Sandalwood Leading OnlineMedia

Exclusive interview: ಕರಾವಳಿ ಬ್ಯೂಟಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ

ಲಿಯೋನಿಲ್ಲಾ ಶ್ವೇತಾ ಡಿಸೋಜಾ ಕನ್ನಡ ಚಿತ್ರರಂಗದ ಉದ್ಯೋನ್ಮುಖ ನಟಿ. ಇವರು ಮೂಲತಃ ಮಂಗಳೂರಿನವರು. ಹಿಂದಿ ಚಿತ್ರ ‘ವೈ’ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ‘ಖಾಸಗಿ ಪುಟಗಳು’ ಸಿನಿಮಾದಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದರು. ಇತ್ತೀಚೆಗಷ್ಟೇ ಹೆಜ್ಜಾರು ಮೂಲಕ ಮನೆ ಮಾತಾಗಿದ್ದಾರೆ. ತಮ್ಮ ನಟನಾ ಪ್ರತಿಭೆಯಿಂದಾನೇ ಅವಕಾಶಗಳನ್ನು ಪಡೆಯುತ್ತಿದ್ದಾರೆ. ನೋಡುವುದಕ್ಕೆ ಬ್ಯೂಟಿ.. ದಂತದ ಗೊಂಬೆಯಂತಿರುವ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಮಾತು ಮಾತ್ರ ಫುಲ್ ಸಾಫ್ಟ್. ಸದ್ಯ ಕನ್ನಡ ಇಂಡಸ್ಟಿçÃಯಲ್ಲಿ ಬ್ಯುಸಿಯೆಸ್ಟ್ ನಟಿಯಾಗಿದ್ದಾರೆ. ತಮ್ಮ ಜೀವನ ಶೈಲಿ, ಇಂಡಸ್ಟ್ರೀ ಕಥೆ, ತಮ್ಮ ಕಥೆಯನ್ನೆಲ್ಲಾ `ಚಿತ್ತಾರ’ದೊಂದಿಗೆ ಹಂಚಿಕೊಂಡಿದ್ದಾರೆ.

* ನಿಮ್ಮ ಫ್ಯಾಮಿಲಿಗೆ ಸಿನಿಮಾ ಬ್ಯಾಗ್ರೌಂಡ್ ಇಲ್ಲ.. ನೀವೇಗೆ ಈ ಕಡೆ ಆಸಕ್ತಿ ಬೆಳೆಸಿಕೊಂಡಿದ್ದು..?

`ನಾನು ಮೂಲತಃ ಮಂಗಳೂರು. ಅಲ್ಲಿಯೇ ವಿದ್ಯಾಭ್ಯಾಸವನ್ನು ಮುಗಿಸಿದ್ದೆ. ಇಂಜಿನಿಯರಿಂಗ್ ಮುಗಿಸಿ, ಬೆಂಗಳೂರಿನ ಅಸೆಂಚರ್‌ನಲ್ಲಿ ಕೆಲಸಕ್ಕೆ ಸೇರಿದ್ದೆ. ಮಾಡೆಲಿಂಗ್ ಎಲ್ಲಾ ಏನು ಮಾಡಿಲ್ಲ. ಇಂಡಸ್ಟ್ರಿಗೆ ಬರಬೇಕೆಂಬ ಪ್ಲ್ಯಾನ್ ಕೂಡ ಇರಲಿಲ್ಲ. ಅನಿರೀಕ್ಷಿತವಾಗಿ ಎಂಟ್ರಿಯಾಗಿದ್ದು. ಇಂಡಸ್ಟಿç ಬಗ್ಗೆ ನನಗೆ ಇದ್ದ ನಾಲೆಡ್ಜ್ ಜೀರೋ ಅಂತಾನೇ ಹೇಳಬಹುದು. ಅಸೆಂಚರ್‌ನಲ್ಲಿ ಕೆಲಸ ಮಾಡುವಾಗ ನನ್ನೊಬ್ಬ ಫ್ರೆಂಡ್ ಬಂದು ಒಂದು ಶಾರ್ಟ್ ಮೂವಿ ಮಾಡೋಣಾ ಅಂತ ಹೇಳಿದ್ದ. ವೀಕೆಂಡ್ಸ್ ಅಲ್ವಾ. ನಂಗೂ ಬರೀ ಜಾಬ್ ಮಾಡಿ ಮಾಡಿ ರಿಲ್ಯಾಕ್ಸ್ ಆಗ್ಬೇಕಿತ್ತು. ಎಕ್ಸ್ಟ್ರಾ ಆಕ್ಟಿವಿಟಿ ಬೇಕಿತ್ತು. ಆ ಶಾರ್ಟ್ ಮೂವಿಯಲ್ಲಿ ಒಂದು ಕ್ಯಾರೆಕ್ಟರ್ ನಾನು ಮಾಡಿದ್ದೆ. ಅಲ್ಲಿಂದ ಜರ್ನಿ ಶುರುವಾಗಿದ್ದು. ಶಾರ್ಟ್ ಮೂವಿ ಮಾಡಿದ ಮೇಲೆ ಒಳ್ಳೆಯ ರೆಸ್ಪಾನ್ಸ್ ಬಂತು. ನಾನು ಸ್ಕೂಲಲ್ಲಿ ಡ್ಯಾನ್ಸ್, ಸ್ಪೋರ್ಟ್ಸ್ ಮಾಡ್ತಾ ಇದ್ದೆ. ಶಾರ್ಟ್ ಮೂವಿ ಮಾಡಿದ ಮೇಲೆ ಸಿನಿಮಾ ಇಂಡಸ್ಟ್ರಿಗೆ ಒಮ್ಮೆ ಟ್ರೈ ಮಾಡೋಣಾ ಅಂತ ಅಂದುಕೊಂಡಿದ್ದು.

* ಸಿನಿಮಾದ ಫಸ್ಟ್ ಆಡಿಷನ್ ಎಕ್ಸ್ಪೀರಿಯನ್ಸ್ ಹೇಗಿತ್ತು..?

ನಂಗೆ ಸಿನಿಮಾ ಬಗ್ಗೆ ಏನು ಗೊತ್ತಿಲ್ಲ. ಒಂದು ದಿನ ಮಂಗಳೂರು ಟೀಂ ಆಡಿಷನ್ ಕರೆದಿದ್ದರು. ಒಂದು ಆಡ್ ಶೂಟ್‌ಗೆ. ಒಂದು ಮೊಟ್ಟೆಯ ಕಥೆ ಟೀಂ ಅಂತ ಇತ್ತು. ಇದು ಒಳ್ಳೆಯ ಟೀಂ ಅಲ್ವಾ ಅನ್ನಿಸಿ, ನೋಡೋಣಾ ಇರಲಿ ಅಂತ ನನ್ನ ಫೋಟೋಗೋಳನ್ನು ಕಳುಹಿಸಿದ್ದೆ. ಫೋಟೋಗಳನ್ನು ಶಾರ್ಟ್ ಲೀಸ್ಟ್ ಮಾಡಿ, ನನಗೆ ಆಡಿಷನ್‌ಗೆ ಕರೆದಿದ್ದರು. ಆಗ ನಾನು ರಾಜ್ ಬಿ.ಶೆಟ್ಟಿ ಅವರನ್ನು ಭೇಟಿ ಮಾಡಿದ್ದೆ. ಅವರೇ ನನ್ನ ಆಡಿಷನ್ ತೆಗೆದುಕೊಂಡಿದ್ದು. ಆಡಿಷನ್ ನಾನು ಚೆನ್ನಾಗಿ ಕೊಟ್ಟಿರಲಿಲ್ಲ. ಎಲ್ಲಿಂದ ಸ್ಟಾರ್ಟ್ ಮಾಡಬೇಕು ಅಂತ ಗೊತ್ತಿಲ್ಲ ಅಲ್ವಾ ಹೀಗಾಗಿ ಆಡಿಷನ್‌ನಲ್ಲಿ ಭಾಗವಹಿಸಿದೆ. ಸರ್‌ನ ಅಲ್ಲಿ ಕೇಳಿದೆ. ನಾನು ಆಕ್ಟಿಂಗ್ ಕಲಿಬೇಕು ಹೇಗೆ, ಏನು ಮಾಡಬೇಕು ಅಂದೆ. ಮೊದಲು ನೀನು ಮೊನೊಲಾಗ್ಸ್ ಕಲಿ ಅಂದ್ರು. ಅವರೇ ರೆಫರೆನ್ಸ್ ಮಾಡಿದ್ರು. ಒಂದು ವಾರಗಳ ಕಾಲ ನಂಗೆ ವರ್ಕ್ ಶಾಪ್ ಥರ ಕೊಟ್ರು. ಆಫೀಸ್‌ನಿಂದ ಬಂದು ಒಂದು ೬ ತಿಂಗಳು ಮನೋಲಾಗ್ಸ್ನೇ ಪ್ರಾಕ್ಟೀಸ್ ಮಾಡ್ತಾ ಇದ್ದೆ. ಅಲ್ಲಿಯ ತನಕ ಯಾವುದೇ ಆಡಿಷನ್ ಕೊಡಲಿಲ್ಲ. ಆರು ತಿಂಗಳು ನಾನು ನೀಟಾಗಿ ಕಲಿತೆ. ಅಲ್ಲಿಯೇ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ಬಂದಿದ್ದು. ಆಮೇಲೆ ಆಡಿಷನ್‌ಕೊಡುವುದಕ್ಕೆ ಶುರು ಮಾಡಿದೆ. ಅಲ್ಲಿಂದ ಮೂವಿಗಳು ಕೂಡ ಸಿಗುವುದಕ್ಕೆ ಸ್ಟಾರ್ಟ್ ಆಯ್ತು.

* ವಿದ್ಯಾಭ್ಯಾಸದ ಜೊತೆಗೆ ಮೈಗೂಡಿಸಿಕೊಂಡ ಕಲೆಗಳು..?

`ನಮ್ಮ ಸ್ಕೂಲಲ್ಲಿ ಭರತನಾಟ್ಯಂ ಟೀಚರ್ ಬರ್ತಾ ಇದ್ರು. ಆಗ ಬೇಸಿಕ್ ಕಲಿತಿದ್ದೀನಿ. ಈಗ ಯಾರಾದ್ರೂ ಕೊರಿಯೋಗ್ರಾಫ್ ಮಾಡಿದ್ರೆ ಯಾವುದೇ ಥರದ ಡ್ಯಾನ್ಸ್ ಬೇಕಾದರೂ ಮಾಡುವಷ್ಟು ಪ್ರಾಕ್ಟೀಸ್ ಮಾಡಿದ್ದೀನಿ. ವಾಲಿಬಾಲ್‌ನಲ್ಲಿ ನ್ಯಾಷನಲ್ಸ್ ಆಡಿದ್ದೀನಿ ಗೊತ್ತಾ..? ಡ್ಯಾನ್ಸ್.. ಸ್ಪೋರ್ಟ್ಸ್ ಅಂದ್ರೆ ತುಂಬಾನೇ ಇಷ್ಟ ನನಗೆ’.

* ನಿಮ್ಮ ಪೋಷಕರಾಗಿ ನೀವೂ ಆಕ್ಟರ್ ಆಗಿದ್ದು ಓಕೆ ನಾ..?

`ನಾನು ಓದಿದ್ದು ಇಂಜಿನಿಯರಿಂಗ್ ಆಯ್ತಾ. ಆದ್ರೆ ನಮ್ಮ ಪೋಷಕರಿಗೆ ಇದ್ದದ್ದು ನನ್ನನ್ನು ಡಾಕ್ಟರ್ ಮಾಡಬೇಕು ಎಂಬ ಆಸೆ. ಆದರೆ ನಾನು ಸ್ವಲ್ಪ ಎಮೋಷನಲ್ ಪರ್ಸನ್. ಸೋ ನಂಗೆ ಹ್ಯಾಂಡಲ್ ಮಾಡುವುದಕ್ಕೆ ಆಗುತ್ತಾ ಅಂತ ಗೊತ್ತಾಗ್ತಾ ಇರಲಿಲ್ಲ. ನನ್ನಿಂದ ಸಾಧ್ಯವಾಗಲ್ಲ ಅನ್ನೋದು ಅರ್ಥ ಆಗಿತ್ತು. ಆಗ ಇಂಜಿನಿಯರಿಂಗ್ ಆಪ್ಶನ್ ಆಗಿತ್ತು. ಯಾಕಂದ್ರೆ ಹೈಯರ್ ಎಜುಕೇಷನ್ ಅಂತ ಬಂದ್ರೆ ಒಂದು ಡಾಕ್ಟರ್ ಅಥವಾ ಮತ್ತೊಂದು ಇಂಜಿನಿಯರಿಂಗ್ ಅಂತಾನೇ ಎಲ್ಲರ ಮೈಂಡ್‌ಸೆಟ್ ಇತ್ತು. ನಮ್ಮ ಮನೆಯಲ್ಲಿ ಯಾವುದದಕ್ಕೂ ಫೋರ್ಸ್ ಮಾಡಲಿಲ್ಲ. ಆ ಸಮಯದಲ್ಲಿ ಬೇರೆ ಕೋರ್ಸ್ಗಳ ಬಗ್ಗೆ ಯಾರೂ ಕೂಡ ಮಾರ್ಗದರ್ಶನ ನೀಡುತ್ತಿರಲಿಲ್ಲ. ಹೀಗಾಗಿ ನಾನು ಇಂಜಿಯರಿಂಗ್ ಪದವಿಯನ್ನೇ ಮುಗಿಸಿದೆ. ಮಗಳು ಡಾಕ್ಟರ್ ಆಗಿದ್ದರೆ ಹೆಚ್ಚಿನ ಖುಷಿ ಪಡ್ತಾ ಇದ್ದರು ಅನ್ನಿಸುತ್ತೆ. ಮನೆಯಲ್ಲಿ ಸಿನಿ ಕಲ್ಚರ್ ಇರಲಿಲ್ಲ. ಹೀಗಾಗಿ ಅವರಿಗೂ ಗೊತ್ತಿರಲಿಲ್ಲ ನಾನು ಈ ಫೀಲ್ಡ್ಗೆ ಬರ್ತಿನಿ ಅಂತ. ಆಮೇಲೆ ಯೋಚನೆ ಮಾಡಿದ್ರು ಆ ಫೀಲ್ಡ್ ಯಾಕೆ ಬೇಕು. ಒಳ್ಳೆ ಕೆಲಸ ಇದೆ ಅಂತ. ಆಮೇಲೆ ನಾನೇ ಅವರನ್ನು ಒಪ್ಪಿಸಿದೆ. ಈಗ ಖುಷಿಯಾಗಿದ್ದಾರೆ’.


* ಮೊದಲ ಸಿನಿಮಾ ಹಿಂದಿಯಲ್ಲಿ ಮಾಡಿದ್ರಿ ಹೇಗೆ..?

`ನಾನಿನ್ನು ಹೊಸಬಳು. ಹೇಗೆ ಅವಕಾಶ ಹುಡುಕುವುದು ಗೊತ್ತಿರಲಿಲ್ಲ. ನಂಗೊAದು ಅನುಭವ ಬೇಕಿತ್ತು. ಬೇರೆ ಭಾಷೆಯ ಮಿತಿ ಇರಲಿಲ್ಲ. ಕನ್ನಡ ಎಂದಾಗ ಕನೆಕ್ಷನ್ ಹೆಚ್ಚು ಇರುತ್ತದೆ. ಕನ್ನಡದಲ್ಲಿಯೇ ಸಿನಿಮಾ ಜರ್ನಿ ಆರಂಭಿಸಬೇಕು ಅಂತ ಇತ್ತು. ಆದರೆ ನಾನು ಫಸ್ಟ್ ಆಡಿಷನ್‌ಗೆ ಹೋದಾಗ ಅದು ಹಿಂದಿ ಸಿನಿಮಾ ಅಂತ ಹೇಳಿದರು. ಅದು ಹಿಂದಿ ಸಿನಿಮಾವೇ ಆದರೂ ಕೂಡ ಎಲ್ಲರೂ ಕನ್ನಡಿಗರೇ. ಮಾಡಿದ್ದು ಮಾತ್ರ ಹಿಂದಿ ಸಿನಿಮಾ’.

* ಗ್ಲಾಮರ್ ಆಗಿದ್ದು ಡಿ ಗ್ಲಾಮರ್ ಪಾತ್ರ ಮಾಡುವುದು ಎಷ್ಟು ಚಾಲೆಂಜ್..?

`ಆ ಬಗ್ಗೆ ಎಲ್ಲಾ ನಾನು ಯೋಚನೆ ಮಾಡಿಲ್ಲ. ಈಗ ಒಬ್ಬರು ಡೈರೆಕ್ಟರ್ ನಮಗೆ ಸ್ಟೋರಿ ಹೇಳುವಾಗ ಆ ಪಾತ್ರ ನನ್ನನ್ನು ಎಕ್ಸೈಟ್ ಮಾಡಬೇಕು. ಏನಾದರೂ ಒಂದು ವಾವ್ ಫ್ಯಾಕ್ಟ್ ಇರಬೇಕು. ಆ ಪಾತ್ರಕ್ಕೆ ಒಂದು ಇಂಪಾಟೆನ್ಸ್ ಇರಬೇಕು ಅಂತಷ್ಟೇ ಬಯಸೋದು ನಾನು. ಅದು ಗ್ಲಾಮರ್ ಇರಲಿ.. ಡಿ ಗ್ಲಾಮರ್ ಇರಲಿ ಐ ಡೋಂಟ್ ಮೈಂಡ್. ಆ ಪ್ರೊಸೆಸ್‌ನ ನಾನು ಎಂಜಾಯ್ ಮಾಡಬೇಕು. ಅಷ್ಟೇ ನನಗೆ ಇರುವುದು. ತುಂಬಾ ರಿಯಲೈಸ್ ಕ್ಯಾರೆಕ್ಟರ್ ಮಾಡುವುದಕ್ಕೆ ನಂಗೆ ತುಂಬಾ ಇಷ್ಟ. ಒಬ್ಬ ಕಲಾವಿದೆಯಾಗಿ ಅದನ್ನ ನಾನು ತುಂಬಾ ಎಂಜಾಯ್ ಮಾಡ್ತೀನಿ’.


* ಮಂಗಳೂರಿನವರು.. ಬೆಂಗಳೂರು ಭಾಷೆ.. ಸಿನಿಮಾದಲ್ಲಿ ಬದಲಾಗುವ ಭಾಷೆಯನ್ನು ಕಲಿಯುವುದು ಹೇಗೆ..?‌

`ಭಾಷೆಯನ್ನ ತುಂಬಾ ಸುಲಭವಾಗಿ ಕಲಿತು ಬಿಡುವುದಕ್ಕೆ ಆಗಲ್ಲ. ನಟನೆಯನ್ನ ಬೇಗ ನೋಡಿ ಕಲಿಯುತ್ತೀನಿ. ನನ್ನ ಮಾತೃ ಭಾಷೆ ಬಂದು ಕೊಂಕಣಿ. ಸ್ಥಳೀಯ ಭಾಷೆ ಬಂದು ತುಳು. ಆರಂಭದಲ್ಲಿ ಬೆಂಗಳೂರಿಗೆ ಬಂದಾಗ ಅರ್ಥವೂ ಆಗ್ತಾ ಇರ್ಲಿಲ್ಲ. ಇಲ್ಲಿನ ಕನ್ನಡವನ್ನು ಕಲಿಯುವುದಕ್ಕೆ ಆರಂಭಿಸಿದಾಗ ನ್ಯೂಸ್ ಪೇಪರ್ ಓದುವುದಕ್ಕೆ ಶುರು ಮಾಡಿದೆ. ಕನ್ನಡ ಬರ್ತಾ ಇತ್ತು. ಆದರೆ ನಮ್ಮ ಕನ್ನಡ ಡಿಫ್ರೆಂಟ್ ಆಗಿರುತ್ತದೆ. ಬೇರೆ ರಿಜನ್ ಭಾಷೆ ಆದ್ರೂ ಕೂಡ ಈಗ ಕಲಿಯುವುದನ್ನು ರೂಢಿಸಿಕೊಂಡಿದ್ದೀನಿ. ಈಗ ನೆಲ್ಸನ್ ಸಿನಿಮಾದಲ್ಲಿ ಚಾಮರಾಜನಗರ ಭಾಷೆ ಇದೆ. ಅದನ್ನು ಕಲಿಸುವುದಕ್ಕೆ ಒಬ್ಬರು ಬರ್ತಾ ಇದ್ದರು. ಸ್ಥಳೀಯ ಮಾಸ್ಟರ್ ಅವರು. ಅವರೇ ನಂಗೆ ಕಲಿಸಿದ್ದು. ಆದರೆ ಸಿನಿಮಾಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಕಲಿಸಿದ್ದು. ಈಗ ಬೇರೆ ಸಿನಿಮಾಗಳನ್ನು ಮಾಡುತ್ತಾ ಇರೋದು ಬೆಂಗಳೂರಿನ ಕನ್ನಡವೇ. ಇನ್ನು ಬೇರೆ ರಾಜ್ಯದ ಸಿನಿಮಾ ಮಾಡ್ತೀನಿ ಅಂದಾಗ ಖಂಡಿತ ಎಫರ್ಟ್ ಹಾಕಲೇಬೇಕಾಗುತ್ತದೆ. ನಂಗೆ ಪರಿಚಯದವರು ಇಬ್ಬರು ಇದ್ದಾರೆ. ಅವರಿಗೂ ಭಾಷೆಗಳನ್ನು ಕಲಿಯುವುದರ ಮೇಲೆ ಆಸಕ್ತಿ ಜಾಸ್ತಿ. ನಾನೇದರೂ ಮಿಸ್ಟೇಕ್ ಮಾಡಿದರೆ ಅವರೇ ಹೇಳುತ್ತಾರೆ. ನಮ್ಮ ಸ್ಥಳೀಯ ಕನ್ನಡಕ್ಕೂ ಈಗ ನಾನು ಮಾತಾಡಿದ್ದಕ್ಕೂ ವ್ಯತ್ಯಾಸ್ ಏನು..? ಎಲ್ಲಿ ಮಿಸ್ಟೇಕ್ ಆಯ್ತು ಅನ್ನೋದನ್ನ ಅವರು ಹೇಳ್ತಾ ಇದ್ರು. ಹೀಗಾಗಿ ಬೆಂಗಳೂರು ಕನ್ನಡವನ್ನು ಬೇಗ ಕಲಿಯುವುದಕ್ಕೆ ಹೆಲ್ಪ್ ಆಯ್ತು’.

* ಸಿನಿಮಾ ಒಪ್ಪಿಕೊಂಡ ಮೇಲೆ ಪಾತ್ರಗಳ ತಯಾರಿ ಹೇಗಿರುತ್ತೆ..?

`ನೆಲ್ಸನ್ ಸಿನಿಮಾದಲ್ಲಿ ನನ್ನ ಕ್ಯಾರೆಕ್ಟರ್ ತುಂಬಾ ಡಿಫ್ರೆಂಟ್ ಆಗಿದೆ. ನನ್ನ ರಿಯಲ್ ಲೈಫ್‌ಗೆ ಕಂಪೇರ್ ಮಾಡಿದ್ರೆ ತುಂಬಾ ವ್ಯತ್ಯಾಸವಿದೆ. ಅದಕ್ಕೆ ಅಂತ ಸ್ವಲ್ಪ ತಯಾರಿ ಮಾಡಿಕೊಂಡಿದ್ದೀನಿ. ಆ ಕ್ಯಾರೆಕ್ಟರ್‌ನ ಕಲ್ಪನೆ ಮಾಡಿಕೊಂಡೆ ಮಾಡಿದ್ದೆ. ಟೀಂ ಮೇಲೂ ಪಾತ್ರಗಳ ತಯಾರಿಯ ಅಗತ್ಯವಿರುತ್ತದೆ. ಯಾವುದೇ ಸಿನಿಮಾ ಇದ್ದರು ನನಗೆ ಡೌಟ್ ಬಂದರೆ ಕೇಳುತ್ತೀನಿ. ನೆಲ್ಸನ್‌ನಲ್ಲೂ ನಾನು ಅದನ್ನೆಲ್ಲಾ ಕೇಳಿದ್ದೀನಿ. ಹೆಜ್ಜಾರು ಸಿನಿಮಾದಲ್ಲಿ ತುಂಬಾ ರಿಯಲ್ ಲೈಫ್ ಕ್ಯಾರೆಕ್ಟರ್. ಹೀಗಾಗಿ ಸುಲಭ ಆಗಿತ್ತು. ಶೂಟ್ ಮಾಡುವ ಸಮಯದಲ್ಲಿ ಆ ಮೂಡ್‌ಗೆ ಹೋಗಬೇಕಾಗಿತ್ತು. ಇನ್ನು ಖಾಸಗಿ ಪುಟಗಳು ಸಿನಿಮಾದಲ್ಲಿ ಬಬ್ಲಿ ಬಬ್ಲಿ, ಕಾಲೇಜು ಸ್ಟುಡೆಂಟ್ ಕ್ಯಾರೆಕ್ಟರ್. ತುಂಬಾ ತಯಾರಿ ಏನು ಬೇಕಾಗಿರಲಿಲ್ಲ.’


* ಯಾವ ಥರದ ಪಾತ್ರಗಳನ್ನು ಹೆಚ್ಚು ಇಷ್ಟಪಡುತ್ತೀರಿ..?

`ಸಿನಿಮಾಗಳನ್ನು ನೋಡುವಾಗ ನನಗೆ ಅನ್ನಿಸುತ್ತೆ, ಓ ಈ ಪಾತ್ರ ಚೆನ್ನಾಗಿದೆ.. ಈ ಪಾತ್ರ ಚೆನ್ನಾಗಿಲ್ಲ ಅನ್ನೋದು. ರೈಟರ್ ಬರೆಯುವುದರ ಮೇಲೂ ಡಿಪೆಂಡ್ ಆಗುತ್ತೆ. ಈಗ ನಾನು ಇಲ್ಲಿವರೆಗೂ ಮಾಡಿರುವಂತ ಪಾತ್ರಗಳು ವಿಭಿನ್ನವಾಗಿಯೇ ಇದಾವೆ. ನಾನು ಇಷ್ಟೊಳ್ಳೆ ಪಾತ್ರಗಳನ್ನು ನಾನು ಮಾಡ್ತೀನಿ ಅಂತ ಊಹೆ ಕೂಡ ಮಾಡಿರ್ಲಿಲ್ಲ. ನಿರ್ದೆಶಕರು ಬಂದು ಕಥೆ ಹೇಳಿದಾಗ ಓಕೆ ಇದು ಚೆನ್ನಾಗಿದೆ ಅನ್ಸುತ್ತೆ. ನಂಗೆ ಬೇರೆ ಏನು ಯೋಚನೆ ಬರುವುದಿಲ್ಲ. ಅದೇ ಥರ ಪಾತ್ರ ಮಾಡಬೇಕು, ಇದೇ ಥರ ಪಾತ್ರ ಮಾಡಬೇಕು ಎಂಬ ಆಲೋಚನೆ ಇಲ್ಲ. ರೈಟರ್ ಯಾವ ಥರ ಪಾತ್ರದ ಮೇಲೆ ಒತ್ತು ಕೊಟ್ಟು ಬರೆಯುತ್ತಾರೆ ಆ ರೀತಿ ಇರುತ್ತೆ. ಹಾಗೇ ನನಗೆ ಬರುವ ಪಾತ್ರಗಳನ್ನು ರೈಟರ್ಸ್ ಅದ್ಭುತವಾಗಿ ಬರೆಯಲಿ ಎನ್ನುವುದು ನನ್ನ ಆಶಯ. ಒಂದೇ ಥರದ ಪಾತ್ರಗಳಿಗೆ ಸ್ಟಿಕಾನ್ ಆದಾಗ ವಿಭಿನ್ನವಾದಂತ ಪಾತ್ರಗಳು ಬರುವುದೇ ಇಲ್ಲ. ಗ್ಲಾಮರಸ್ ಆದಂತ ಪಾತ್ರಗಳನ್ನು ಮಾಡುವುದಕ್ಕೆ ನನಗೆ ಇಷ್ಟಾನೇ, ಇಲ್ಲ ಅಂತ ಅಲ್ಲ. ಆದರೆ ಆ ಪಾತ್ರಕ್ಕೆ ಇಂಪಾರ್ಟೆನ್ಸ್ ಇರಬೇಕು. ಎಸ್ಟಾಬ್ಲೀಷ್ ಇದ್ದಾಗ ಅದನ್ನ ನಾನು ಎಂಜಾಯ್ ಮಾಡ್ತೀನಿ ಅಂತ ಅಷ್ಟೇ. ಈಗಾಗಲೇ ಒಂದು ಸಿನಿಮಾವನ್ನು ಮಾಡ್ತಾ ಇದ್ದೀನಿ. ಅದರಲ್ಲಿ ೧೭-೧೮ ವರ್ಷ ವಯಸ್ಸಿನ ಹುಡುಗಿಯಾಗಿ ಪಾತ್ರ ನಿರ್ವಹಿಸಿದ್ದೇನೆ. ಆಮೇಲೆ ೨೮ ವರ್ಷದ ಪಾತ್ರವನ್ನು ಮಾಡಿದ್ದೀನಿ. ಇದು ನಂಗೆ ಪ್ಲಸ್ ಪಾಯಿಂಟ್. ಯಾಕಂದ್ರೆ ಎಲ್ಲಾ ವಯಸ್ಸಿನ ಪಾತ್ರ ಮಾಡಬಹುದು ಎಂಬುದು’.

* ಇಂಡಸ್ಟ್ರಿ ಬಗ್ಗೆ ಯಾವ ಥರದ ಯೋಚನೆ ಇದೆ..?

`ಈಗ ನಾನು ಮಾಡಿಕೊಂಡು ಬಂದಿರುವುದೆಲ್ಲವೂ ಲೀಡ್ ಕ್ಯಾರೆಕ್ಟರ್. ಸಪೋರ್ಟಿಂಗ್ ಕ್ಯಾರೆಕ್ಟರ್ ಕೂಡ ಮಾಡಬಹುದು. ಆದರೆ ಅಷ್ಟು ಸ್ಟಾçಂಗ್ ಆಗಿರಲ್ಲ. ಅದು ನಿಮಗೂ ಗೊತ್ತು. ಹೀಗಾಗಿ ನಾನು ಲೀಡ್ ಕ್ಯಾರೆಕ್ಟರ್‌ಗಳನ್ನೇ ನೋಡುತ್ತಿದ್ದೀನಿ. ಹಣ ಬಹಳ ಮುಖ್ಯ ಅಂತ ಗೊತ್ತು. ಬದುಕುವುದಕ್ಕೆ ಹಣ ಬೇಕೆ ಬೇಕು. ಹಾಗಂತ ಎಲ್ಲಾ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಆಗಲ್ಲ. ತುಂಬಾ ಯೋಚನೆ ಮಾಡಿ, ನಂಗೆ ಇಷ್ಟ ಆದ್ರೆ, ಇದು ವರ್ಕ್ ಆಗುತ್ತೆ ಅಂತ ನನಗೆ ಅನ್ನಿಸಿದ್ರೆ ಮಾತ್ರ ನಾನು ಮಾಡ್ತೀನಿ. ಒಳ್ಳೆ ಟೀಂ ಜೊತೆಗೆ ಕೆಲಸ ಮಾಡಬೇಕು ಎಂಬುದಿದೆ. ನಂಗೆ ಒಂದು ಕ್ಲಾರಿಟಿ ಇದೆ. ಒಂದೊಳ್ಳೆ ಪಾತ್ರ, ಒಂದೊಳ್ಳೆ ಸ್ಕಿçಪ್ಟ್ ಬಂದ್ರೆ ಮಾಡಬೇಕು ಎಂಬುದು ನನ್ನ ಆಲೋಚನೆ. ಈ ರೀತಿಯ ಥಿಂಕಿಂಗ್ ನನ್ನ ಕೆರಿಯರ್‌ಗೆ ತುಂಬಾ ಸಹಾಯ ಮಾಡುತ್ತೆ ಅನ್ನಿಸುತ್ತೆ’.‌

* ಹೆಜ್ಜಾರು ಸಿನಿಮಾ ಸಕ್ಸಸ್ ನಿಮ್ಮ ಕೆರಿಯರ್‌ಗೆ ಎಷ್ಟು ಲಾಭ

`ಪ್ರತಿಯೊಂದು ಸಿನಿಮಾ ಕೂಡ ಗೆದ್ದಾಗ ಕಲಾವಿದರಿಗೆ ಪ್ಲಸ್ ಪಾಯಿಂಟ್ ಆಗುತ್ತೆ. ಹೆಜ್ಜಾರು ಸಿನಿಮಾದಲ್ಲಿ ವಿಭಿನ್ನವಾದಂತ ಪಾತ್ರ ಆಗಿತ್ತು. ಆ ಪಾತ್ರಕ್ಕೆ ಹುಡುಕಾಟ ನಡೆದಿತ್ತು. ಸರ್ ಕೂಡ ನನಗೆ ಕಲ್ ಮಾಡಿ ಕಥೆ ಹೇಳಿದ್ದರು. ಈ ಸಿನಿಮಾ ನೋಡಿದ ಎಲ್ಲರಿಂದಾನೂ ಒಳ್ಳೆಯ ರಿವ್ಯೂ ಬಂತು. ನನ್ನ ಪಾತ್ರಕ್ಕೂ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಅದು ತುಂಬಾ ಖುಷಿ ಕೊಡುವಂತದ್ದು’.

* ನೆಲ್ಸನ್ ಸಿನಿಮಾದಲ್ಲಿ ಯಾವ ಥರದ ಪಾತ್ರ..?

ನೆಲ್ಸನ್ ಪಾತ್ರ ತುಂಬಾ ವಿಭಿನ್ನವಾಗಿದೆ. ಒಂದು ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಾ ಇದ್ದೀನಿ. ಚಾಮರಾಜನಗರ ಭಾಗದಲ್ಲಿ ನಡೆಯುವಂತ ಸ್ಟೋರಿ. ಅಲ್ಲಿನ ಭಾಷೆಯೂ ವಿಭಿನ್ನವಾಗಿದೆ. ಈಗಾಗಲೇ ಒಂದು ಶೆಡ್ಯೂಲ್ ಮುಗಿದಿದೆ. ಶೂಟಿಂಗ್ ಇನ್ನು ಪ್ಲ್ಯಾನ್ ಮಾಡಿಲ್ಲ. ನಡೀತಾ ಇದೆ’.

* ಯಾರ ಸಿನಿಮಾ ಹೆಚ್ಚು ನೋಡುತ್ತೀರಿ..?

`ನಾನು ಎಲ್ಲಾ ಥರದ ಸಿನಿಮಾಗಳನ್ನು ನೋಡುತ್ತೀನಿ. ನಾನು ಕೂಡ ಸಿನಿಮಾಗಳಲ್ಲಿ ಲೀಡ್ ರೋಲ್ ಮಾಡುತ್ತಿರುವುದರಿಂದ ಎಲ್ಲರ ಸಿನಿಮಾ ನೋಡ್ತೀನಿ. ಪರ್ಟಿಕ್ಯೂಲರ್ಲಿ ಒಬ್ಬರದ್ದೇ ಅಂತ ಇಲ್ಲ. ಸಿನಿಮಾಗಳನ್ನು ನೋಡುವುದೆಮದರೆ ನನಗೆ ಇಷ್ಟ. ಇತ್ತೀಚೆಗಷ್ಟೇ ರೂಪಾಂತರ ಸಿನಿಮಾ ನೋಡಿದೆ. ರಿಯಾಲಿಟಿ ಅಂದ್ರೆ ನಂಗೆ ತುಂಬಾ ಇಷ್ಟ. ನಿಜ ಜೀವನಕ್ಕೆ ಹತ್ತಿರವಾದಂತ ಪಾತ್ರಗಳು, ಕಥೆಗಳು ನನ್ನನ್ನು ಬೇಗ ಆಕರ್ಷಣೆ ಮಾಡಿ ಬಿಡುತ್ತವೆ. ಶಾಖಾಹಾರಿ ಕೂಡ ತುಂಬಾ ಇಷ್ಟ ಆಯ್ತು. ಅದರಲ್ಲೂ ನಟನೆಯಲ್ಲಿಯೇ ಪಳಗಿರುವ ರಂಗಾಯಣ ರಘು ಸರ್ ಆಕ್ಟಿಂಗ್ ಸೂಪರ್ ಅನ್ನಿಸ್ತು. ಕಥೆ ನಮ್ಮನ್ನು ಹಿಡಿದಿಡುತ್ತೆ ಅನ್ನಿಸ್ತು. ಆ ರೀತಿಯ ಸಿನಿಮಾಗಳು ನನಗೆ ತುಂಬಾ ಇಷ್ಟವಾಗುತ್ತವೆ.


* ಯಾವ ಹೀರೋ ಕಮಡ್ರೆ ಇಷ್ಟ..?

`ನಟನೆ ವಿಚಾರಕ್ಕೆ ಬಂದ್ರೆ ಹೆಚ್ಚು ಕೆನೆಕ್ಟ್ ಆಗುವುದು ರಾಜ್ ಬಿ. ಶೆಟ್ಟಿ ಅವರು. ಅವರ ಆಕ್ಟಿಂಗ್ ಅಂದ್ರೆ ನಂಗೆ ತುಂಬಾ ಇಷ್ಟ. ರಕ್ಷಿತ್ ಶೆಟ್ಟಿ ಸರ್ ಅವರ ಆಕ್ಟಿಂಗ್ ಇಷ್ಟ. ಬೇರೆ ಇಂಡಸ್ಟಿçಯ ನಟರು ಇಷ್ಟ. ಆದರೆ ಕನ್ನಡದಲ್ಲಿ ಇವರೆಂದರೆ ತುಂಬಾ ಇಷ್ಟ’.

* ನಟಿಯರಲ್ಲಿ ಯಾರು ಇಷ್ಟ ಆಗುತ್ತಾರೆ..?

`ನಂಗೆ ರಾಧಿಕಾ ಪಂಡಿತ್ ಅವರು ಆಗಿನಿಂದಾನು ಇಷ್ಟ. ಇಂಡಸ್ಟಿçಗೆ ಬರುವುದಕ್ಕೂ ಮೊದಲಿನಿಂದಾನೂ ತುಂಬಾನೇ ಇಷ್ಟ ಆಗ್ತಾರೆ. ಅವರ ಸಿನಿಮಾಗಳನ್ನು ಸಾಕಷ್ಟು ನೋಡಿದ್ದೀನಿ. ಮೊನಾಲಾಗ್ಸ್ಗೆ ಅಂತ ಟ್ರೈನಿಂಗ್ ಸೇರಿದ್ನಲ್ಲ ಆ ಸಮಯದಲ್ಲಿ ನಾನು ಹೆಚ್ಚು ಮೊನಾಲಾಗ್ಸ್ ಮಾಡಿರುವುದೇ ಅವರ ಸಿನಿಮಾಗಳದ್ದು. ಪರ್ಸನಲೀ ಕೂಡ ತುಂಬಾನೇ ಇಷ್ಟ ಆಗುತ್ತಾರೆ’.

* ಲೈಫ್ ಸ್ಟೈಲ್ ಹೇಗಿರುತ್ತೆ..?‌

`ಎಸ್ ಅಫ್‌ಕೋರ್ಸ್ ಡೈಲಿ ದಿನಚರಿಯಲ್ಲಿ ಒಂದಷ್ಟು ವರ್ಕೌಟ್ ಬೇಕೆಬೇಕು. ಫಿಟ್ನೆಸ್ ಕಾಪಾಡಿಕೊಳ್ಳಬೇಕು. ಹೀಗಾಗಿ ವರ್ಕೌಟ್ ರೆಗ್ಯೂಲರ್ ಇದ್ದೆ ಇರುತ್ತದೆ. ಜೊತೆಗೆ ನನ್ನ ವಾಯ್ಸ್ ಮೇಲೆ ಡೈಲಿ ವರ್ಕ್ ಮಾಡ್ತೀನಿ. ವಾಯ್ಸ್ ಕ್ವಾಲಿಟಿಯನ್ನು ಇಂಪ್ರೂವ್ ಮಾಡಬೇಕು ಅಂತ ನನಗೆ ಅನ್ನಿಸ್ತು. ಹೀಗಾಗಿ ವಾಯ್ಸ್ ಎಕ್ಸ್ಸೈಜ್ ಮಾಡ್ತೀನಿ. ಈಗಲೂ ಆಗಾಗ ಮೊನಾಲಾಗ್ಸ್ ಮಾಡ್ತಾ ಇರ್ತಿನಿ’.


* ಅವಕಾಶಗಳು ಹೇಗೆ..? ಹುಡುಕುತ್ತೀರಾ..? ಬರುತ್ವಾ..?

`ಈಗ ಏನು ಮಾಡಿರುವಂತ ಸಿನಿಮಾಗಳಿಗೆ ಅವಕಾಶ ಹುಡುಕಿಕೊಂಡು ಬಂತು. ಆದರೆ ನಂಗೆ ಈ ಮೊದಲೆಲ್ಲಾ ಸಿಕ್ಕಿದ್ದು ಆಡಿಷನ್, ಸ್ಕ್ರೀನ್ ಟೆಸ್ಟ್ ಮೇಲೆ ಸಿಕ್ಕಿದ್ದು. ಹೆಜ್ಜಾರು ಸಿನಿಮಾ ಕೂಡ ಟೀಂನಿಂದಾನೆ ಕರೆದಿದ್ದರು. ರಮೇಶ್ ಇಂದಿರಾ ಸರ್ ಅವರ ಬ್ಯಾನರ್‌ನಲ್ಲಿ ಒಂದು ಸಿನಿಮಾ ಮಾಡ್ತಾ ಇದ್ದೀನಿ. ಅದೆಲ್ಲವೂ ನಾನು ಆಡಿಷನ್ ಮೂಲಕವೇ ಆಯ್ಕೆಯಾಗಿರುವುದು. ಕೆಲವೊಂದು ಸಲ ಆಡಿಷನ್ ಕಾಲ್ ಬಂದಾಗ ನಾನು ಅಪ್ಲೈ ಮಾಡಿರ್ತಿನಿ, ಇನ್ನೊಂದೊಂದು ಸಲ ಯಾರಾದ್ರೂ ಟೀಂಗೆ ನನ್ನ ಸಜೆಸ್ಟ್ ಮಾಡಿರುತ್ತಾರೆ. ನಂಗೆ ಗೊತ್ತಿರುವುದಿಲ್ಲ. ಆಮೇಲೆ ಹೋಗಿ ಆಡಿಷನ್ ಕೊಟ್ಟಿರ್ತಿನಿ. ನಿಯಮದ ಪ್ರಕಾರವೇ ನಾನು ಆಯ್ಕೆಯಾಗುತ್ತಿರುವುದಕ್ಕೆ ನನಗೆ ಖುಷಿ ಇದೆ’.

* ಶ್ವೇತಾ ಡಿಸೋಜಾ ಎಷ್ಟು ಬ್ಯುಸಿ..?

`ಶೂಟಿಂಗ್ ಆಗುತ್ತಾ ಇರುವ ಸಿನಿಮಾವೇ ಮೂರು ಇದಾವೆ. ನೆಲ್ಸನ್, ರಮೇಶ್ ಇಂದಿರಾ ಅವರ ಡೈರೆಕ್ಷನ್ ಇನ್ನು ಟೈಟಲ್ ಫೈನಲೈಸ್ ಆಗಿಲ್ಲ. ಮತ್ತೊಂದು ಗಾಂಧಿ ಸ್ಕ್ವೇರ್ ಅಂತ’.

ಶ್ವೇತಾ ಡಿಸೋಜಾ ಸದ್ಯ ಟ್ರೆಂಡಿಗ್‌ನಲ್ಲಿರುವ ನಟಿಯಾಗಿದ್ದಾರೆ. ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಮನೆ ಮಾತಾಗಿದ್ದಾರೆ. ಅವಕಾಶಗಳ ಬಾಗಿಲು ಕೂಡ ತೆರೆಯುತ್ತಿದ್ದು, ಭರವಸೆಯ ನಟಿಯಾಗಿದ್ದಾರೆ. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದೇ `ಚಿತ್ತಾರ’ದ ಹಾರೈಕೆ.

Share this post:

Related Posts

To Subscribe to our News Letter.

Translate »