ಭಾರತ ಚಿತ್ರರಂಗ ಕಂಡ ಅಪರೂಪದ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ವಿವಿಧ ಭಾಷೆಯ ಸುಮಾರು 900ಕ್ಕೂ ಅಧಿಕ ಸಿನಿಮಾಗಳಲ್ಲಿ ಜಾಲಿ ಬಾಸ್ಟಿನ್ ಅವರು ಕೆಲಸ ಮಾಡಿದ್ದರು. ಚೇಸಿಂಗ್ ದೃಶ್ಯಗಳನ್ನು ಕಂಪೋಸ್ ಮಾಡುವುದರಲ್ಲಿ ಜಾಲಿ ಬಾಸ್ಟಿನ್ ವಿಶೇಷ ಪರಿಣಿತಿ ಹೊಂದಿದ್ದರು. ಕೇರಳ ಮೂಲದ ಜಾಲಿ ಬಾಸ್ಟಿನ್ ಅವರ ಅಂತ್ಯಕ್ರಿಯೆ ಇಂದು (ಡಿ.27) ನಡೆಯಲಿದೆ. ‘ದುನಿಯಾ’ ವಿಜಯ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ರವಿಚಂದ್ರನ್ ಅವರಿಂದ ಬೆಳಕಿಗೆ ಬಂದ ಪ್ರತಿಭೆ..
ಇದನ್ನೂ ಓದಿ ಪ್ರೇಮಕಥೆ ಹೇಳೋದಿಕ್ಕೆ ಬರ್ತಿದ್ದಾರೆ ವಿಜಯಪ್ರಿಯಾ..ಕಾದಲ್ ಟೈಟಲ್ ಪೋಸ್ಟರ್ ರಿಲೀಸ್…
1966ರಲ್ಲಿ ಜನಿಸಿದ ಜಾಲಿ ಬಾಸ್ಟಿನ್ ಅವರು ಮೂಲತಃ ಬೈಕ್ ಮೆಕಾನಿಕ್ ಆಗಿದ್ದವರು. ಆರಂಭದಲ್ಲಿ ಬೈಕ್ ಚೇಸಿಂಗ್ ದೃಶ್ಯಗಳಲ್ಲಿ ಜಾಲಿ ಬಾಸ್ಟಿನ್ ಅವರು ಹೀರೋಗಳಿಗೆ ಡ್ಯೂಪ್ ಆಗಿ ಕೆಲಸ ಮಾಡುತ್ತಿದ್ದರು. ಫೈಟರ್ ಆಗಿದ್ದ ಅವರು ಆನಂತರ ಸಾಹಸ ನಿರ್ದೇಶಕರಾದರು. ಜಾಲಿ ಬಾಸ್ಟಿನ್ ಅವರ ಪ್ರತಿಭೆ ಗುರುತಿಸಿ, ಹೆಚ್ಚು ಅವಕಾಶ ನೀಡಿದ್ದು ನಟ/ ನಿರ್ದೇಶಕ ರವಿಚಂದ್ರನ್. ಹಲವು ಬಾರಿ ಸ್ಟಂಟ್ ಮಾಡುವಾಗ ಜಾಲಿ ಬಾಸ್ಟಿನ್ ಅವರು ಪೆಟ್ಟು ಮಾಡಿಕೊಂಡಿದ್ದರು.
ಇದನ್ನೂ ಓದಿ ಮಲಯಾಳಂಗೆ ಕಾಲಿಟ್ಟ ದಿಯಾ ಹೀರೋ ದೀಕ್ಷಿತ್ ಶೆಟ್ಟಿ..ಸೆಟ್ಟೇರಿತು ಒಪ್ಪೀಸ್ ಸಿನಿಮಾ..
ಒಂದು ಕಾಲಕ್ಕೆ ಅತಿ ಹೆಚ್ಚು ಸಂಭಾವವನೆ ಪಡೆಯುತ್ತಿದ್ದ ಜಾಲಿ ಬಾಸ್ಟಿನ್, ಕನ್ನಡದ ಜೊತೆಗೆ ಮಲಯಾಳಂ, ಹಿಂದಿ, ಪಂಜಾಬಿ, ತಮಿಳು ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಮುಖ್ಯವಾಗಿ ರವಿಚಂದ್ರನ್ ಅವರ ‘ಪ್ರೇಮಲೋಕ’, ‘ಶಾಂತಿ ಕ್ರಾಂತಿ’, ‘ಅಣ್ಣಯ್ಯ’, ‘ಪುಟ್ನಂಜ’ ಮುಂತಾದ ಸಿನಿಮಾಗಳಲ್ಲಿ ಜಾಲಿ ಬಾಸ್ಟಿನ್ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ ಬಿಬಿಕೆ10: ಕಾರ್ತಿಕ್ ತಾಯಿ ಬಂದಾಗ ಮಾತನಾಡಲೂ ಬಿಟ್ಟಿಲ್ಲ, ಅನ್ಯಾಯ ಎಂದ ಫ್ಯಾನ್ಸ್
ಸಿನಿಮಾ ನಿರ್ದೇಶನ ಮಾಡಿದ್ದ ಜಾಲಿ
ಜಾಲಿ ಬಾಸ್ಟಿನ್ ಅವರು ಸಾಹಸ ನಿರ್ದೇಶನದ ಜೊತೆಗೆ ಒಂದು ಸಿನಿಮಾವನ್ನು ಕೂಡ ನಿರ್ದೇಶನ ಮಾಡಿದ್ದರು. ವಿಶಾಲ್ ಹೆಗಡೆ, ಪೂಜಾ ಗಾಂಧಿ, ದಿಲೀಪ್ ರಾಜ್ ಮುಂತಾದವರು ನಟಿಸಿದ್ದ ‘ನಿನಗಾಗಿ ಕಾದಿರುವೆ’ ಚಿತ್ರಕ್ಕೆ ಮೊದಲ ಬಾರಿಗೆ ಜಾಲಿ ಬಾಸ್ಟಿನ್ ನಿರ್ದೇಶನ ಕೂಡ ಮಾಡಿದ್ದರು.