ಸ್ಯಾಂಡಲ್‌ವುಡ್‌ನ ಪ್ರತಿಭಾವಂತ, ಸ್ಟಾರ್ ನಿರ್ದೇಶಕ, ಸಾಕಷ್ಟು ಹಿಟ್ ಚಿತ್ರಗಳ ರೂವಾರಿ ಆರ್.ಚಂದ್ರು, `ಕಬ್ಜ’ ಎಂಬ ಬೃಹತ್ ಕನಸನ್ನು ನನಸಾಗಿಸಲು ಸಾಕಷ್ಟು ರಿಸ್ಕ್ ತಗೆದುಕೊಂಡು ಬಿಡುಗಡೆಯ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ಏಳು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ `ಕಬ್ಬ’ ಎಂಬುದು ಒಂದೆಡೆಯಾದರೆ, ಅದ್ದೂರಿ ತಾರಾಬಳಗ ಹಾಗೂ ಬೃಹತ್ ಸೆಟ್‌ಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. `ಕಬ್ಜ’ ಸಿನಿಮಾದ ಕ್ಯಾನ್ವಾಸ್, ಸೆಟ್, ಮೇಕಿಂಗ್ ನೋಡಿದಾಗ ಚಂದ್ರು ತಮ್ಮ ಮೇಕಿಂಗ್ ಶೈಲಿ ಬದಲಾಗಿರೋದು ಹಾಗೂ ಪ್ಯಾನ್ ಇಂಡಿಯಾ ಮಟ್ಟಕ್ಕೆ ಸಿದ್ಧವಾಗಿರೋದು ಕಾಣುತ್ತಿದೆ. ಅದೇ ಕಾರಣದಿಂದ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಬೇರೆ ಬೇರೆ ಭಾಷೆಯ ದೊಡ್ಡದೊಡ್ಡ ಸಿನಿಮಾ ಸಂಸ್ಥೆಗಳು ಕೂಡಾ `ಕಬ್ಜ’ ಚಿತ್ರದ ಮೇಲೆ ಒಂದು ಕಣ್ಣಿಟ್ಟಿದ್ದು, ಬಿಝಿನೆಸ್ ಮಾತುಕತೆಗಳು ಕೂಡಾ ಆರಂಭವಾಗಿದೆ. ಉಪೇಂದ್ರ ಹಾಗೂ ಸುದೀಪ್ ಮುಖ್ಯಭೂಮಿ ಕೆಯಲ್ಲಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ , ಶಿವಕುಮಾರ್ ಕಲಾ ನಿರ್ದೇಶನ ಸೇರಿದಂತೆ ಬಹುತೇಕ `ಕೆಜಿಎಫ್’ ತಾಂತ್ರಿಕ ಬಳಗವೇ ಈ ಚಿತ್ರದಲ್ಲೂ ಮುಂದುವರೆದಿದೆ. ಬಿಗ್ ಬಜೆಟ್ ನಲ್ಲಿ ತಯಾರಾಗಿರುವ ಪ್ಯಾನ್ ಇಂಡಿಯಾ `ಕಬ್ಬ’ ಸಿನಿಮಾದ ಬಗ್ಗೆ ಅವರು `ಚಿತ್ತಾರ’ ಜೊತೆ ಮಾತನಾಡಿದ್ದಾರೆ.
ಕೆ.ಜಿ.ಎಫ್, ಹೈವೇ ಮತ್ತು ಫೆರಾರಿ
ಈವರೆಗೆ ಕನ್ನಡ ಎಲ್ಲಾ ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ ಎಲ್ಲರಿಗೂ ನಾನು ಹೃದಯಾಳಂತರದಿAದ ಅಭಿನಂದನೆ ಸಲ್ಲಿಸುತ್ತೇನೆ. ಇಡೀ ಕೆ.ಜಿ.ಎಪ್ ತಂಡ, ಅದರಲ್ಲೂ ವಿಜಯ್ ಕಿರಗಂದೂರ್, ಪ್ರಶಾಂತ್ ನೀಲ್ ಮತ್ತು ಯಶ್ ಅವೆರೆಲ್ಲರೂ ಸೇರಿ ಅದ್ಭುತವಾದ ಕೆಲಸ ಮಾಡಿದ್ದಾರೆ. ಕನ್ನಡ ಸಿನಿಮಾ ರಂಗ ಚೌಕಟ್ಟನ್ನು ಮುರಿದು, ಜಗತ್ತಿನಾದ್ಯಂತ ವಿಸ್ತರಿಸಿದ್ದಾರೆ. ಇದರಿಂದ ಮುಂದಿನ ಸಿನಿಮಾ ಸೃಷ್ಟಿಕರ್ತನಿಗೆ ದೊಡ್ಡ ಫ್ಲಾಟ್‌ಫಾರಂ, ದೊಡ್ಡ ಹೈವೇ ಸೃಷ್ಟಿಯಾಗಿದೆ. ಈಗ ಕನ್ನಡ ಚಿತ್ರರಂಗ ಇನ್ನಷ್ಟು ಬೆಳೆಯಬೇಕು ಎಂದರೆ ಕೆ.ಜಿ.ಎಫ್ ನಿರ್ಮಿಸಿದ ಸುಸಜ್ಜಿತ ಹೈವೇ ರಸ್ತೆಯಲ್ಲಿ ಫೆರಾರಿ ಕಾರು ತಗೊಂಡು ಓಡಿಸಬೇಕು. ಇಲ್ಲವೆಂದಾರೆ ಕೆ.ಜಿ.ಎಫ್ ಹಾಕಿಕೊಟ್ಟ ದಾರಿ ಅಲ್ಲಿಗೆ ನಿಂತು ಹೋಗುತ್ತದೆ. ಈಗ ಕೆ.ಜಿ.ಎಫ್ ಹಾದಿ ಸಾಕಷ್ಟು ಮಂದಿ ಮುಂದುವರಿಯುತ್ತಿದುವುದು ಸಂತಸದ ಸಂಗತಿ.
ಹಾರರ್ ಥ್ರಿಲ್ಲರ್ ಕಪಾಲ ಇಂದು ತೆರೆಗೆ
ಕಂಟೆ0ಟ್ & ಕ್ವಾಲಿಟಿಯ ಪರಿಭಾಷೆ ಬದಲಾಗಿದೆ
ಕನ್ನಡ ಚಿತ್ರರಂಗ ಹೀಗೆ ಮುಂದುವರಿದರೆ ಇನ್ನಷ್ಟು ಎತ್ತರಕ್ಕೆ ಏರುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ನಾನು ಕೂಡ `ಕಬ್ಜ’ ಚಿತ್ರವನ್ನು ಚಾಲೆಂಜಿAಗ್ ಮತ್ತು ಧನಾತ್ಮಕವಾಗಿ ತೆಗೆದುಕೋಡಿದ್ದೀನಿ. ಇಷ್ಟು ದಿನ ಕಂಟೆAಟ್ ಓರಿಯೆಂಟೆಡ್ ಸಿನಿಮಾಗಳನ್ನು ಸೀಮಿತ ಬಂಡವಾಳದಲ್ಲಿ ಮಾಡುತ್ತಿದ್ದೆ. `ಕಬ್ಜ’ ವಿಚಾರಕ್ಕೆ ಬರೋದಾದರೆ ನನ್ನದೆ ನಿರ್ಮಾಣ ನಿರ್ದೇಶನದಲ್ಲಿ ತೆರೆಗೆ ಬರಲಿದೆ. ಈ ಮೂಲಕ ನಾನೂ ಕೂಡ ಕನ್ನಡ ಚಿತ್ರರಂಗದ ಏಳಿಗೆಯ ಭಾಗವಾಗಬೇಕು ಎಂದು ಒಂದು ಉತ್ತಮ ತಂಡವನ್ನು ಕಟ್ಟಿಕೊಂಡು ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಇಡೀ ತಂಡ ಕಷ್ಟಪಟ್ಟು ಪ್ರೀತಿಯಿಂದ ಕೆಲಸ ಮಾಡಿದೆ. ಇನ್ನು ಭಗವಂತನ ಕೃಪೆ, ಪ್ರೇಕ್ಷಕರ ಪ್ರೋತ್ಸಾಹ ಮತ್ತು ಮಾಧ್ಯಮದವರ ಸಹಕಾರದಿಂದ `ಕಬ್ಜ’ ದಾಖಲೆಯನ್ನು ಬರೆಯುತ್ತದೆ ಅನ್ನವುದು ನನ್ನ ಭಾವನೆ. ಈ ಮೂಲಕ ಕೆ.ಜಿಎಫ್ ಹಾಕಿಕೊಟ್ಟ ಹಾದಿ ಸರಿಯಾಗಿದೆ ಅನ್ನುವುದನ್ನು ಮತ್ತೆ ಪ್ರೂವ್ ಮಾಡುತ್ತೇವೆ.
ಸ್ಯಾಂಡಲ್ವುಡ್ ನ ಚಾಂಪಿಯನ್ ಗೆ ಡೈನಮಿಕ್ ಸಾಥ್
ಯಾವುದೇ ಚಿತ್ರದ ಹೋಲಿಕೆಗೆ ನಿಲುಕದ ಚಿತ್ರ
ಮೇಕಿಂಗ್ ವಿಚಾರದಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲದೆ, ಪಾನ್ ಇಂಡಿಯಾ ಲೆವೆಲ್‌ನಲ್ಲಿ ಸಿದ್ಧವಾಗಿರುವ ಚಿತ್ರ. ಮೇಕಿಂಗ್‌ನಲ್ಲಿ ನಾನು ಯಾವ ಚಿತ್ರವನ್ನೂ ಹೋಲಿಕೆ ಮಾಡಲು ಹೋಗುವುದಿಲ್ಲ, ಆದರೆ ಪ್ರೇಕ್ಷಕ ಇಲ್ಲಿವರೆಗೆ ಇಷ್ಟ ಪಟ್ಟು ನೋಡಿದ ಪ್ಯಾನ್ ಇಂಡಿಯಾ ಸಿನಿಮಾ ಮೇಕಿಂಗ್‌ಗೆ ಯಾವುದೇ ಕಮ್ಮಿ ಇಲ್ಲದೆಂತೆ `ಕಬ್ಜ’ ತಯಾರಾಗಿದೆ. ಕೆ.ಜಿ.ಎಪ್ ಆದಮೇಲೆ ಮಗದೊಮ್ಮೆ ಭಾರತೀಯ ಚಿತ್ರರಂಗ ಹಿಂದಿರುಗಿ ನೋಡುವಂತಹ ಕೆಲಸವನ್ನು `ಕಬ್ಜ’ ಮಾಡಲಿದೆ. ಆ ಮಟ್ಟಿನ ಶ್ರಮ ಇಡೀ ಚಿತ್ರತಂಡ ಹಾಕಿದೆ. ಇನ್ನು, `ಕಬ್ಜ’ವನ್ನು ಈಗಾಗಲೇ ಸಿದ್ಧವಾಗಿರುವ ಚಿತ್ರಗಳಿಗೆ ಹೋಲಿಸಲು ಸಾಧ್ಯವಿಲ್ಲ, ಏಕೆಂದರೆ `ಕಬ್ಜ’ ಬೆರೆಯದೇ ರೀತಿಯ ಚಿತ್ರ. ಅದು ಹೇಗೆ ಎಂಬುದನ್ನು ಮುಂದೆ ರಿಲೀಸ್ ಅಗಲಿರುವ ಕಂಟೆAಟ್‌ಗಳು ಹೇಳುತ್ತವೆ.
ಕನ್ನಡದಲ್ಲೂ ‘ಆಶಿಕಿ’ ಕಿಕ್..ಇದು ಕ್ರೈಮ್ ರಿಪೋರ್ಟರ್ ಹೆಣೆದ ಮ್ಯೂಸಿಕಲ್ ಲವ್ ಸ್ಟೋರಿ
ಮಲ್ಟೀಸ್ಟಾರ್ ಚಿತ್ರಗಳ ಹಿಂದಿನ ಕಹಾನಿ
ಇಬ್ಬರೂ ಸ್ಟಾರ್‌ಗಳನ್ನು ತೆರೆಯ ಹಿಂದೆ ಮತ್ತು ತೆರೆಯ ಮೇಲೆ ಸಂಭಾಳಿಸುವುದು ನನಗೆ ಸವಾಲೇ ಅಲ್ಲ. ಯಾಕೆಂದರೆ `ಕಬ್ಜ’ಕ್ಕೂ ಮೊದಲು ನಾನು ಸರಿಸುಮಾರು ಒಂದು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದೀನಿ. ಸಾಕಷ್ಟು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದೀನಿ. ಒಟ್ಟಿನಲ್ಲಿ, ನನ್ನ ವಯಸ್ಸಿನ ಅರುವತ್ತು ಭಾಗವನ್ನು ಸಿನಿಮಾ ರಂಗದಲ್ಲೇ ಕಳೆದಿದ್ದೀನಿ. ಈ ಒಂದು ಅಗಾಧವಾದ ಅನುಭವದಿಂದ ಉಪ್ಪಿಸರ್, ಸುದೀಪ್‌ಸರ್ ಆಥವಾ ನಾಳೆ ಅಮಿತಾಬ್ ಬಚ್ಚನ್ ನನ್ನ ಚಿತ್ರದಲ್ಲಿ ಅಭಿನಯಿಸುತ್ತಿರಬಹುದು, ಒಬ್ಬ ನಿರ್ದೇಶಕನಾಗಿ ನಾನು ಅವರಿಂದ ಏನು ಕೆಲಸ ತೆಗೆದು ಕೊಳ್ಳಬಹುದು ಮತ್ತು ಹೇಗೆ ತೆಗೆದುಕೊಳ್ಳಬಹುದು ಎಂಬುದಷ್ಟೇ ಯೋಚಿಸುತ್ತೇನೆ. ಅತ್ಯಂತ ವಿನಯತೆಯಿಂದ ನನ್ನ ಚಿತ್ರದ ಪಾತ್ರ ಕೇಳುವ ಅಭಿನಯವನ್ನು ನಾನು ಪಡೆದುಕೊಳ್ಳುತ್ತೇನೆ. ಚಿತ್ರದ ಕ್ಯಾಪ್ಟನ್ ಆಗಿ, ಯಾವುದೇ ಮುಲಾಜಿಲ್ಲದೆ ಅತ್ಯಂತ ಪ್ರೀತಿಯಿಂದ ಚಿತ್ರಕ್ಕೆ ನ್ಯಾಯ ಸಲ್ಲಿಸುವÀ ಕೆಲಸ ಮಾಡುತ್ತೇನೆ. ನನ್ನೊಳಗಿರುವ ಒಬ್ಬ ಪ್ರಾಮಾಣಿಕ ನಿರ್ದೇಶಕ ಚಿತ್ರಕ್ಕೇ ಏನು ಬೇಕೋ ಅದನ್ನು ತೆಗೆದುಕೊಳ್ಳುತ್ತಾನೆ. ಸೋಲು-ಗೆಲುವು ಅನ್ನೋದು ಪ್ರೇಕ್ಷಕರಿಗೆ ಬಿಟ್ಟಿದ್ದು, ಆದರೆ ಒಬ್ಬ ನಿರ್ದೇಶಕನಾಗಿ ನನ್ನ ಕೆಲಸವನ್ನು ಅತ್ಯಂತ ಜತನದಿಂದ ಮಾಡಬೇಕು ಎಂಬುದೇ ನನ್ನ ಆಸೆ ಮತ್ತು ಸಂತಸ. ಇನ್ನು, `ಕಬ್ಜ’ದಲ್ಲಿ ಉಪೇಂದ್ರ ಅವರು ಚಿತ್ರದ ನಾಯಕ ನಟನಾಗಿದ್ದು, ಸುದೀಪ್ ಒಂದು ಕಿರೀಟಪ್ರಾಯವಾದ ಪಾತ್ರವನ್ನು ಮಾಡಿದ್ದಾರೆ. ಇಡೀ ಸಿನಿಮಾದ ಕಥೆಯಲ್ಲಿ ಬಹುಮುಖ್ಯವಾದ ಪಾತ್ರವದು. ಸಿನಿಮಾ ನೋಡಿದ ಪ್ರೇಕ್ಷಕ ಚಿತ್ರದ ನಾಯಕ ಯಾರು, ವಿಲನ್ ಯಾರು ಅನ್ನುವುದನ್ನು ನಿರ್ಧರಿಸುವ ರೀತಿಯಲ್ಲಿ ನರೇಶನ್ ಶೈಲಿ ಚಿತ್ರದಲ್ಲಿದೆ.
ನಲಿದು ಬಿಟ್ಟಳು ‘ವಾಸಂತಿ’…ಅಕ್ಟೋಬರ್ 14ಕ್ಕೆ ಸಿನಿಮಾ ರಿಲೀಸ್
ಮಣ್ಣಿನ ರೋಡಿನಿಂದ… ರನ್‌ವೇಗೆ!
ಪ್ಯಾನ್ ಇಂಡಿಯಾ ಸಿನಿಮಾಗಳಿಂದ, ಬಜೆಟ್ ದೃಷ್ಟಿಯಿಂದ ತಯಾರಾದ ಸೀಮಿತ ಬಜೆಟ್‌ನಿಂದ ತಯಾರಾದ ಚಿತ್ರಗಳಿಗೆ ಉಳಿಗಾಲವಿಲ್ಲ ಎಂಬ ಆಪಾದನೆ ನನ್ನ ಕಿವಿಗೂ ಬಿದ್ದಿದೆ. ಆದರೆ, ಅದು ಆಪಾದನೆ ಎಂದರೆ ಅದು ದೊಡ್ಡ ತಪ್ಪಾಗುತ್ತದೆ. ಯಾಕೆಂದರೆ ನಾವೆಲ್ಲಾ ಒಂದು ಮಣ್ಣಿನ ರೋಡಿನಲ್ಲಿ ನಮ್ಮಷ್ಟಕ್ಕೇ ನಾವು ಪಯಣಿಸುತ್ತಿದ್ದೆವು, ಈಗ ಇದ್ದಕ್ಕಿದ್ದಂತೆ ಒಂದು ರನ್‌ವೇ ಸಿದ್ಧವಾಯಿತು. ರನ್‌ವೇ ಸಿದ್ಧವಾದ ಮೇಲೂ ನಾನಿನ್ನೂ ಮಣ್ಣಿನ ರೋಡಿನಲ್ಲೇ ಸಾಗ್ತೀನಿ ಅಂದರೆ ಅದು ಯಾರ ತಪ್ಪು.. ರನ್‌ವೇಯಲ್ಲಿ ಪಯಣಿಸಲು ನಾವೆಲ್ಲರೂ ಸಿದ್ಧವಾಗಬೇಕು.. ನಾನೊಬ್ಬನೇ ಅಲ್ಲಾ ಸಾಕಷ್ಟು ಜನ ಈ ಒಂದು ಬದಲಾಣೆಯನ್ನು ಸ್ವೀಕರಿಸಿ ಮುಂದುವರೆದಿದ್ದಾರೆ. ಸ್ವೀಕರಿಸದೆ ಬೇರೆ ದಾರಿಯಿಲ್ಲ, ಏಕೆಂದರೆ, ಮೊಬೈಲ್ ಥೀಯೆಟರ್ ಆಗಿರುವ ಈ ಕಾಲಘಟ್ಟದಲ್ಲಿ ಪ್ರೇಕ್ಷಕನಿಗೆ ಸಾಕಷ್ಟು ಆಯ್ಕೆಗಳಿವೆ. ಅವನಿಗೆ ಪ್ರಪಂಚ ಎಲ್ಲಾ ಭಾಷೆಯಲ್ಲಿ ತಯಾರಾದ ಸಿನಿಮಾಗಳನ್ನು ನೋಡುವ ಅವಕಾಶವಿದೆ, ಹಾಗಾಗಿ ಅವನನ್ನು ಸಿನಿಮಾ ಮಂದಿರಗಳಿಗೆ ಕರೆತರಬೇಕಾದಾರೆ ವಿಶೇಷ ಚಿತ್ರಗಳನ್ನೇ ಮಾಡಬೇಕು.
ಬದಲಾದ ಪ್ರೇಕ್ಷಕನ ಅಭಿರುಚಿ
ನಾನಿಲ್ಲಿ ಕೇವಲ ಬಜೆಟ್ ದೃಷ್ಟಿಯಿಂದ ಹೇಳುತ್ತಿಲ್ಲ ಕಂಟೆAಟ್ ವಿಚಾರದಲ್ಲೂ ವಿಶೇಷ ಚಿತ್ರಗಳನ್ನು ಮಾಡಿದರೂ ಪ್ರೇಕ್ಷಕ ಚಿತ್ರಮಂದಿರಕ್ಕೆ ಬಂದೇ ಬರುತ್ತಾನೆ. ಪ್ರೇಕ್ಷಕನ ಅಭಿರುಚಿಗೆ ಸರಿಯಾಗಿ ಚಿತ್ರ ನಿರ್ಮಾಣವು ಬದಲಾಗಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರೇಕ್ಷಕ ಸಾಕಷ್ಟು ಎಜುಕೇಟ್ ಆಗಿದ್ದಾನೆ ಅನ್ನುವುದನ್ನು ಅರ್ಥಮಾಡಿಕೊಂಡು ಮುಂದಿನ ಹೆಜ್ಜೆ ಇಡಬೇಕಿದೆ. ಈಗ `ಚಲನ ಚಿತ್ರ’ ಅನ್ನವುದರ ಪರಿಭಾಷೆ ಬದಲಾಗಿದೆ, ಚಿತ್ರ ನೋಡುತ್ತಿರುವಾಗ ತನಗೆ ಬೇಕಾದಲ್ಲಿ ನಿಲ್ಲಿಸಿ ಅದರ ಬಗ್ಗೆ ವಿಮರ್ಶೆ ಮಾಡುವ ಸ್ವಾತಂತ್ರ‍್ಯ ಸಿಕ್ಕಿದೆ. ಏನು ತಪ್ಪು ಮಾಡಿದರೂ ಗುರುತಿಸುತ್ತಾರೆ. ಹಾಗಾಗಿ, ನಾವು ಲೋಬಜೆಟ್-ಹೈಬಜೆಟ್ ಅನ್ನುವುದನ್ನು ಬದಿಗಿಟ್ಟು. ಅದ್ಭುತವಾದ ಸಿನಿಮಾಗಳನ್ನು ಪ್ರೇಕ್ಷಕನಿಗೆ ನೀಡಬೇಕಿದೆ. ಇಲ್ಲಿ ಚಿತ್ರದ ಬಜೆಟ್‌ಗಿಂತ ನಿರ್ದೇಶಕನ ಶ್ರಮವೇ ಸಿನಿಮಾದ ದೊಡ್ಡ ಆಸ್ತಿ. ಸಿನಿಮಾ ಬಗ್ಗೆ ಮಾತಾಡುವುದಕ್ಕಿಂತ ಸಿನಿಮಾವೇ ಮಾತಾಡಬೇಕು. ನಿರ್ದೇಶಕ ಗೆಲ್ಲಬೇಕು, ನಿರ್ಮಾಪಕ ಗೆಲ್ಲಬೇಕು ಎಂದು ಸಿನಿಮಾ ಮಾಡುವ ಕಾಲ ಬದಲಾಗಿದೆ, ಈಗ ಇಡೀ ಚಿತ್ರರಂಗ ಗೆಲ್ಲುವಂತಹ ಸಿನಿಮಾ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈಗಾಗಲೇ ರಿಲೀಸ್ ಆಗಿರುವ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ಅದನ್ನು ಪ್ರೂವ್ ಮಾಡಿದೆ.
-ಬಿ.ನವೀನ್‌ಕೃಷ್ಣ ಪುತ್ತೂರು