ಗರ ಸಿನಿಮಾ ಖ್ಯಾತಿಯ ನಿರ್ದೇಶಕ ಕೆ.ಆರ್ ಮುರಳಿ ಕೃಷ್ಣ ನಿಧನರಾಗಿದ್ದಾರೆ . ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಕೆ.ಆರ್ ಮುರಳಿ ಕೃಷ್ಣ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ . ತೀವ್ರ ತಲೆನೋವಿನಿಂದ ಬಳಲುತ್ತಿದ್ದು ಕೆಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಬೈನ್ ಟ್ಯೂಮರ್ ಇರುವುದು ಪತ್ತೆಯಾದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು . ಈ ಶಸ್ತ್ರಚಿಕಿತ್ಸೆಯ ಬೆನ್ನಲ್ಲೇ ಎದುರಾದ ಹೃದಯಾಘಾತ ಪ್ರಾಣ ಕಸಿದುಕೊಂಡಿದೆ .
https://www.youtube.com/watch?v=33tABzDipck&ab_channel=Chittara
ನಿರ್ದೇಶಕ ಕೆ.ಆರ್ ಮುರಳಿ ಕೃಷ್ಣ ಮೂಲತಃ ಚಿಕ್ಕಬಳ್ಳಾಪುರದವರಾದ ಮುರಳಿಕೃಷ್ಣ ಚಿತ್ರರಂಗಕ್ಕೆ ಬಂದಿದ್ದು ಬಳಿಕ ವಕೀಲರಾಗಿದ್ದು ಎಲ್ಲವೂ ಸಿನಿಮಾ ಕತೆಯಂತಿದೆ . ಮುರಳಿಯವರ ಅಣ್ಣ ಶಾಂತ ಕುಮಾರ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಹೆಸರು ಮಾಡಿದವರು . ಇವರ ನಿರ್ದೇಶನದಲ್ಲಿ ಮೂಡಿಬಂದ ‘ ಬಾಳನೌಕೆ ‘ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಲಭಿಸಿತ್ತು . ಚಿತ್ರವನ್ನು ಮುರಳಿಕೃಷ್ಣ ನಿರ್ಮಿಸಿದ್ದರು . ಶಾಂತ ಕುಮಾರ್ ನಿರ್ದೇಶಿಸಿ , ಅಂಬರೀಷ್ ನಟಿಸಿದ ಕರ್ಣನ ಸಂಪತ್ತು ಚಿತ್ರಕ್ಕೆ ಇವರು ನಿರ್ಮಾಪಕರಾಗಿದ್ದರು.
https://www.youtube.com/watch?v=_FWWp9dDih8&ab_channel=Chittara
ನಿರ್ದೇಶಕ ಕೆ.ಆರ್ ಮುರಳಿ ಕೃಷ್ಣ ಗರ ಸಿನಿಮಾಕ್ಕಾಗಿ ಬಾಲಿವುಡ್ನ ಜಾನಿ ಲಿವರ್ ಅವರನ್ನು ಕನ್ನಡಕ್ಕೆ ಕರೆತಂದಿದ್ದ ಖ್ಯಾತಿಯೂ ಇವರಿಗೆ ಸಲ್ಲುತ್ತದೆ . ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ಮುರುಳಿ ಕೃಷ್ಣ ಇದೀಗ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ . ಸಹಕಾರ ನಗರದ ತಮ್ಮ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ . ಇಂದು ಮಧ್ಯಾಹ್ನ 12 : 30 ಕ್ಕೆ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕೆ.ಆರ್.ಮುರಳಿಕೃಷ್ಣ ಅವರು ಚಲನಚಿತ್ರ ನಿರ್ದೇಶನ, ನಿರ್ಮಾಣದ ಜೊತೆಗೆ ಅತ್ಯತ್ತುಮ ನಿರೂಪಕರೂ ಆಗಿದ್ದರು ಎಂಬುದಕ್ಕೆ ಅವರು `ಚಿತ್ತಾರ‘ ಯೂಟ್ಯೂಬ್ ಚಾನೆಲ್ಗೆ ನಡಸಿಕೊಟ್ಟ `ಡಾ.ರಾಜ್‘ ಅವರ ಬಗೆಗಿನ ಸರಣಿ ಕಾರ್ಯಕ್ರಮಗಳೇ ಸಾಕ್ಷಿ. ಕಲೆಗೆ ಅಂಟಿಕೊ0ಡು ಬದುಕಿದವನಿಗೆ ಸಾವು ಎಂದಿಗೂ ಸಾವಿಲ್ಲ ಎಂಬ ಮಾತಿನಂತೇ, ನೀವು ಸದಾ ಕನ್ನಡಗಿರ ಮನದಲ್ಲಿ ಎಂದೆ0ದಿಗೂ ಇರುತ್ತೀರಿ.
https://www.youtube.com/watch?v=25Z6IH0Aw4U&ab_channel=Chittara