ಮಲಯಾಳಂ ನಟ ಫಹಾದ್ ಫಾಸಿಲ್ ತೆಲುಗು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ನಲ್ಲಿ ನಿರ್ಮಾಣ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ 2’ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ‘ಪುಷ್ಪ; ದಿ ರೈಸ್’ ಸಿನಿಮಾದಲ್ಲೂ ಭನ್ವರ್ ಸಿಂಗ್ ಶೇಖಾವತ್ ಖಳನಾಯಕನಾಗಿ ನಟಿಸಿದ್ದರು.
ಇದನ್ನೂ ಓದಿ :ಅರ್ಜುನನ ಸಮಾಧಿ ನಿರ್ಮಾಣ ಯಾವಾಗ ಮಾಡುತ್ತೀರಾ..? ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಶ್ನೆ
ಭನ್ವರ್ ಸಿಂಗ್ ಶೇಖಾವತ್ ರೋಲ್ ಫಹಾದ್ ಫಾಸಿಲ್ ವೃತ್ತಿ ಬದುಕಿನಲ್ಲಿ ಹೊಸ ಬದಲಾವಣೆ ತಂದಿರಬಹುದೆಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ‘ಪುಷ್ಪ’ ಸಿನಿಮಾದಿಂದ ತನ್ನ ಕರಿಯರ್ನಲ್ಲಿ ಏನೂ ಬದಲಾವಣೆ ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಫಹಾದ್ ಫಾಸಿಲ್ ಯಾಕೆ ಹೀಗೆ ಹೇಳಿದ್ರು?
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಫಹಾದ್ ಫಾಸಿಲ್ಗೆ “ಪುಷ್ಪ ಸಿನಿಮಾದಲ್ಲಿನ ನಿಮ್ಮ ಕ್ರೇಜ್ ಪರಭಾಷೆಗಳಿಗೂ ಹರಡಿದೆಯೇ?” ಎಂದು ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಫಹಾದ್ ಫಾಸಿಲ್ ಕೊಟ್ಟಿರುವ ಉತ್ತರ ಶಾಕಿಂಗ್ ಆಗಿತ್ತು. ” ಪುಷ್ಪ ಸಿನಿಮಾದಿಂದ ನನ್ನ ವೃತ್ತಿ ಬದುಕಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ವಿಷಯವನ್ನು ನಿರ್ದೇಶಕ ಸುಕುಮಾರ್ ಮುಂದೆ ಹೇಳುತ್ತೇನೆ.ಇದರಲ್ಲಿ ಮುಚ್ಚಿಡಲು ಏನೂ ಇಲ್ಲ. ನಾನು ಪ್ರಾಮಾಣಿಕವಾಗಿ ಹೇಳಬೇಕು. ನಾನಿಲ್ಲಿ ನನ್ನ ಕೆಲಸವನ್ನಷ್ಟೇ ಮಾಡುತ್ತಿದ್ದೇನೆ.
ಇದನ್ನೂ ಓದಿ :ಅರ್ಜುನನ ಸಮಾಧಿ ನಿರ್ಮಾಣ ಯಾವಾಗ ಮಾಡುತ್ತೀರಾ..? ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಶ್ನೆ
‘ಪುಷ್ಪ’ ಸಿನಿಮಾ ಬಳಿಕ ಜನರು ನನ್ನಿಂದ ಮ್ಯಾಜಿಕ್ ನಿರೀಕ್ಷೆ ಮಾಡುತ್ತಿದ್ದಾರೆ. ನಾನು ಈ ಸಿನಿಮಾವನ್ನು ಕೇವಲ ಸುಕುಮಾರ್ ಸರ್ ಅವರ ಮೇಲಿನ ಪ್ರೀತಿಗಾಗಿ ಮಾಡಿದ್ದೇನೆ. ಮಲಯಾಳಂ ಚಿತ್ರರಂಗದಲ್ಲಷ್ಟೇ ನನ್ನ ಕೆಲಸ ಎಂದು ಹೇಳಿದ್ದಾರೆ. ರಾಜ್ಕುಮಾರ್ ರಾವ್ ಜನಪ್ರಿಯ ನಟ. ಹಾಗೇ ರಣ್ಬೀರ್ ಕಪೂರ್ ದೇಶದ ಶ್ರೇಷ್ಠ ನಟ. ಅಲ್ಲಿನ ಜನರು ಮಲಯಾಳಂ ಸಿನಿಮಾ ಕುಂಬಳಂಗಿ ನೈಟ್ಸ್ ನೋಡಿ ಮೆಚ್ಚಿದ್ದರು. ಹಾಗೇ ನನ್ನ ಸಿನಿಮಾವನ್ನು ಯಾವ ಆಧಾರದಲ್ಲಿ ನೋಡುತ್ತಿದ್ದಾರೆಂದು ನನಗೆ ಆಶ್ವರ್ಯ ಆಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ :ಬಂಪರ್ ಆಫರ್.. ಕೇವಲ ರೂ.99ಕ್ಕೆ `ರಾಮನ ಅವತಾರ’!
ಫಹಾದ್ ಫಾಸಿಲ್ ದಕ್ಷಿಣ ಭಾರತದ ಹ್ಯಾಪನಿಂಗ್ ಸ್ಟಾರ್. ತಮ್ಮ ಸಿನಿಮಾಗಳಿಂದ ಸದಾ ಸುದ್ದಿಯಲ್ಲಿ ಇರುತ್ತಾರೆ ಈ ಮಲಯಾಳಂ ನಟ. ಇತ್ತೀಚೆಗಷ್ಟೇ ಫಹಾದ್ ಫಾಸಿಲ್ ನಟಿಸಿರುವ ‘ಆವೇಷಂ’ ಸಿನಿಮಾ ಸೂಪರ್ ಹಿಟ್ ಲಿಸ್ಟ್ ಸೇರಿದೆ. ಈ ಬಹುಭಾಷಾ ನಟನ ನಟನೆಗೆ ಪ್ರೇಕ್ಷಕರು ಮನಸೋತಿದ್ದಾರೆ. ಮಲಯಾಳಂ ಸಿನಿಮಾ ಜೊತೆಗೆ ಆಗಾಗ ಬೇರೆ ಭಾಷೆಯ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಾರೆ.