ಬೆಂಗಳೂರು: ಗಾಯಕಿ ಮಾಂಗ್ಲಿ ಎಂದೇ ಖ್ಯಾತರಾಗಿರುವ ಸತ್ಯವತಿ ರಾಥೋಡ್ ಅವರು ಭಾನುವಾರ ರಾತ್ರಿ ಕನ್ಹಾ ಶಾಂತಿ ವನದಿಂದ ವಾಪಸಾಗುತ್ತಿದ್ದಾಗ ಕಾರು ಅಪಘಾತಕ್ಕೀಡಾದ ಬಗ್ಗೆ ಹಲವಾರು ವೆಬ್ ಮತ್ತು ಪ್ರಿಂಟ್ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ವದಂತಿಗಳ ಬಗ್ಗೆ ಗಾಯಕಿ ಮಂಗ್ಲಿ ಅವರೇ ಪ್ರತಿಕ್ರಿಯಿಸಿದ್ದಾರೆ. ಆತ್ಮೀಯರೇ, ನಾನು ಸುರಕ್ಷಿತ ಮತ್ತು ದೃಢವಾಗಿದ್ದೇನೆ. ಇದು ಒಂದೆರಡು ದಿನಗಳ ಹಿಂದೆ ನಡೆದ ಅನಿರೀಕ್ಷಿತ ಸಣ್ಣ ಅಪಘಾತ. ಹರಡುತ್ತಿರುವ ವದಂತಿಗಳನ್ನು ದಯವಿಟ್ಟು ನಂಬಬೇಡಿ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು! ಎಂದರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ..ನಿರ್ದೇಶನದ ಜೊತೆಗೆ ನಟನೆಗೆ ಇಳಿದ ಸಾಗರ್ ಪುರಾಣಿಕ್..
ದಿನಗಳ ಹಿಂದೆ ಖ್ಯಾತ ಗಾಯಕಿ ಮಂಗ್ಲಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದ್ದು, ಅವರಿಗೆ ಗಾಯಗಳಾಗಿದೆ ಎಂದು ಸುದ್ದಿ ಹಬ್ಬಿತ್ತು. ಮಂಗ್ಲಿ ಅವರು ಬೆಂಗಳೂರು-ಹೈದರಾಬಾದ್ ಹೈವೇ ಮೂಲಕ ಹೈದರಾಬಾದ್ಗೆ ಬರುತ್ತಿದ್ದರು. ಶಂಶಾಬಾದ್ ತೊಂಡುಪಲ್ಲಿ ಬಳಿ ಕಾರು ಅಪಘಾತಕ್ಕೆ ಒಳಗಾಗಿದೆ. ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಈ ಬಗ್ಗೆ ದಿವ್ಯಾ ಪ್ರಿಯಾ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಹೈದರಾಬಾದ್-ಬೆಂಗಳೂರು ಹೆದ್ದಾರಿಯ ತೊಂಡುಪಲ್ಲಿ ಸೇತುವೆ ಬಳಿಕ ಗಾಯಕ ಮಂಗ್ಲಿ ಕಾರಿಗೆ ಸಣ್ಣ ಟ್ರಕ್ ಡಿಕ್ಕಿ ಹೊಡೆದಿದೆ. ಮಂಗ್ಲಿ ಹಾಗೂ ಇತರ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಬರೆಯಲಾಗಿದೆ.