Sandalwood Leading OnlineMedia

ಕಾಟೇರ ಕಲೆಕ್ಷನ್ ಅಬ್ಬರ: ಮೊದಲ ದಿನ ದರ್ಶನ್ ಸಿನಿಮಾ ಗಳಿಸಿದ್ದೆಷ್ಟು?

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್‍ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾ ನಿನ್ನೆ ಬಿಡುಗಡೆಯಾಗಿ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ಪಡೆದಿತ್ತು.ಸಿನಿಮಾ ಬಗ್ಗೆ ಸಖತ್ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ಹೀಗಾಗಿ ಜನ ಥಿಯೇಟರ್ ಕಡೆಗೆ ಸಾಕಷ್ಟು ಸಂಖ್ಯೆಯಲ್ಲಿ ಬಂದು ಸಿನಿಮಾ ನೋಡಿಕೊಂಡು ಹೋಗಿದ್ದಾರೆ. ಇಂದೂ ಕೂಡಾ ಅದೇ ಧಾವಂತವಿದೆ.

ಹೀಗಾಗಿ ಮೊದಲ ದಿನ ಕಾಟೇರ ಬರೋಬ್ಬರಿ 19.79 ಕೋಟಿ ರೂ. ಗಳಿಕೆ ಮಾಡಿದೆ. ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ಇಲ್ಲಿ ಮಾತ್ರ ಪ್ರದರ್ಶನಗೊಂಡರೂ ಇಷ್ಟರಮಟ್ಟಿಗೆ ಗಳಿಕೆ ಮಾಡಿದ್ದು ವಿಶೇಷವೇ ಸರಿ.

ಒಂದು ವೇಳೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಿದ್ದರೆ ಗಳಿಕೆ ಇನ್ನಷ್ಟು ಹೆಚ್ಚಾಗುತ್ತಿತ್ತು. ಸಲಾರ್, ಡಂಕಿಯಂತಹ ಪರಭಾಷಾ ಸಿನಿಮಾಗಳು ಥಿಯೇಟರ್ ನಲ್ಲಿದ್ದರೂ ಅಪ್ಪಟ ಕನ್ನಡ ಸಿನಿಮಾವನ್ನು ಜನ ಅಪ್ಪಿಕೊಂಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಚಿತ್ರತಂಡವೂ ಜನರ ಪ್ರತಿಕ್ರಿಯೆಯಿಂದ ಖುಷಿಯಾಗಿದೆ.

Share this post:

Related Posts

To Subscribe to our News Letter.

Translate »