ಚಂದನವಕ್ಕೆ ದಿನದಿನಕ್ಕೆ ಹೊಸ ಪ್ರತಿಭೆಗಳ ಆಗಮನವಾಗುತ್ತಲ್ಲೇ ಇದೆ. ಆಗಮಿಸಿದ ಪ್ರತಿಭೆಗಳು ತಮ್ಮ ಪ್ರತಿಭೆಗಳ ಮೂಲಕ ಬೇರೆ ಭಾಷೆಯ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಟಿಮಣಿ ಸಂಜನಾ ದಾಸ್ ಕೂಡಾ ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ಕನ್ನಡದಲ್ಲಿ ‘ಮನಸ್ಮಿತ’ ಮತ್ತು ‘ಕೆಟಿಎಂ’ ನಡಿಸಿರುವ ಸಂಜನಾ, ಮಲಯಾಳಂನಲ್ಲಿ ‘ಮೂನ್ ವಾಕ್’ ಮತ್ತು `@’ ಸಿನಿಮಾದಲ್ಲಿ ನಟಿಸಿದ್ದಾರೆ. ಅನೇಕ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿರುವ ಇವರು, ಇದೀಗ ಹಯವದನ ನಿರ್ದೇಶನದ `ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಹೀಗೆ.. ಚಾಲೆಂಜಿ0ಗ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜನಾ, ತಮ್ಮ ಸಿನಿಪಯಣದ ಅನುಭವವನ್ನು `ಚಿತ್ತಾರ’ದ ಜೊತೆ ಹಂಚಿಕೊ0ಡಿದ್ದಾರೆ.
`ಮಾಸ್ತಿಗುಡಿ’ ದುರಂತಕ್ಕೆ ಹೊಸ ಟ್ವಿಸ್ಟ್: ಸಿಕ್ಸ್ ಪ್ಯಾಕ್ ತೆಗೀತಾ ಪ್ರಾಣ?!
ರಂಗಭೂಮಿ ಪಾಠ ಬಾಲ್ಯದಲ್ಲಿಯೇ ಸಾಕಷ್ಟು ಫ್ರೆಂಡ್ಸ್ಗಳ ಜೊತೆಗೆ ಬೆಳೆದವರು ಸಂಜನಾ. ಪ್ರೌಢಾವಸ್ಥೆಯಲ್ಲಿಯೇ, ಟ್ರಕ್ಕಿಂಗ್.. ವೈಲ್ಡ್ಲೈಫ್ ಎಡ್ವೆಂರ‍್ಸ್.. ಡ್ಯಾನ್ಸ್.. ಮ್ಯೂಸಿಕ್ ಎಲ್ಲದರಲ್ಲೂ ತೊಡಗಿಕೊಂಡಿದ್ದರು. ತಮ್ಮ ಕುಟುಂಬದವರ ಪ್ರೋತ್ಸಾಹದಿಂದ ಪಠ್ಯೇತರ ಕೆಲಸಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುತ್ತಿದ್ದ ಇವರು, ನಟನೆಯ ಗೀಳನ್ನು ಬೆಳೆಸಿಕೊಂಡಿದ್ದರು. ಜೊತೆಗೆ ಓದು, ಕವನ ಬರಯೋದು ಸಂಜನಾ ಅವರ ನೆಚ್ಚಿನ ಹವ್ಯಾಸಗಳು. ನಂತರದಲ್ಲಿ ಪ್ರಸಿದ್ಧ ರಂಗಕರ್ಮಿ ಕೀರ್ತನಾ ಕುಮಾರ್ ಅವರಲ್ಲಿ ರಂಗಭೂಮಿ ನಟನೆಯ ಸೂಕ್ಷö್ಮಗಳನ್ನು ಕಲಿತುಕೊಂಡರು.
`@’ ಮಾಲಿವುಡ್!
ಭರತ ನಾಟ್ಯಂ ವಿಧ್ಯಾರ್ಥಿಯೂ ಆಗಿದ್ದ ಸಂಜನಾ, ಸಿನಿಮಾ ನಟನೆಯನ್ನು ಪ್ರತಿಷ್ಠಿತ ಸಂಸ್ಥೆಯೊ0ದರಲ್ಲಿ ಕಲಿತು ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿ `ಮನಸ್ಮಿತ’ ಎಂಬ ಸಿನಿಮಾದಲ್ಲಿನ ಸಾನ್ಯ ಪಾತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟವರು. ಮೊದಲ ಚಿತ್ರದ ಪಾತ್ರದಲ್ಲೇ ಬೋಲ್ಡ್ ಪಾತ್ರದಲ್ಲಿ ಸೈ ಅನ್ನಿಸಕೊಂಡ ಇವರು, ಈಗ ಕನ್ನಡದಲ್ಲಿಯೇ `ಕೆಟಿಎಮ್’ ಚಿತ್ರದ ಮರ್ಸಿ ಪಾತ್ರದ ಮೂಲಕ ಪ್ರೇಕ್ಷಕರೆದುರು ಬರಲಿದ್ದಾರೆ. `ಕೆಟಿಎಮ್’ನಲ್ಲಿ ಸೆನ್ನಸಿಟೀವ್ ಹಾಗೂ ಕಾನ್ಫಿಡೆಂಟ್ ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಲಯಾಳಂನ ಸುಪ್ರಸಿದ್ಧ ನಟ ಅನುಅನಂತ್ ಅಭಿನಯದ `ಮೂನ್‌ವಾಕ್’ ಚಿತ್ರದಲ್ಲಿ `ಫ್ರೇಡಾ’ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಪೋಸ್ಟರ್‌ನಿಂದಲೇ ಮಾಲಿವುಡ್‌ನಲ್ಲಿ ಸದ್ದು ಮಾಡಿರುವ `@’ ಸಿನಿಮಾದಲ್ಲಿ ಡಬಲ್ ಶೇಡ್‌ನ ಉತ್ತಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಇಂಗ್ಲೀಷ್, ಹಿಂದಿ ವೆಬ್‌ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಕನಸಿಗೆ ತಕ್ಕ ಸಿದ್ಧತೆ ಸಂಗೀತವನ್ನು ಕಲಿಯುತ್ತಿರುವ ಸಂಜನಾ ಅವರಿಗೆ, ಸಂಗೀತ ಕ್ಷೇತ್ರದಲ್ಲೂ ಎನನ್ನಾದರು ಸಾಧಿಸುವ ತುಡಿತವಿದೆ. ಸಂಗೀತಮಯ.. ಈ ನೆಲದ ಸಂಸ್ಕೃತಿಯನ್ನು ಬಿಂಬಿಸುವ.. ಪೃಕೃತಿಯಯನ್ನು ಉಳಿಸುವ ಸಂದೇಶವಿರುವ ಚಿತ್ರಗಳಲ್ಲಿ ಅಭಿನಯಿಸುವ ಇರಾದೆ ಇರುವ ಇವರಿಗೆ, ರಾಜಕುಮಾರಿಯಾಗಿ ತೆರೆಯಲ್ಲಿ ಕಾಣಿಸಿಕೊಳ್ಳಬೇಕು ಅನ್ನುವ ಕನಸಿದೆ. ಒಟ್ಟಿನಲ್ಲಿ ಉತ್ತಮ ಕಥೆ ಹೊತ್ತ, ಉತ್ತಮ ಚಿತ್ರತಂಡದ ಜೊತೆಗೆ ವಿವಿಧ ರೀತಿಯ ಪಾತ್ರಗಳನ್ನು ಮಾಡುವ ಉದ್ದೇಶ ಇಟುಕೊಂಡಿರುವ ಇವರು, ಅದಕ್ಕೆ ಬೇಕಾದ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ.
ದೇಶ-ವಿದೇಶದಲ್ಲೂ..
ಚಂದನವನದಲ್ಲಿ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್.ಬಿ.ಶೆಟ್ಟಿ, ಯಶ್, ಶ್ರುತಿ ಹರಿಹರನ್, ಅನಂತ್‌ನಾಗ್.. ಹೀಗೆ ಸಾಕಷ್ಟು ಪ್ರತಿಭಾವಂತರ ಜೊತೆ ಕೆಲಸ ಮಾಡುವ ಕನಸೊತ್ತ ಸಂಜನಾಗೆ ಇವರ ಚಿಕ್ಕಪ್ಪ ಸಂಜಯ್ ಶಾಂತರಾ0 ಸ್ಫೂರ್ತಿ. ಸಂಜಯ್ ಶಾಂತರಾ0 ರಂಗಭೂಮಿ ಮತ್ತು ನೃತ್ಯ ಕಲೆಯಲ್ಲಿ ದೊಡ್ಡ ಹೆಸರು. ನಾಟಕ ಪ್ರದರ್ಶನ, ನೃತ್ಯ ಪ್ರದರ್ಶನಕ್ಕೊಸ್ಕರ ದೇಶ-ವಿದೇಶ ಸುತ್ತುವ ಇವರ ಸಾಕಷ್ಟು ಕಾರ್ಯಕ್ರಮಗಳಲ್ಲಿ ಸಂಜನಾ ಕೂಡ ಭಾಗವಹಿಸುತ್ತಿರುತ್ತಾರೆ.
ಜೋಗಪ್ಪನ ಅರಮನೆಯಲ್ಲಿ..
‘ಕಂಬ್ಳಿಹುಳ’ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕ ನಟನಾಗಿ ನಟಿಸುತ್ತಿರುವ, ತಂದೆ ಮಗನ ಬಾಂದವ್ಯದ ಜೊತೆಗೆ ಪ್ರೇಮ್ ಕಹಾನಿ, ಕಾಮಿಡಿ ಹಾಗೂ ಸೆಂಟಿಮೆAಟ್ ಎಲಿಮೆಂಟ್ ಗಳನ್ನ ಒಳಗೊಂಡ ಜರ್ನಿ ಇರುವ ಸಿನಿಮಾ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಮಾದಲ್ಲಿ ಚಾಲೆಂಜಿಗ್ ಪಾತ್ರದಲ್ಲಿ, ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಎಲ್ಲೋ ಜೋಗಪ್ಪ ನಿನ್ನರಮನೆ’ ಇನ್ನೂ ಚಿತ್ರೀಕರಣದ ಹಂತದಲ್ಲಿದ್ದು, ರಿಲೀಸ್ ಆದ ನಂತರ ಇನ್ನಷ್ಟು ಕನ್ನಡದಲ್ಲಿ ಉತ್ತಮ ಪಾತ್ರಗಳು ಅರಸಿ ಬರುತ್ತವೆ ಎಂಬುದು ಸಂಜನಾ ಅವರ ಬಲವಾದ ನಂಬಿಕೆ. ಅವರ ನಂಬಿಕೆ ನಿಜವಾಗಲಿ, ಅವರ ಸಿನಿ ಬದುಕು ಹಸನಾಗಲಿ ಎಂದು `ಚಿತ್ತಾರ’ ಅಭಿನಂದಿಸುತ್ತದೆ.