ಸಲ್ಮಾನ್ ಖಾನ್ ರನ್ನು ಕೊಲ್ಲುವ ಸತತವಾಗಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ಕಳೆದ ತಿಂಗಳಷ್ಟೆ ಸಲ್ಮಾನ್ ಖಾನ್ರ ಮನೆಯ ಮೇಲೆ ಗುಂಡಿನ ದಾಳಿಯಾಗಿತ್ತು. ಮುಂಬೈನಲ್ಲಿರುವ ಸಲ್ಮಾನ್ ಖಾನ್ರ ಗ್ಯಾಲೆಕ್ಸಿ ಅಪಾರ್ಟ್ಮೆಂಟ್ನ ಕಿಟಕಿಯ ಮೇಲೆ, ಬೈಕ್ನಲ್ಲಿ ಬಂದ ಇಬ್ಬರು ಗುಂಡು ಹಾರಿಸಿ ಪರಾರಿಯಾಗಿದ್ದರು.
ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡು ಹಾರಿಸಿದ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಬಂದೂಕನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇದೀಗ ತನಿಖೆ ಮುಂದುರೆಸಿದಂತೆ ಮತ್ತೊಬ್ಬ ಭೂಗತ ಪಾತಕಿಯ ಹೆಸರು ಮೇಲೆ ಬಂದಿದೆ.
ಸಲ್ಮಾನ್ ಖಾನ್ ಹತ್ಯೆ ಪ್ರಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಅಪರಾಧ ತನಿಖಾ ವಿಭಾಗವು ಭೂಗತ ಪಾತಕಿ ರೋಹಿತ್ ಗೊದಾರ ವಿರುದ್ಧ ಪ್ರಕರಣ ದಾಖಲಿಸಿದೆ. ಸಲ್ಮಾನ್ ಖಾನ್ ರ ಗ್ಯಾಲೆಕ್ಸಿ ಅಪಾರ್ಟ್ಮೆಂಟ್ ಮೇಲೆ ಗುಂಡು ಹಾರಿಸಿದ ಪ್ರಕರಣದ ರೂವಾರಿ ಇದೇ ರೋಹಿತ್ ಗೊದಾರ ಎನ್ನಲಾಗುತ್ತಿದೆ.
ಆ ಪ್ರಕರಣದಲ್ಲಿ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಆರು ಮಂದಿಯನ್ನು ಬಂಧಿಸಲಾಗಿದೆ ಇನ್ನುಳಿದವರಿಗಾಗಿ ತನಿಖೆ ಜಾರಿಯಲ್ಲಿದೆ.
ಇದನ್ನೂ ಓದಿ :ಪ್ರೈಮ್ ವೀಡಿಯೋ’ದ `ದಿ ರಿಂಗ್ಸ್ ಆಫ್ ಪವರ್ ಸೀಸನ್-2 ‘ ಟೀಸರ್ ಬಿಡುಗಡೆ; 2024 ಆಗಸ್ಟ್ 29 ರಂದು ಪ್ರಸಾರ
ಸಲ್ಮಾನ್ ಖಾನ್ ಹತ್ಯೆ ಪ್ರಯತ್ನದಲ್ಲಿ ಮೊದಲು ಕೇಳಿ ಬರುತ್ತಿರುವ ಹೆಸರು ಲಾರೆನ್ಸ್ ಬಿಷ್ಣೋಯಿಯದ್ದು. ಜೈಲಿನಲ್ಲಿರುವ ಈತ ದೊಡ್ಡ ಭೂಗತ ಪಾತಕಿಗಳ ಗುಂಪಿನ ನಾಯಕ. ಲಾರೆನ್ಸ್ ಜೊತೆಗೆ ಬ್ರಾರ್ ಬ್ರದರ್ಸ್ ಹೆಸರು ಸಹ ಕೇಳಿ ಬರುತ್ತಿದೆ.
ಕೆನಡಾವನ್ನು ತಮ್ಮ ನೆಲೆ ಮಾಡಿಕೊಂಡಿರುವ ಇವರು ಸಹ ದೊಡ್ಡ ಭೂಗತ ಪಾತಕಿಗಳ ಗುಂಪೊಂದನ್ನು ನಡೆಸುತ್ತಿದ್ದು ಲಾರೆನ್ಸ್ ಜೊತೆಗೂ ಆಪ್ತ ಬಂಧ ಹೊಂದಿದ್ದಾರೆ. ಈ ಮೂವರಲ್ಲದೆ ಇದೀಗ ಮತ್ತೊಬ್ಬ ಭೂಗತ ಪಾತಕಿಯ ಹೆಸರು ಈ ಪ್ರಕರಣದಲ್ಲಿ ಮುನ್ನೆಲೆಗೆ ಬಂದಿದೆ.