ಒಪ್ಪಿಕೊಂಡ್ರು. ಇಡೀ ಚಿತ್ರತಂಡ ಸಪೋರ್ಟ್ ಮಾಡಿದೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದ್ರು.ಸ್ಕಂದ ಅಶೋಕ್ ಮಾತನಾಡಿ ಕಿಶೋರ್ ತುಂಬಾ ಎಫರ್ಟ್ ಹಾಕಿ ಈ ಸಿನಿಮಾ ಮಾಡಿದ್ದಾರೆ. ಒಂದೊಳ್ಳೆ ಕಂಫರ್ಟ್ ಝೋನ್ ನಲ್ಲಿ ಚಿತ್ರೀಕರಣ ಮಾಡಿ ಮುಗಿಸಿದ್ದೇವೆ. ಚಿತ್ರದಲ್ಲಿ ಇನ್ವೇಷ್ಟಿಗೇಶನ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಎಂದಿನಂತೆ ನಿಮ್ಮೆಲ್ಲರ ಪ್ರೀತಿ ಸಹಕಾರ ಈ ಸಿನಿಮಾ ಮೇಲಿರಲಿ ಎಂದು ಮಾಹಿತಿ ಹಂಚಿಕೊಂಡ್ರು.
“ತಿಮ್ಮಯ್ಯ & ತಿಮ್ಮಯ್ಯ” : ಬಹು ನಿರೀಕ್ಷಿತ ಈ ಚಿತ್ರ ಡಿಸೆಂಬರ್ 2 ರಂದು ತೆರೆಗೆ
ನಾಯಕಿ ತೇಜಸ್ವಿನಿ ಶರ್ಮಾ ಮಾತನಾಡಿ ಇದು ನಾನು ಸೈನ್ ಮಾಡಿದ ಮೊದಲ ಸಿನಿಮಾ. ಇಂಜಿನಿಯರಿಂಗ್ ಮುಗಿಸಿ ರಿಸರ್ಚ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದೆ. ವರ್ಲ್ಡ್ ಸೂಪರ್ ಮಾಡೆಲ್ ಸೌತ್ ಏಷ್ಯಾ ಟೈಟಲ್ ವಿನ್ನರ್ ಕೂಡ ಆಗಿದ್ದೇನೆ. ಅದಾದ ನಂತರ ಅಪ್ರೋಚ್ ಆದ ಮೊದಲ ಸಿನಿಮಾವಿದು. ಸಿನಿಮಾದಲ್ಲಿ ಒಂದೊಳ್ಳೆ ಕಟೆಂಟ್ ಇದೆ. ನನ್ನ ಪಾತ್ರದ ಸುತ್ತ ಇಡೀ ಕಥೆ ಸುತ್ತುತ್ತೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಡಿಸೆಂಬರ್ 2ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಲ್ಲರೂ ಸಿನಿಮಾ ನೋಡಿ ಚಿತ್ರತಂಡಕ್ಕೆ ಹರಸಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರಿ.ಕಿಶೋರ್ ಕ್ರಿಯೇಷನ್ಸ್ ಬ್ಯಾನರ್ ನಡಿ ಕಿಶೋರ್, ಸಂತೋಷ್ ಕುಮಾರ್, ಸಂತೋಷ್ ಜಿ ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದಿನೇಶ್ ಕುಮಾರ್ ಸಂಗೀತ ನಿರ್ದೇಶನ, ರಾಕೇಶ್ ಸಿ ತಿಲಕ್ ಕ್ಯಾಮೆರಾ ವರ್ಕ್, ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಗಣೇಶ್ ಮಲ್ಲಯ್ಯ ಸಂಕಲನ ಚಿತ್ರಕ್ಕಿದೆ. ಉಗ್ರಂ ಶರತ್, ಗಣೇಶ್ ರಾವ್ ಒಳಗೊಂಡ ತಾರಾಗಣವಿದೆ.