Allu Arjun: ಅಲ್ಲು ಅರ್ಜುನ್ ಕೂಡ ‘ಪುಷ್ಪ’ ಸರಣಿಯ ಕೆಲಸಗಳ ಕಾರಣಕ್ಕೆ ಬೇರೆ ಸಿನಿಮಾಗಳನ್ನು ಒಪ್ಪಿಲ್ಲ. ಈಗ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಘೋಷಣೆ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸ ಪೂರ್ಣಗೊಂಡ ಬಳಿಕವೇ ಅವರು ‘ಪುಷ್ಪ 3’ನಲ್ಲಿ ಬ್ಯುಸಿ ಆಗಲಿದ್ದಾರೆ. ಇದಕ್ಕೆ ಒಂದಷ್ಟು ಸಮಯ ಹಿಡಿಯಲಿದೆ.
‘ಪುಷ್ಪ’ ಸಿನಿಮಾ (Pushpa Movie) ಸೆಟ್ಟೇರಿದಾಗ ಈ ಚಿತ್ರ ಎರಡು ಭಾಗದಲ್ಲಿ ಬರಲಿದೆ ಎನ್ನುವ ವಿಚಾರ ರಿವೀಲ್ ಆಗಿರಲಿಲ್ಲ. ಆ ಬಳಿಕ ನಿರ್ದೇಶಕರು ಈ ಚಿತ್ರ ಎರಡು ಪಾರ್ಟ್ನಲ್ಲಿ ಬರಲಿದೆ ಎಂದು ಘೋಷಣೆ ಮಾಡಿದರು. ಈಗ ಮೂರನೇ ಪಾರ್ಟ್ ಬಗ್ಗೆ ಚರ್ಚೆ ಶುರುವಾಗಿದೆ. ಪರೋಕ್ಷವಾಗಿ ಅಲ್ಲು ಅರ್ಜುನ್ ಸೇರಿ ಅನೇಕರು ಈ ಬಗ್ಗೆ ಮಾತನಾಡಿದ್ದಾರೆ. ಕೆಲವು ಮೂಲಗಳ ಪ್ರಕಾರ ಈ ಚಿತ್ರಕ್ಕೆ ಸುಕುಮಾರ್ ಅವರು ಟೈಟಲ್ ಕೂಡ ಫೈನಲ್ ಮಾಡಿದ್ದಾರೆ.
‘ಪುಷ್ಪ’ ಚಿತ್ರದ ಮೊದಲ ಭಾಗಕ್ಕೆ ‘ಪುಷ್ಪ: ದಿ ರೈಸ್’ ಎಂದು ಶೀರ್ಷಿಕೆ ಇಡಲಾಗಿತ್ತು. ಈ ಚಿತ್ರದಲ್ಲಿ ಸಾಮಾನ್ಯ ವ್ಯಕ್ತಿ ಪುಷ್ಪರಾಜ್ (ಅಲ್ಲು ಅರ್ಜುನ್) ರಕ್ತಚಂದನದ ಮಾಫಿಯಾ ಕಿಂಗ್ ಆಗುವುದನ್ನು ತೋರಿಸಲಾಗಿದೆ. ಎರಡನೇ ಭಾಗಕ್ಕೆ ‘ಪುಷ್ಪ: ದಿ ರೂಲ್’ ಶೀರ್ಷಿಕೆ ಇಡಲಾಗಿದೆ. ಹೆಸರೇ ಹೇಳುವಂತೆ ಇದು ಪುಷ್ಪರಾಜ್ ಈಗ ಮಾಫಿಯಾ ಕಿಂಗ್ ಆಗಿದ್ದು, ಆತನ ಆಡಳಿತ ತೋರಿಸಲು ನಿರ್ದೇಶಕ ಸುಕುಮಾರ್ ರೆಡಿ ಆಗಿದ್ದಾರೆ. ಮೂರನೇ ಭಾಗಕ್ಕೆ ‘ಪುಷ್ಪ: ದಿ ರೋರ್’ ಶೀರ್ಷಿಕೆ ಫೈನಲ್ ಆಗಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಮತ್ತಷ್ಟು ರಗಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಪ್ರಕಾಶ್ ರಾಜ್ ಹುಟ್ಟುಹಬ್ಬ : ನೇರನುಡಿಯಿಂದ ಟೀಕೆಗೆ ಒಳಗಾಗುವ ನಟನ ಬಗ್ಗೆ ಇಲ್ಲಿದೆ ಮಾಹಿತಿ
ನಿರ್ದೇಶಕ ಸುಕುಮಾರ್ ಅವರ ನಿರ್ದೇಶನದ ‘ರಂಗಸ್ಥಲಂ’ ಸಿನಿಮಾ 2018ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಅವರ ಸಂಪೂರ್ಣ ಗಮನ ‘ಪುಷ್ಪ’ ಸರಣಿ ಮೇಲೆ ಇದೆ. ಅಂದರೆ ಈಗಾಗಲೇ ಅವರು ‘ಪುಷ್ಪ’ ಹಾಗೂ ‘ಪುಷ್ಪ 2’ ಚಿತ್ರಕ್ಕಾಗಿ ಆರು ವರ್ಷ ಮುಡಿಪಿಟ್ಟಿದ್ದಾರೆ. ಹೀಗಾಗಿ, ಅವರು ಬೇರೆ ನಟರ ಜೊತೆ ಸಿನಿಮಾ ಮಾಡಬೇಕಿದೆ. ಹೊಸ ಸಿನಿಮಾದ ಕೆಲಸ ಮುಗಿದ ಬಳಿಕವೇ ‘ಪುಷ್ಪ 3’ ಸಿನಿಮಾ ಸೆಟ್ಟೇರಲಿದೆಯಂತೆ.
ರಾಮ್ ಚರಣ್ ಹಾಗೂ ಸುಕುಮಾರ್ ‘ರಂಗಸ್ಥಲಂ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ಹಿಟ್ ಆಯಿತು. ಈಗ ಈ ಕಾಂಬಿನೇಷನ್ ಮತ್ತೆ ಒಂದಾಗಿದೆ. ಈ ಬಗ್ಗೆ ಒತ್ತೀಚೆಗೆ ಘೋಷಣೆ ಆಗಿದೆ. ರಾಮ್ ಚರಣ್ ಅವರು ಸದ್ಯ ‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಅವರು ನಿರ್ದೇಶಕ ಬುಚ್ಚಿ ಬಾಬು ಹಾಗೂ ಸುಕುಮಾರ್ ಸಿನಿಮಾ ಕೆಲಸಗಳನ್ನು ಒಟ್ಟಿಗೇ ಮ್ಯಾನೇಜ್ ಮಾಡಿಕೊಂಡು ಸಾಗಲಿದ್ದಾರೆ.
ಅಲ್ಲು ಅರ್ಜುನ್ ಕೂಡ ‘ಪುಷ್ಪ’ ಸರಣಿಯ ಕೆಲಸಗಳ ಕಾರಣಕ್ಕೆ ಬೇರೆ ಸಿನಿಮಾಗಳನ್ನು ಒಪ್ಪಿಲ್ಲ. ಈಗ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಘೋಷಣೆ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸ ಪೂರ್ಣಗೊಂಡ ಬಳಿಕವೇ ಅವರು ‘ಪುಷ್ಪ 3’ನಲ್ಲಿ ಬ್ಯುಸಿ ಆಗಲಿದ್ದಾರೆ. ಇದಕ್ಕೆ ಒಂದಷ್ಟು ಸಮಯ ಹಿಡಿಯಲಿದೆ.