ಕಳೆದ ವರ್ಷ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳಲ್ಲಿ ‘ಪುಷ್ಪ 2’ ಕೂಡ ಒಂದು. ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ ತೆಲುಗು ಚಿತ್ರರಂಗಕ್ಕೆ ಹೊಸ ಮೈಲೇಜ್ ಕೊಟ್ಟಿತ್ತು. ವಿಶ್ವದಾದ್ಯಂತ ‘ಪುಷ್ಪ’ ಅಬ್ಬರಕ್ಕೆ ದಾಖಲೆಗಳು ಚಿಂದಿಯಾಗಿವೆ. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹೊರತಾಗಿ ‘ಪುಷ್ಪ 2’ನಲ್ಲಿ ಗಮನ ಸೆಳೆದಿದ್ದ ನಟ ಫಹಾದ್ ಫಾಸಿಲ್. ಪೊಲೀಸ್ ಅಧಿಕಾರಿ ಶೇಖಾವತ್ ಪಾತ್ರದಲ್ಲಿ ಮಿಂಚಿದ್ದರು.
ಫಹಾದ್ ಫಾಸಿಲ್ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.’ಪುಷ್ಪ’ ಸೀರಿಸ್‌ನಲ್ಲಿ ಅಲ್ಲು ಅರ್ಜುನ್‌ಗೆ ಎಷ್ಟು ಕ್ರೆಡಿಟ್ ಸಿಕ್ಕಿದೆಯೋ ಅಷ್ಟೇ ಕ್ರೆಡಿಟ್ ಫಹಾದ್ ಫಾಸಿಲ್‌ಗೂ ಸಿಗಬೇಕು. ಶೇಖಾವತ್ ಪಾತ್ರ ಇರದೇ ಹೋಗಿದ್ದರೆ ‘ಪುಷ್ಪ’ಗೆ ಇಷ್ಟೊಂದು ತಾಕತ್ತು ಸಿಗುತ್ತಿರಲಿಲ್ಲ. ಫಹಾದ್ ಫಾಸಿಲ್ ಆ ಪಾತ್ರವನ್ನು ಅಷ್ಟೇ ಪವರ್‌ಫುಲ್ ಆಗಿ ನಿಭಾಯಿಸಿದ್ದಾರೆ. ಆದರೆ, ಸಿನಿಮಾ ನೋಡಿದವರು ಕೆಲವು ಸಲಹೆಗಳನ್ನು ನೀಡಿದ್ದರು. ಕೆಲವು ಚಿತ್ರತಂಡದ ಮೇಲೆ ಅಸಮಧಾನವನ್ನು ಹೊರ ಹಾಕಿದ್ದರು. ಸಿನಿಮಾದಲ್ಲಿ ಫಹಾದ್ ಫಾಸಿಲ್ ಅನ್ನು ಬಿಂಬಿಸಿದ ರೀತಿ ಸರಿಯಿಲ್ಲ ಎಂದು ಟೀಕಿಸಿದ್ದರು.
‘ಪುಷ್ಪ 2’ ಯಶಸ್ಸಿನ ಬಳಿಕ ಫಹಾದ್ ಫಾಸಿಲ್ ಸಂದರ್ಶನವೊಂದನ್ನು ನೀಡಿದ್ದರು. ಇದರಲ್ಲಿ ಕೆಲವು ಕಾಮೆಂಟ್‌ಗಳನ್ನು ಮಾಡಿದ್ದರು. ಪುಷ್ಪ 1 ಹಾಗೂ ಪುಷ್ಪ 2 ಎರಡು ಸಿನಿಮಾಗಳಿಂದ ತನಗೆ ಏನೂ ಲಾಭ ಆಗಲಿಲ್ಲ. ತನ್ನ ಪಾತ್ರಕ್ಕೆ ಯಾವುದೇ ರೀತಿಯ ಮೈಲೇಜ್ ಸಿಗಲಿಲ್ಲ. ಆ ಸಿನಿಮಾ ಪ್ರೇಕ್ಷಕರು ನನ್ನಿಂದ ಹೆಚ್ಚಿನದನ್ನು ನಿರೀಕ್ಷೆ ಮಾಡಲೇ ಇಲ್ಲ. ‘ಪುಷ್ಪ’ ಸಿನಿಮಾವನ್ನು ಕೇವಲ ಸುಕುಮಾರ್‌ಗಾಗಿ ಮಾತ್ರ ಮಾಡಿದ್ದೆ ಎಂದು ಫಹಾದ್ ಫಾಸಿಲ್ ಹೇಳಿಕೊಂಡಿದ್ದರು.