ಕಿರುತೆರೆ ಬಾರ್ಬಿ ಡಾಲ್ ಖ್ಯಾತಿಯ ನಿವೇದಿತಾ ಗೌಡ ಹಾಗೂ ಗಾಯಕ ಚಂದನ್ ಶೆಟ್ಟಿ ದಂಪತಿ ಡಿವೋರ್ಸ್ ಪಡೆದಿದ್ದಾರೆ. ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಕ್ಯೂಟ್ ಕಪಲ್ ಇಬ್ಬರೇ ಇಂದು ಕೋರ್ಟ್ಗೆ ಹಾಜರಾಗಿದ್ದರು. ಫ್ಯಾಮಿಲಿ ಕೋರ್ಟ್ನಲ್ಲಿ ವೈವಾಹಿಕ ಬದುಕಿನಿಂದ ಬೇರೆ, ಬೇರೆ ಆಗಲು ನಿರ್ಧರಿಸಿ ಮನವಿ ಸಲ್ಲಿಸಿದರು.
ಫ್ಯಾಮಿಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಒಟ್ಟಿಗೆ ಕೈ, ಕೈ ಹಿಡಿದು ಆಗಮಿಸಿದ್ದರು. ಇಬ್ಬರು ಕೋರ್ಟ್ ಹಾಲ್ನಲ್ಲಿ ಅಕ್ಕ, ಪಕ್ಕವೇ ಕುಳಿತಿದ್ದರು. ಡಿವೋರ್ಸ್ ಅರ್ಜಿ ವಿಚಾರಣೆ ಸಂದರ್ಭದಲ್ಲೂ ದಂಪತಿ ಖುಷಿಯಾಗಿ ನಗು ನಗುತ್ತಾ ಮಾತಾಡುತ್ತಾ ಕುಳಿತಿದ್ದು ಕಂಡು ಬಂದಿತ್ತು.
ಡಿವೋರ್ಸ್ ಅರ್ಜಿ ಪುರಸ್ಕಾರಕ್ಕೂ ಮುನ್ನ ಫ್ಯಾಮಿಲಿ ಕೋರ್ಟ್ ಮಧ್ಯಸ್ಥಿಕೆ ನಡೆಸುವಂತೆ ಸೂಚಿಸಿತ್ತು. ಇಬ್ಬರ ನಡುವಿನ ಗೊಂದಲದ ಬಗ್ಗೆ ವಿಚಾರಣೆ ನಡೆಸಲಾಗಿದ್ದು, ಮತ್ತೆ ಒಂದು ಮಾಡಲು ಮಾತುಕತೆ ನಡೆಸಲಾಯಿತು.
ಕೋರ್ಟ್ ಹಾಲ್ನಲ್ಲೂ ಒಟ್ಟಿಗೆ ಕುಳಿತ್ತಿದ್ದ ಚಂದನ್, ನಿವೇದಿತಾ ದಂಪತಿ, ಮ್ಯೂಚುವಲ್ ಕನ್ಸೆಂಟ್ ಅಡಿ ಡಿವೋರ್ಸ್ಗೆ ಮನವಿ ಮಾಡಿದ್ದರು. ಮಿಡಿಯೇಟರ್ ಮುಂದೆ ಹಾಜರು ಅಲ್ಲಿಯೂ ಸಂಧಾನಕ್ಕೆ ದಂಪತಿ ಒಪ್ಪಿಗೆ ನೀಡಿಲ್ಲ.
ನ್ಯಾಯಾಧೀಶರ ಮುಂದೆ ದಂಪತಿ ಪರಸ್ಪರ ಒಪ್ಪಿ ಬೇರೆ ಆಗಲು ನಿರ್ಧರಿಸಿದ್ದೇವೆ. ಸ್ವಲ್ಪ ಭಿನ್ನಾಭಿಪ್ರಾಯ ಇದೆ. ಇಬ್ಬರಿಗೂ ಕರಿಯರ್ ಬಗ್ಗೆ ಕನಸುಗಳು ಇವೆ. ಹೀಗಾಗಿ ಖುಷಿಯಾಗಿಯೇ ಒಪ್ಪಿದ್ದೇವೆ ಎಂದು ಖುಷಿ, ಖುಷಿಯಾಗಿ ಹೇಳಿದರು. ಇದಾದ ಬಳಿಕ ಪುನಃ ಬಂದು ಅಕ್ಕ-ಪಕ್ಕ ಚಂದನ್ ದಂಪತಿ ಕುಳಿತಿದ್ದರು. ಒಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನದಿಂದ ದೂರವಾಗಲು ನಿರ್ಧರಿಸಿದ್ದಾರೆ.