ಸoಗೀತಾ ಶೃಂಗೇರಿ. ಕನ್ನಡಿಗರು ಈಕೆಯನ್ನು ಮೊದಲು ಗುರುತಿಸಿದ್ದು ಪಾರ್ವತಿ ದೇವಿಯಾಗಿ, ಹರಹರ ಮಹಾದೇವ ಧಾರಾವಾಹಿಯ ಪಾತ್ರದ ಮೂಲಕ. ಆದರೀಗ ಈಕೆ `ದೇವಿಕಾ ಆರಾಧ್ಯ’ ಎಂಬ ಹೆಸರಿನಿಂದ ಮನೆ ಮಾತಾಗಿದ್ದಾರೆ. ಹೌದು, `777 ಚಾರ್ಲಿ’ಚಿತ್ರದಲ್ಲಿ ದೇವಿಕಾ ಆರಾಧ್ಯ ಅನ್ನೋ ಹೆಸರಿನ ಪಾತ್ರದಲ್ಲಿ ನಟಿಸಿರುವ ನಟಿ ಸಂಗೀತಾ ಶೃಂಗೇರಿ ತಮ್ಮ ಚೊಚ್ಚಲ ಚಿತ್ರದಲ್ಲೇ ತಮ್ಮನ್ನು ತಾವು ನಿರೂಪಿಸಿದ್ದಾರೆ. `777 ಚಾರ್ಲಿ’ಸಿನಿಮಾದ ಮೂಲಕ ದೀರ್ಘಾವಧಿ ನೆನಪಿಡುವಂಥಹದ್ದು ಅನುಭವ ಪಡೆದುಕೊಂಡಿರುವ ಸಂಗೀತಾ, ನಿರ್ದೇಶಕ ಕಿರಣ್ ರಾಜ್ ಅವರ ಗರಡಿಯಲ್ಲಿ ನಟನೆಯನ್ನು ಕರಗತ ಮಾಡಿಕೊಂಡಿದ್ದಾರೆ. ಮೊದಲ ಚಿತ್ರದಲ್ಲೇ `ಸಿಂಪಲ್ಸ್ಟಾರ್’ ರಕ್ಷಿತ್ ಶೆಟ್ಟಿ ಅವರನ್ನು ಎದುರುಗೊಳ್ಳುವುದಕ್ಕೂ ಸಾಕಷ್ಟು ನಟನಾ ಕಾರ್ಯಗಾರಗಳನ್ನು ಮುಗಿಸಿ, ದೇವಿಕಾ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ಸಿಯಾಗಿದ್ದಾರೆ. ದೇವಿಕಾ ಪಾತ್ರದಲ್ಲಿ 3 ವರ್ಷಗಳ ಕಾಲ ಜೀವಿಸಿದ್ದ ಸಂಗೀತಾ ಈಗ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ `ಚಿತ್ತಾರ’ದೊಂದಿಗೆ ತಮ್ಮ ಅನುಭವವನ್ನು ಹಂಚಿಕೊoಡಿದ್ದಾರೆ.
`ಚಾರ್ಲಿ’ ಸೂಪರ್ಹಿಟ್ ಆಗಿದೆ, ಏನನ್ನಿಸ್ತಿದೆ?
ಇಡೀ ತಂಡದ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ದೇವಿಕಾ ಪಾತ್ರದ ಬಗ್ಗೆ ನಿರ್ದೇಶಕರು ಹೇಳಿದಾಗ ಈ ಥ್ರಿಲ್ ಆಗಿದ್ದೆ, ಎನಿಮಲ್ ವೆಲ್ಫೇರ್ ಆಫೀಸರ್ ಪಾತ್ರವಾಗಿ ನಟಿಸುವಾಗ ದೇವಿಕಾಳ ಪಾತ್ರದ ಮಹತ್ವದ ಅರಿವಿಗೆ ಬಂತು. ತೆರೆಮೇಲೆ ನೋಡಿದಾಗ ನನ್ನ ಪಾತ್ರದ ಬಗ್ಗೆ ನನಗೇ ಖುಷಿಯಾಯಿತು. ನನ್ನ ಬಗ್ಗೆಯೇ ನನಗೆ ಹೆಮ್ಮೆಯಾಯಿತು. ಇವತ್ತು ಪ್ರೇಕ್ಷಕರು ದೇವಿಕಾಳನ್ನು ಇಷ್ಟ ಪಟ್ಟಿದ್ದಾರೆ. ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಏನೂ ಇಲ್ಲದೇ ಇದ್ದರೂ, ಬಹಳ ಮಹತ್ವದ ಪಾತ್ರ. ದೇವಿಕಾ ಎಂಬ ಪಾತ್ರ ಕೇವಲ ಗ್ಲಾಮರ್ಗೋಸ್ಕರ ಸೀಮಿತವಾದುದ್ದಲ್ಲ.
ವಿವಾದದ ಸುಳಿಯಲ್ಲಿ Just Married ನಯನತಾರಾ!
`ಚಾರ್ಲಿ’ಯಲ್ಲಿ ನಟಿಸುವಾಗ ಚಾಲೆಂಜಿoಗ್ ಅನ್ನಿಸಿದ್ದೇನು?
ಚಿತ್ರದಲ್ಲಿ ಚಾಲೆಂಜ್oಜಿoಗ್ ಪಾರ್ಟ್ ಅಂದರೆ ಚಾರ್ಲಿ. ಪ್ರತೀ ಶಾಟ್ಸ್ ಅನ್ನೂ ಚೆನ್ನಾಗಿಯೇ ಅಭಿನಯಿಸಬೇಕಿತ್ತು, ಯಾಕೆಂದರೆ ಚಾರ್ಲಿಯ ಯಾವ ಶಾಟ್ಸ್ ಸರಿಯಾಗಿ ಸೆರೆಯಾಗುತ್ತೋ.. ಹೇಳೋಕಾಗಲ್ಲ. ಹೀಗಾಗಿ ಎಲ್ಲ ನಟರೂ ಅಲರ್ಟ್ ಆಗಿರಬೇಕಾಗಿದ್ದ ಅನಿವಾರ್ಯತೆಯಿತ್ತು. ಈ ಚಿತ್ರಕ್ಕಾಗಿ 2 ವರ್ಷದಿಂದ ಯಾವುದೇ ಆಫರ್ ಒಪ್ಪಿಕೊಂಡಿರಲಿಲ್ಲ. ಚಿತ್ರದ ಮೇಲೆ, ಕಥೆಯ ಮೇಲೆ ಹಾಗೂ ನನ್ನ ಪಾತ್ರದ ಮೇಲೆ ನನಗೆ ನಂಬಿಕೆ ಇಟ್ಟಿದ್ದೆ, ಈಗ ನಂಬಿಕೆ ಸತ್ಯವಾಗಿದೆ.
‘ತ್ರಿವಿಕ್ರಮ’ ಹಾಡಿಗೆ ಸೆಲೆಬ್ರಿಟಿಗಳ ಸಾಥ್ 1 min read
ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಹೇಗೆ?
ಕಾಲೇಜು ದಿನಗಳಲ್ಲಿ ಮಾಡಲಿಂಗ್ ಮಾಡ್ತಿದ್ದೆ. ಅದಾದ ಮೇಲೆ `ಕರ್ಮ’ ಶಾರ್ಟ್ಫಿಲ್ಮ್ ಮಾಡ್ದೆ. ಅದಾದಮೇಲೆ `ಹರ ಹರ ಮಹಾದೇವ’ ಸಿರಿಯಲ್ ಮಾಡ್ದೆ. ನಂತರದಲ್ಲಿ ಕೆಲವು ನಟನಾ ಕಾರ್ಯಗಾರಗಳಲ್ಲಿ ತೊಡಗಿಸಿಕೊಂಡೆ. ಅದಾದ ಮೇಲೆ `ಚಾರ್ಲಿ’ ಚಿತ್ರಕ್ಕೆ ಆಡಿಶನ್ ಕೊಟ್ಟು ಸೆಲೆಕ್ಟ್ ಆದೆ. `ಚಾರ್ಲಿ’ ಸಕ್ಸಸ್ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳನ್ನು ತಂದುಕೊಡಬಲ್ಲುದು ಅನ್ನೋದು ನನ್ನ ನಂಬಿಕೆ.
ನಿಮ್ಮ ಮುಂದಿನ ಚಿತ್ರಗಳು?
ಪುನೀತ್ ರಾಜ್‌ಕುಮಾರ್ ಸರ್ ತೆರೆಮೇಲೆ ಕೊನೆಯದಾಗಿ ಕಾಣಿಸಿಕೊಂಡ, ಡಾರ್ಲಿಂಗ್ ಕೃಷ್ಣ ಅಭಿನಯದ ‘ಲಕ್ಕಿ ಮ್ಯಾನ್’ ಸಿನಿಮಾ ರಿಲೀಸ್ ಆಗಬೇಕಿದೆ. ಇದು ಪ್ರೇಮ ಕಥಾ ಹಂದರದಲ್ಲಿ ಸಾಗುವ ಸಿನಿಮಾ. ನಾವು ಮೂರು ಜನ ಸ್ನೇಹಿತರು. ಅವರಲ್ಲಿ ಒಬ್ಬರ ಜೊತೆ ಲವ್ವಲ್ಲಿ ಬೀಳೋ ಥರ. ಸಖತ್ ಬೋಲ್ಡ್ ಆಗಿರುವ ಪಾತ್ರ ನನ್ನದು. ವ್ಯಕ್ತಿತ್ವದಲ್ಲಿ ಬೋಲ್ಡ್ನೆಸ್ ಇದೆ. ಸಖತ್ ಜೋಶ್ ಇರುವ ಪಾತ್ರ. ಇದು ಪ್ರಭುದೇವ ಅವರ ತಮ್ಮ ನಾಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾ. ಇನ್ನು, ಎಸ್.ಮಹೇಂದರ್ ಅವರ ನಿರ್ದೇಶನದ `ಪಂಪ’ ಮತ್ತು ದಿಗಂತ್ ಅಭಿನಯದ ಮಾರಿಗೋಲ್ಡ್ ಸಿನಿಮಾ. ಬೇರೆ ಭಾಷೆಗಳಿಂದ ಆಫರ್‌ಗಳು ರ‍್ತಿವೆ ಆದ್ರೆ, ಒಂದೊಳ್ಳೆ ಪಾತ್ರಕ್ಕಾಗಿ ಕಾಯ್ತಿದ್ದೀನಿ.
-by B.NAVEENKRISHNA