Sandalwood Leading OnlineMedia

ವಿಶೇಷವಾಗಿ 40ನೇ ವರ್ಷದ ಆನಿವರ್ಸರಿ ಆಚರಿಸಿಕೊಂಡ ಜಗ್ಗೇಶ್ – ಪರಿಮಳಾ

ಜಗ್ಗೇಶ್ ಹಾಗೂ ಪರಿಮಳಾ 1984ರ ಮಾರ್ಚ್ 22ರಂದು ಮದುವೆಯಾದರು. ಈ ವಿಶೇಷ ದಿನವನ್ನು ಜಗ್ಗೇಶ್ ಅವರು ತಮ್ಮದೇ ರೀತಿಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.

 

ನಟ, ರಾಜಕಾರಣಿ ಜಗ್ಗೇಶ್ ಹಾಗೂ ಪರಿಮಳಾ ದಾಂಪತ್ಯ ಜೀವನಕ್ಕೆ ಈಗ 40 ವರ್ಷ. ಖುಷಿಖುಷಿಯಿಂದ 40 ವಸಂತಗಳನ್ನು ಜಗ್ಗೇಶ್ ಹಾಗೂ ಪರಿಮಳಾ ದಂಪತಿ ಪೂರೈಸಿದ್ದಾರೆ.

ಜಗ್ಗೇಶ್ ಹಾಗೂ ಪರಿಮಳಾ 1984ರ ಮಾರ್ಚ್ 22ರಂದು ಮದುವೆಯಾದರು. ಈ ವಿಶೇಷ ದಿನವನ್ನು ಜಗ್ಗೇಶ್ ಅವರು ತಮ್ಮದೇ ರೀತಿಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.

ಪತ್ನಿ ಪರಿಮಳಾ ಅವರನ್ನು ಮದುವೆ ಆದ ಕ್ಷಣ ಹೇಗಿತ್ತು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ. ತಾಳಿ ಕಟ್ಟಿದ ಕ್ಷಣದ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ ಜಗ್ಗೇಶ್. 

ಮದುವೆ ವಾರ್ಷಿಕೋತ್ಸವ. 40 ವರ್ಷ ಸಮಯ ಕ್ಷಣದಂತೆ ಹೋದ ಭಾವನೆ. ತಾಳಿ ಕಟ್ಟೋವಾಗ್ಲು ತಾಳಿ, ಕಟ್ಟಿದ ಮೇಲು ತಾಳಿ’ ಎಂದು ಅವರು ಬರೆದುಕೊಂಡಿದ್ದಾರೆ.

ಜಗ್ಗೇಶ್ ಮದುವೆ ವಿಚಾರ ಸಖತ್ ಸುದ್ದಿ ಆಗಿತ್ತು. ಅವರು ಮದುವೆ ಪ್ರಕರಣ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಅಲ್ಲಿ ಅವರಿಗೆ ಜಯ ಸಿಕ್ಕಿತ್ತು.

Share this post:

Related Posts

To Subscribe to our News Letter.

Translate »