ಆರ್ ಚಂದ್ರು ಅವರ ನಿರ್ಮಾಣದಲ್ಲಿ ಘೋಷಣೆಯಾಗಿದ್ದ ಐದು ಸಿನಿಮಾಗಳ ಪೈಕಿ ‘ಫಾದರ್’ ಸಿನಿಮಾಗೆ ಇಂದು ಮುಹೂರ್ತ ಸಮಾರಂಭ ಏರ್ಪಟ್ಟಿದೆ. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸ್ಯಾಂಡಲ್ ವುಡ್ ದಿಗ್ಗಜರ ನಡುವೆ ಸಿನಿಮಾ ಆರಂಭವಾಗಿದೆ. ಎಲೆಕ್ಷನ್ ಬ್ಯುಸಿಯ ನಡುವೆಯೂ ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿ, ಕ್ಲಾಪ್ ಮಾಡಿದ್ದಾರೆ. ಜೊತೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಹೆಚ್ ಎಂ ರೇವಣ್ಣ, ಚೇತನ್ ಕುಮಾರ್, ಕೆ.ಪಿ ಶ್ರೀಕಾಂತ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ನಮ್ಮ ಚಂದ್ರು ಅವರ ಆರ್ ಸಿ ಸ್ಟುಡಿಯೋಗೆ ಒಳ್ಳೆಯದಾಗಲಿ, ಅವರಿಗೂ ಒಳ್ಳೆಯದಾಗಲಿ. ಇಷ್ಟು ದಿನ ಚೆನ್ನಾಗಿ ಮಾಡಿಕೊಂಡು ಬಂದಿದ್ದೀರಿ. ಈ ಸಿನಿಮಾ ಕೂಡ ಸಕ್ಸಸ್ ಆಗಲಿ ಎಂದಿದ್ದಾರೆ.
ಶಿವಣ್ಣ ಮಾತನಾಡಿ , ಚಂದ್ರು ಏನೇ ಮಾಡಿದರೂ ಸ್ಟೈಲ್ ಆಗಿನೆ ಮಾಡುತ್ತಾರೆ. ಅದ್ದೂರಿಯಾಗಿಯೇ ಮಾಡುತ್ತಾರೆ. ಅವರು ಫಿಲ್ಮ್ಸ್ ಮಾಡಬೇಕಾದರೆ ಎಮೋಷನಲಿ ಚೆನ್ನಾಗಿ ಮಾಡುತ್ತಾರೆ. ಮೈಲಾರಿ ಸಿನಿಮಾ ಮಾಡುವಾಗಲೇ ಆ ಭಾವನೆ ಕನೆಕ್ಟ್ ಆಗಿತ್ತು. ಚಂದ್ರುಗೆ ಅವರ ತಂದೆ ಬಗ್ಗೆ ಸಾಕಷ್ಟು ಎಮೋಷನಲ್ ಇದೆ ಅನ್ಸುತ್ತೆ. ಮಕ್ಕಳಿಗೆ ತಂದೆ ಜೊತೆಗಿನ ಬಾಂಡಿಂಗ್ ಬೇರೆನೆ ಇರುತ್ತೆ. ತಾಯಿ ಜೊತೆಗಿನ ವಾತ್ಸಲ್ಯ ಬೇರೆನೆ ಇರುತ್ತೆ. ಆ ಹೆಸರು ಕಡೆಯ ತನಕ ಬರುತ್ತೆ. ಫಾದರ್ ಟೈಟಲ್ ಕೇಳಿದ ಕೂಡಲೇ ಖುಷಿ ಆಯ್ತು. ಡಾರ್ಲಿಂಗ್ ಕೃಷ್ಣ ಕೂಡ ಹಾರ್ಡ್ ವರ್ಕರ್. ಕ್ರಿಕೆಟ್ ನಲ್ಲೂ ಕಿಂಗ್ ಆಗಿದ್ದಾರೆ. ಇಡೀ ತಂಡಕ್ಕೆ ಶುಭಾಶಯಗಳು ಎಂದಿದ್ದಾರೆ.
ಡಾರ್ಲಿಂಗ್ ಕೃಷ್ಣ ಮಾತನಾಡಿ, ಮೊದಲು ನಂಗೆ ಬಂದು ಈ ಕಥೆ ಹೇಳಿದಾಗ ನಾನು ಮಿಲನಾ ಕೂತು ಕಥೆ ಕೇಳಿದೆವು. ಬ್ಯೂಟಿಫುಲ್ ಕಥೆ. ಕ್ಲೈಮ್ಯಾಕ್ಸ್ ಕೇಳಿದಾಗ ನಂಗೆ ತೆಗೆದುಕೊಳ್ಳುವುದಕ್ಕೆ ಆಗಲಿಲ್ಲ. ಅಷ್ಟು ಅದ್ಭುತವಾಗಿತ್ತು. ಸ್ಟ್ರಾಂಗ್ ಆಗಿ ಕನೆಕ್ಟ್ ಆಗುವಂತದ್ದು. ಮಿಲನಾ ಈ ಸಿನಿಮಾ ತುಂಬಾ ಚೆನ್ನಾಗಿದೆ ಮಾಡು ಅಂತ ಹೇಳಿದ್ರು. ಆಮೇಲೆ ಚಂದ್ರು ಸರ್ ಕಾಲ್ ಮಾಡಿ ಹೇಗಿತ್ತು ಬ್ರದರ್ ಕಥೆ ಅಂತ ಕೇಳಿದ್ರು. ಅದ್ಭುತವಾಗಿತ್ತು ಎಂದೇ. ಚಂದ್ರು ಸರ್ ಕೂಡ ಈ ಸಿನಿಮಾ ಮಾಡು ಅಂತ ಹೇಳಿದ್ರು. ಚಂದ್ರು ಸರ್ ಜೊತೆಗೆ ಇದೆ ಮೊದಲ ಬಾರಿಗೆ ವರ್ಕ್ ಮಾಡ್ತಾ ಇದ್ದೀನಿ. ನಾನು ನಮ್ಮ ತಂದೆ ಆರಂಭದಲ್ಲಿ ಚಂದ್ರು ಸರ್ ನ ಮೀಟ್ ಮಾಡಿದ್ದೆವು. ಹೀರೋ ಆಗಬೇಕು ಎಂದು ಓಡಾಡುವಾಗಿನ ಸ್ಟ್ರಗಲ್ ನೋಡಿದ್ದಾರೆ. ಈ ಪಾತ್ರಕ್ಕೆ ಅಮೃತಾನೆ ಸೂಟ್ ಆಗುವುದು ಅಂತ ನಾನೇ ಹೇಳಿದ್ದೆ. ತೆರೆ ಮೇಲೆ ನೋಡಿದ್ರೆ ಯಾಕೆ ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ.
ನಾಯಕಿ ಅಮೃತಾ ಅಯ್ಯಂಗಾರ್ ಮಾತನಾಡಿ, ಶಿವಣ್ಣ ಬಡವ ರಾಸ್ಕಲ್ ನಲ್ಲಿ ಬಂದು ವಿಶ್ ಮಾಡಿದ್ದರು. ಈಗಲೂ ಬಂದಿದ್ದಾರೆ ಅವರು ನಮ್ಮ ಲಕ್ ಫ್ಯಾಕ್ಟರ್. ಡಾರ್ಲಿಂಗ್ ಕೃಷ್ಣ ಜೊತೆಗೆ ಕೆಲಸ ಮಾಡಿದ್ದು ತುಂಬಾ ಖುಷಿಯಾಗಿದೆ. ಕಥೆ ಕೇಳಿದಾಗ ತುಂಬಾ ಖುಷಿ ಆಯ್ತು. ಮೇನ್ ಫ್ಯಾಕ್ಟರ್ ಈ ಕಥೆ ಒಪ್ಪಿಕೊಳ್ಳುವುದಕ್ಕೆ ಕೃಷ್ಣ ಅಂಡ್ ಮಿಲನಾ ಕಾರಣ. ಕೃಷ್ಣ ಅವರ ಜೋಡಿಯಾಗಿ ಕಾಣಿಸಿಕೊಳ್ಳುತ್ತಾ ಇದ್ದೀನಿ. ನನ್ನನ್ನೇ ಯಾಕೆ ಆಯ್ಕೆ ಮಾಡಿದರು ಎಂಬುದು ಸಿನಿಮಾ ನೋಡಿದ ಮೇಲೆ ನಿಮಗೆ ಗೊತ್ತಾಗುತ್ತೆ ಎಂದಿದ್ದಾರೆ.
ನಿರ್ಮಾಪಕ ಆರ್ ಚಂದ್ರು ಮಾತನಾಡಿ, ಆರ್ ಸಿ ಸ್ಟುಡಿಯೋವನ್ನು ಸಿದ್ದರಾಮಯ್ಯ ಅವರು ಲಾಂಚ್ ಮಾಡಿದರು. ಮೊದಲ ಸಿನಿಮಾ ಚಾರ್ ಮಿನಾರ್ ಸಿನಿಮಾ ಮಾಡಿದಾಗ ಕಷ್ಟದಲ್ಲಿದ್ದೆ. ಆಗ ಆಶೀರ್ವಾದ ಮಾಡಿದ್ದು ಶಿವಣ್ಣ. ಅಂದಿನಿಂದ ಇಂದಿನವರೆಗೂ ಸಕ್ಸಸ್ ಸಿನಿಮಾಗಳನ್ನೇ ಕೊಟ್ಟಿದ್ದೀವಿ. ಫಾದರ್.. ಈ ಸಿನಿಮಾಗೆ ರಾಜ್ ಮೋಹನ್ ನಿರ್ದೇಶನ ಮಾಡುತ್ತಿದ್ದಾರೆ. ಅವರು ಕೂಡ ಶಿವಣ್ಣ ಜೊತೆಗೆ ಭೈರಾಗಿಯಲ್ಲಿ ಕೆಲಸ ಮಾಡಿದ್ದಾರೆ. ಭೈರಾಗಿನಲ್ಲಿ ಅಂದಾಗ ಕರೆದುಕೊಂಡು ಬನ್ನಿ ಎಂದೇ. ಒಂದೇ ಒಂದು ಲೈನ್ ಕೇಳಿದಾಗಲೇ ನನ್ನ ಕಣ್ಣಲ್ಲಿ ನೀರು ಬಂತು. ಈ ಕಥೆಯನ್ನು ಎಲ್ಲರು ಕೂತು ಸಾಕಷ್ಟು ಎಫೆಕ್ಟೀವ್ ಆಗಿ ಬರುವಂತೆ ಕೆಲಸ ಮಾಡಿದ್ದೀವಿ. ಅನೌನ್ಸ್ ಮಾಡಿದ ಇನ್ನುಳಿದ ಸಿನಿಮಾಗಳನ್ನು ಆದಷ್ಟು ಬೇಗ ಬರುತ್ತವೆ ಎಂದಿದ್ದಾರೆ.
ನಿರ್ದೇಶಕ ರಾಜು ಮೋಹನ್ ಮಾತನಾಡಿ, ಕಥೆ ಕೇಳಿದ ಚಂದ್ರು ಸರ್ ಇಮ್ಮಿಡಿಯೆಟ್ಲಿ ಅಡ್ವಾನ್ಸ್ ಕೊಟ್ರು. ನಿರ್ದೇಶಕರು ಕಥೆ ಹೇಳಿದಾಗ ನಿರ್ಮಾಪಕರು ಇನ್ವಾಲ್ ಆಗೋದು ಬೇರೆ, ಆದರೆ ಅದರ ಜೊತೆಗೆ ಟ್ರಾವೆಲ್ ಮಾಡೋದು ಬೇರೆ. ಈ ಸಿನಿಮಾ ಕಥೆ ಕೇಳುವಾಗ ಚಂದ್ರು ಸರ್ ಟ್ರಾವೆಲ್ ಮಾಡಿದರು ಕಥೆ ಜೊತೆಗೆ. ಚಂದ್ರು ಸರ್ ತಕ್ಷಣ ಹೇಳಿದರು. ಈ ಕಥೆ ಮಾಡಲೇಬೇಕು. ಫಾದರ್ ಪಾತ್ರವನ್ನು ಪ್ರಕಾಶ್ ರಾಜ್, ಹೀರೋ ಆಗಿ ಡಾರ್ಲಿಂಗ್ ಕೃಷ್ಣ ಮಾಡಲಿ. ಕ್ಯಾನೆರಾ, ಮ್ಯುಸಿಕ್ ಡೈರೆಕ್ಟರ್ ಎಲ್ಲರನ್ನು ಅವತ್ತೆ ಡಿಸೈಡ್ ಮಾಡಿದರು. ಚಂದ್ರು ಅವರು ನನಗೆ ಬ್ರದರ್ ಥರ ಎಂದಿದ್ದಾರೆ.