Sandalwood Leading OnlineMedia

ನಾನು ಕೂಡ ಒಡೆದ ಕುಟುಂಬದಿಂದ ಬಂದವನು : ನಾಗಚೈತನ್ಯ

ಪ್ರೀತಿಸಿ ಮದುವೆ ಆಗಿದ್ದ ತೆಲುಗು ನಟ ನಾಗಚೈತನ್ಯಾ ಹಾಗೂ ಸಮಂತಾ ಬಳಿಕ ಡಿವೋರ್ಸ್ ಪಡೆದಿದ್ದರು. ಇದೇ ಮೊದಲ ಬಾರಿಗೆ ನಾಗಚೈತನ್ಯಾ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್ ಬಳಿಕ ನಾನು ಸೋಶಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಮಾಡಿದರೂ ನೆಗೆಟಿವ್ ಕಾಮೆಂಟ್ ಬರುತ್ತದೆ. ಅದನ್ನು ನಾನು ಕೂಡ ಓದುತ್ತೇನೆ. ನಾವಿಬ್ಬರು ಪರಸ್ಪರ ಒಪ್ಪಿ ಡಿವೋರ್ಸ್ ನಿರ್ಧಾರ ತೆಗೆದುಕೊಂಡೆವು. ಅದನ್ನು ಒಟ್ಟಿಗೆ ಪೋಸ್ಟ್ ಮಾಡಿ ಹಂಚಿಕೊಂಡಿದ್ದೆವು. ವೈಯಕ್ತಿಕ ಕಾರಣಕ್ಕೆ ಆ ನಿರ್ಣಯ ಕೈಗೊಂಡೆವು. ಈಗ ನಮ್ಮ ದಾರಿಯಲ್ಲಿ ನಾವು ಮುಂದುವರೆಯುತ್ತಿದ್ದೇವೆ. ನಮ್ಮ ಬದುಕಿನಲ್ಲಿ ಕೊಂಡ ಪ್ರೈವೆಸಿ ಬೇಕು ಎಂದು ಕೂಡ ಮನವಿ ಮಾಡಿದ್ದೆವು. ಆದರೆ ನಮ್ಮ ಡಿವೋರ್ಸ್ ವಿಚಾರ ಕೆಲವರಿಗೆ ತಮಾಷೆ ಆಗಿಬಿಟ್ಟಿದೆ

ನಾವಿಬ್ಬರು ದೂರಾದ ಬಳಿಕ ಸಾಕಷ್ಟು ವದಂತಿ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಕಾರಣ ಏನಾದರೂ ಮಾತನಾಡಿದರೆ ಅದು ಮತ್ತೊಂದು ರೀತಿಯಲ್ಲಿ ಸುದ್ದಿ ಆಗಿತ್ತದೆ. ಅದು ಇಷ್ಟವಿಲ್ಲ. ಆದರೆ ಕೆಲವೊಮ್ಮೆ ಈ ಬಗ್ಗೆ ಪ್ರಶ್ನೆಗಳು ಎದುರಾಗಿತ್ತು. ಈ ಬಗ್ಗೆ ಕೇಳಬೇಡಿ ಎಂದು ಹೇಳಿದ್ದು ಇದೆ. ಆದರೂ ಮತ್ತೆ ಮತ್ತೆ ಕೇಳಿ ಅದನ್ನು ಕೆದಕುತ್ತಿದ್ದಾರೆ. ನಮ್ಮ ನಿರ್ಧಾರವನ್ನು ಯಾರು ಗೌರವಿಸಲಿಲ್ಲ. ಇನ್ನಾದರೂ ಫುಲ್‌ಸ್ಟಾರ್ ಇಡಿ. ಈ ಬಗ್ಗೆ ಬರೆಯಬೇಡಿ. ಜನ ಕೂಡ ನಿಮ್ಮ ಕೆಲಸ ನೀವು ನೋಡಿಕೊಳ್ಳಿ.

 

ನಮ್ಮ ಜೀವನದಲ್ಲಿ ನಡೆದಿದ್ದು ಸಾಕಷ್ಟು ಜನರ ಜೀವನದಲ್ಲಿ ನಡೆದಿದೆ. ನನ್ನನ್ನು ಮಾತ್ರ ಯಾಕೆ ಕ್ರಿಮಿನಲ್ ತರ ನೋಡುತ್ತಿದ್ದೀರಾ? ನನಗೂ ಈ ವಿಚಾರದ ಬಗ್ಗೆ ಬಹಳ ಸೂಕ್ಷ್ಮವಾಗಿ ಅರಿವಿದೆ. ಕಾರಣ ನಾನು ಕೂಡ ಒಡೆದ ಕುಟುಂಬದಿಂದ ಬಂದವನು. ಆ ಅನುಭವ ಎಂಥದ್ದು ಎಂದು ನನಗೂ ಗೊತ್ತು. ನಾನು ಡಿವೋರ್ಸ್ ಪಡೆಯುತ್ತೇನೆ ಎಂದರೆ ಎಷ್ಟು ಯೋಚಿಸಿರುತ್ತೇನೆ ಗೊತ್ತಲ್ವಾ? ಎಂದು ನಾಗಚೈತನ್ಯ ಪ್ರಶ್ನೆ ಮಾಡಿದ್ದಾರೆ.

 

Share this post:

Translate »