ಮುಂಬೈ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಾಸವಿರುವ ಮನೆಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.ಮುಂಬೈನ ಬಾಂದ್ರಾದ ಪಾಲಿ ಹಿಲ್ಸ್ ನವ್ರೋಜ್ ಹಿಲ್ ಸೊಸೈಟಿ ಅಪಾರ್ಟ್ ಮೆಂಟ್ ನ ಮನೆಯೊಂದರ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಜಾಕ್ವೆಲಿನ್ ಇದೇ ಕಟ್ಟಡದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಾರೆ. ಆದರೆ ಅವರ ಮನೆಗೆ ಯಾವುದೇ ಹಾನಿಯಾಗಿಲ್ಲ.
ಈ ಕಟ್ಟಡದಲ್ಲಿ ಒಟ್ಟು 17 ಅಂತಸ್ತುಗಳಿವೆ. ಸದ್ಯದ ವರದಿ ಪ್ರಕಾರ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಅಗ್ನಿ ಶಾಮಕ ದಳ ಸಿಬ್ಬಂದಿ ತಕ್ಷಣವೇ ಆಗಮಿಸಿದ್ದರಿಂದ ಬೆಂಕಿ ನಂದಿಸಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಕಟ್ಟಡದ 13 ನೇ ಅಂತಸ್ತಿನಲ್ಲಿ ಘಟನೆ ನಡೆದಿದೆ.ಕಳೆದ ವರ್ಷವಷ್ಟೇ ಈ ಬಿಲ್ಡಿಂಗ್ ನಲ್ಲಿ ಜಾಕ್ವೆಲಿನ್ ಐದು ಬಿಎಚ್ ಕೆ ಮನೆ ಮಾಡಿದ್ದರು. ಇದರ ವಿಡಿಯೋವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕೇವಲ ಜಾಕ್ವೆಲಿನ್ ಮಾತ್ರವಲ್ಲ, ಅನೇಕ ಸೆಲೆಬ್ರಿಟಿಗಳು, ಗಣ್ಯರು ಇದೇ ಅಪಾರ್ಟ್ ಮೆಂಟ್ ನಲ್ಲಿ ಮನೆ ಹೊಂದಿದ್ದಾರೆ.