Sandalwood Leading OnlineMedia

ಒಂದು ಸಿನಿಮಾ ಕಥೆ ಹೇಳಲು ಬರ್ತಿದೆ ‘ಫಸ್ಟ್ ಡೇ ಫಸ್ಟ್ ಶೋ’ – ಗಿರೀಶ್.ಜಿ ನಿರ್ದೇಶನದ ಸಿನಿಮಾ

 

ಪ್ರೇಕ್ಷಕರಿಗೆ ಎರಡು ಗಂಟೆಗಳ ಕಾಲ ಭರಪೂರ ಮನರಂಜನೆ ನೀಡೋ ಒಂದು ಸಿನಿಮಾ ಹಿಂದೆ ನೂರಾರು ಕಥೆ,ವ್ಯಥೆಗಳಿರುತ್ತೆ. ತೆರೆ ಮೇಲೆ ಕಲರ್ ಫುಲ್ ಆಗಿ ಬರುವ ಒಂದು ಸಿನಿಮಾ ಹಿಂದೆ ಏನೆಲ್ಲ ನಡೆದಿರುತ್ತೆ, ಎಷ್ಟೆಲ್ಲ ಶ್ರಮವಿರುತ್ತೆ ಇದನ್ನೆಲ್ಲಾ ಹೇಳಲೆಂದೇ ಸಿನಿಮಾವೊಂದು ಸಿದ್ದವಾಗುತ್ತಿದೆ. ಆ ಚಿತ್ರದ ಹೆಸರೇ ‘ಫಸ್ಟ್ ಡೇ ಫಸ್ಟ್ ಶೋ. ಗಿರೀಶ್.ಜಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ. ಭಾ.ಮ.ಹರೀಶ್, ಸುಂದರ್ ರಾಜ್ ಹಾಗೂ ಭಾ.ಮ.ಗಿರೀಶ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಒಂದ್ ಕಥೆ ಹೇಳ್ಲಾ, ‘ವಾವ್, ‘ಶಾಲಿವಾಹನ ಶಕೆ ಸಿನಿಮಾ ಮೂಲಕ ನಟ ಕಂ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಗಿರೀಶ್.ಜಿ ನಿರ್ದೇಶನದ ಚಿತ್ರವಿದು. ಕಮರ್ಶಿಯಲ್ ಥ್ರಿಲ್ಲರ್ ಜಾನರ್ ಒಳಗೊಂಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ ಗಿರೀಶ್.ಜಿ.

 

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಉದ್ಘಾಟನೆ: ಪದ್ಮಶ್ರೀ ಡಾ. ಗಿರೀಶ್​ ಕಾಸರವಳ್ಳಿ, ಡಾ. ವಿಜಯಮ್ಮ ಉಪಸ್ಥಿತಿ

ಚಿತ್ರರಂಗಕ್ಕೆ ಈ ಸಿನಿಮಾ ಒಂದು ಟ್ರಿಬ್ಯೂಟ್ ಎನ್ನಬಹುದು. ಶುಕ್ರವಾರ ಫಸ್ಟ್ ಡೇ ಫಸ್ಟ್ ಶೋ ತೆರೆ ಕಾಣೋ ಒಂದು ಸಿನಿಮಾ ಹಿಂದೆ ಎಷ್ಟೆಲ್ಲ ಘಟನೆಗಳು ನಡೆದಿರುತ್ತೆ ಅನ್ನೋದನ್ನು ಒಂದಿಷ್ಟು ಎಮೋಶನಲ್ ಜರ್ನಿ ಜೊತೆಗೆ ಕಟ್ಟಿಕೊಡಲಾಗಿದೆ. ಬರೀ ಇದಿಷ್ಟೇ ಅಲ್ಲದೇ ಹಲವು ವಿಚಾರಗಳು ಚಿತ್ರದಲ್ಲಿದೆ. ಈಗಾಗಲೇ ಶೇಕಡಾ 70ರಷ್ಟು ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸಂಕ್ರಾಂತಿ ಹಬ್ಬದಂದು ಟೈಟಲ್ ಅನಾವರಣ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ವಿ ಅದರಂತೆ ಇಂದು ಟೈಟಲ್ ಅನಾವರಣ ಆಗಿದೆ. ಈ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದ್ದೇವೆ ಎಂದು ನಿರ್ದೇಶಕ ಗಿರೀಶ್. ಜಿ ಮಾಹಿತಿ ಹಂಚಿಕೊಂಡಿದ್ದಾರೆ.

ಫಸ್ಟ್ ಡೇ ಫಸ್ಟ್ ಶೋ ಮೂಲಕ ಬಾಲನಟನಾಗಿ ಖ್ಯಾತಿ ಗಳಿಸಿದ್ದ ರೋಹಿತ್ ಶ್ರೀನಾಥ್ ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಿದ್ದು, ಅನಿರುದ್ ಶಾಸ್ತ್ರಿ, ಬಿಎಂ ವೆಂಕಟೇಶ್, ಹರೀಶ್ ಅರಸು ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ.

 

ತೂತು ಮಡಿಕೆ ನಿರ್ಮಾಪಕರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಸನ್ನಿದಾನ ಪಿ.ಒ’

ಬೆಂಗಳೂರು, ಚೆನೈನಲ್ಲಿ ಚಿತ್ರೀಕರಣವನ್ನು ನಡೆಸಲಾಗಿದ್ದು, ಮಾನಿಕ ಮೂವೀಸ್ ಬ್ಯಾನರ್ ನಡಿ ಊರ್ಮಿಳಾ ಕಿರಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹರಿ ಅಜಯ್ ಮತ್ತು ಕಾರ್ತಿಕ್ ಭೂಪತಿ ಸಂಗೀತ ನಿರ್ದೇಶನ, ರಾಕೇಶ್ ಸಿ ತಿಲಕ್ ಮತ್ತು ಅರುಣ್ ಕುಮಾರ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

 

Share this post:

Related Posts

To Subscribe to our News Letter.

Translate »