ಶಿವಮೊಗ್ಗ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್, ಶಿವಮೊಗ್ಗ ಅಖಾಡದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಗೀತಾರನ್ನು ಸಂಸದೆಯಾಗಿ ನೋಡಬೇಕೆಂಬ ಆಸೆ ಶಿವಣ್ಣ ಅವರಲ್ಲಿಯೂ ಇದೆ. ಈ ಬಾರಿ ಗೀತಾರನ್ನ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಹಾಗೇ ಸಿನಿಮಾ ಶೂಟಿಂಗ್ ಜೊತೆ ಜೊತೆಗೆ ಗೀತಾ ಅವರ ಜೊತೆ ಪ್ರಚಾರ ಕಾರ್ಯದಲ್ಲೂ ತೊಡಗಿದ್ದಾರೆ.
ಇಂದು ಗೀತಾ ಅವರು ಶಿವಣ್ಣ ಜೊತೆಗೆ ತಾಂಡಾಗಳಿಗರ ತೆರಳಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬಂಜಾರ ಸಮುದಾಯ ದೊಡ್ಡಮಟ್ಟದಲ್ಲಿ ಇರುವ ಕಾರಣ, ಶಿವಣ್ಣ ಹಾಗೂ ಗೀತಕ್ಕ ತಾಂಡಾಗೆ ಭೇಟಿ ಕೊಟ್ಟು ಮತ ಕೇಳಿದ್ದಾರೆ. ಅಷ್ಟೇ ಅಲ್ಲ ಗೀತಾ ಶಿವ ರಾಜ್‍ಕುಮಾರ್ ಕೂಡ ಬಂಜಾರ ಸಮುದಾಯದ ಉಡುಗೆ ತೊಟ್ಟು ಸಂಭ್ರಮಿಸಿದ್ದಾರೆ. ಬಂಜಾರ ಮಹಿಳೆಯರ ಜೊತೆಗೆ ಕುಣಿದು, ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಗೀತಾ ಶಿವ ರಾಜ್‍ಕುಮಾರ್ ಅವರು ಚುನಾವಣೆಯಲ್ಲಿ ಭರ್ಜರಿ ಓಡಾಟ ನಡೆಸುತ್ತಿದ್ದಾರೆ. ಶಿವಮೊಗ್ಗ ನೆಲದ ಮಗಳಾಗಿರುವ ಕಾರಣ, ಅಲ್ಲಿನ ಜನರ ಸಮಸ್ಯೆ, ಪ್ರದೇಶದ ಸಮಸ್ಯೆಯನ್ನು ಚೆನ್ನಾಗಿಯೇ ಅರಿತಿದ್ದಾರೆ. ಹೀಗಾಗಿ ಸಂಸದೆಯಾದ ಮೇಲೆ ನೀರಿನ ಸಮಸ್ಯೆ, ಮೂಲಭೂತ ಸೌಲಭ್ಯವನ್ನೆಲ್ಲಾ ಒದಗಿಸುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದಾರೆ.