Sandalwood Leading OnlineMedia

ದಾಂಪತ್ಯ ಜೀವನ ಮುರಿದುಕೊಂಡ ಹೇಮ ಮಾಲಿನಿ ಪುತ್ರಿ ಇಶಾ ಡಿಯೋಲ್

ಬಾಲಿವುಡ್ ತಾರೆ ಹೇಮ ಮಾಲಿನಿ ಪುತ್ರಿ, ನಟಿ ಇಶಾ ಡಿಯೋಲ್ ತಮ್ಮ 12 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗಾಣಿಸಿದ್ದಾರೆ.

ಉದ್ಯಮಿ ಭರತ್ ತಖ್ತಾನಿ ಜೊತೆ 2012 ರಲ್ಲಿ ಇಶಾ ಡಿಯೋಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಇದೀಗ ಇವರಿಬ್ಬರ ದಾಂಪತ್ಯ ಜೀವನ ಮುರಿದುಬಿದ್ದಿದೆ. ಇಶಾ ಮತ್ತು ಭರತ್ ಇಬ್ಬರೂ ಈ ಬಗ್ಗೆ ಜಂಟಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ನೀಡಿದ್ದಾರೆ.
ಹೇಳಿಕೆ ಬಿಡುಗಡೆ ಮಾಡಿದ ಇಶಾ-ಭರತ್
ನಾವಿಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗಲು ತೀರ್ಮಾನಿಸಿದ್ದೇವೆ. ನಮ್ಮ ಜೀವನ ಬದಲಾಗುತ್ತಿರುವ ಈ ಸಮಯದಲ್ಲಿ ನಮ್ಮ ಇಬ್ಬರು ಮಕ್ಕಳ ಹಿತಾಸಕ್ತಿ ಮತ್ತು ಯೋಗಕ್ಷೇಮ ನಮಗೆ ಮುಖ್ಯವಾಗಿದೆ. ನಮ್ಮ ಗೌಪ್ಯತೆಯನ್ನು ಗೌರವಿಸಿ’ ಎಂದು ಇಬ್ಬರೂ ಸಂದೇಶ ಬರೆದಿದ್ದಾರೆ.

ಕೆಲವು ದಿನಗಳಿಂದ ಇಬ್ಬರೂ ದೂರವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಅದನ್ನು ಇಬ್ಬರೂ ಅಧಿಕೃತವಾಗಿ ಪ್ರಕಟಿಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಹಾಕಿದ್ದಾರೆ. ಹೇಮ ಮಾಲಿನಿ-ಧರ್ಮೇಂದ್ರ ಪುತ್ರಿಯಾಗಿರುವ ಇಶಾ ಧೂಮ್, ದಸ್, ನೋ ಎಂಟ್ರಿ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

 

Share this post:

Related Posts

To Subscribe to our News Letter.

Translate »