Sandalwood Leading OnlineMedia

ದೀಪಾವಳಿಗೆ ಬಂತು ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದ ಹೊಸ ಪೋಸ್ಟರ್…ಶೀಘ್ರದಲ್ಲೇ ಥಿಯೇಟರ್ ನಲ್ಲಿ ದಿಗಂತ್ ದರ್ಬಾರ್

ಎಡಗೈ ಬಳಸುವವರ ಕಥೆಯಾಧಾರಿತ ಸಿನಿಮಾವೊಂದು ಕನ್ನಡದಲ್ಲಿ ತಯಾರಾಗಿರುವುದು ಗೊತ್ತಿರುವ ವಿಚಾರ. ಯುವ ನಿರ್ದೇಶಕ ಸಮರ್ಥ್‌ ಕಡಕೋಳ್‌ ಸಾರಥ್ಯದಲ್ಲಿ ಮೂಡಿಬಂದಿರುವ ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದ ಹೊಸ ಪೋಸ್ಟರ್ ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಟೇಬಲ್ ಹಿಂಬದಿಯಲ್ಲಿ ಬಚ್ಚಿಟ್ಟುಕೊಂಡು ಕುಳಿತಿರುವ ನಾಯಕ ಹಾಗೂ ನಾಯಕಿ..ಅವರ ಬೆನ್ನಿಂದೆ ವ್ಯಕ್ತಿಯೋರ್ವ ನಿಂತಿದ್ದಾರೆ. ಅವರು ಯಾರು ಅನ್ನೋದನ್ನು ರಿವೀಲ್ ಮಾಡದೇ ಚಿತ್ರತಂಡ ಕುತೂಹಲ ಕಾಯ್ದುಕೊಂಡಿದೆ.

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸಮರ್ಥ್ ಬಿ ಕಡಕೊಳ್ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾ ಹಂದರ ಈ ಸಿನಿಮಾದಲ್ಲಿದೆ. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಿದು. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ಹೊಸ ನಟಿ ಧನು ಹರ್ಷ ನಟಿಸುತ್ತಿದ್ದು ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾವನ್ನು ಹೈಫನ್ ಪಿಕ್ಚರ್ಸ್ ಮತ್ತು ಗುರುದತ್ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಇದೆ. ಒಂದಷ್ಟು ಪೋಸ್ಟರ್, ಝಲಕ್ ಮೂಲಕ ಗಮನಸೆಳೆದಿರುವ ಸಿನಿಮಾ ಶೀಘ್ರದಲ್ಲೇ ಥಿಯೇಟರ್ ಗೆ ಎಂಟ್ರಿ ಕೊಡಲಿದೆ.

Share this post:

Related Posts

To Subscribe to our News Letter.

Translate »