ದ್ವಾರಕೀಶ್ ಇಂದು ಪಂಚಭೂತಗಳಲ್ಲಿ ಲೀನರಾದರು. ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಚಿತಾಗಾರದಲ್ಲಿ ದ್ವಾರಕೀಶ್ ಅವರ ಹಿರಿಯ ಪುತ್ರ ತಂದೆಯ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಷ ಮಾಡಿದರು. ಈ ವೇಳೆ ಕುಟುಂಬದವರು ಹಾಗೂ ಆಪ್ತರು ಹಾಜರಿದ್ದರು.
ರವಿಂದ್ರ ಕಲಾಕ್ಷೇತ್ರದಲ್ಲಿ ಅಂತಿದ ದರ್ಶನ ಪಡೆದ ಸಿನಿ ಮಂದಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ರವೀಂದ್ರ ಕಲಾಕ್ಷೇತ್ರದಿಂದಲೇ ಚಾಮರಾಜಪೇಟೆಯ ರುದ್ರಭೂಮಿಯವರೆಗೂ ದ್ವಾರಕೀಶ್ ಪಾರ್ಥೀವ ಶರೀರದ ಅಂತಿಮ ಯಾತ್ರೆ ಮಾಡಲಾಗಿದೆ. ಬ್ರಾಹ್ಮಣ ಪದ್ಧತಿಯಂತೆ, ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು.
ಪ್ರೇತ ಸಂಸ್ಕಾರ. ಆನಂತರ ಕಿವಿಯಲ್ಲಿ ನಾರಾಯಣ ಸ್ಮರಣೆ. ಚಿತಾ ಅಗ್ನಿ ಹೋಮದ ನಂತರ ಚಿತಾ ಶುದ್ಧಿ , ಭೂ ಸ್ಪರ್ಶ ದಹನ ಮಾಡಿ, ಆಮೇಲೆ ಅಗ್ನಿ ದಿಗ್ಬಂಧನ ಮಾಡಲಾಯಿತು. ಅಂತಿಮ ಸಂಸ್ಕಾರಕ್ಕೂ ಮೊದಲು ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವವಂದನೆ ನೀಡಿದರು.
ದ್ವಾರಕೀಶ್ ಇಡೀ ಜೀವನವನ್ನ ಸಂಪೂರ್ಣ ಅನುಭವಿಸಿದ್ದಾರೆ. ಇಡೀ ಇಂಡಸ್ಟ್ರಿಗೆ ತಮ್ಮದೇ ಕೊಡುಗೆ ಕೊಟ್ಟಿದ್ದಾರೆ. ತಮ್ಮದೇ ರೀತಿಯಲ್ಲಿ ಎಲ್ಲರಿಗೂ ನೆರವಾದ ದ್ವಾರಕೀಶ್ ಅವರನ್ನ ನಟಯರು-ನಟಿಯರು ಸಂಬಂಧಿಕರು ಕಣ್ಣೀರಿನಿಂದಲೇ ವಿದಾಯ ಹೇಳಿದ್ದಾರೆ.
ಇದನ್ನೂ ಓದಿ:ಹೊಸ ಫೋಟೋಶೂಟ್ ನಲ್ಲಿ ಮಿಂಚಿದ ಚೈತ್ರಾ ಆಚಾರ್
ಇದನ್ನೂ ಓದಿ :ಇನಾಮ್ದಾರ್’ ನಿರ್ದೇಶಕನ ಅಪರೂಪದ ಕಥೆ ಹೊತ್ತ ಸಿನಿಮಾ ‘ಗುಂಮ್ಟಿ’
ಕನ್ನಡದ ಕುಳ್ಳನಿಗೆ ಪೊಲೀಸ್ ಗೌರವ ಕೂಡ ಸಲ್ಲಿಸಲಾಗಿದೆ. ಈ ಮೂಲಕ ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ಅವರ ಅಗಲುವಿಕೆಯಿಂದೆ ದೊಡ್ಡ ನಷ್ಟವೇ ಆಗಿದೆ. ಇಡೀ ಇಂಡಸ್ಟ್ರಿ ಕಂಬನಿ ಮಿಡಿದಿದೆ.
ಇದನ್ನೂ ಓದಿ :ದ್ವಾರಕೀಶ್ ನಿಧನಕ್ಕೆ ಸಂತಾಪ ಸೂಚಿಸಿದ ನಟ ಶಿವರಾಜ್ ಕುಮಾರ್
ಸುದೀಪ್, ಯಶ್, ರಮೇಶ್ ಅರವಿಂದ್, ರವಿಚಂದ್ರನ್ ಸೇರಿ ಕನ್ನಡ ಚಿತ್ರರಂಗದ ಅನೇಕ ತಾರೆಯರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು. ಭಾವುಕರಾದರು. ಸಿಎಂ ಸಿದ್ದರಾಮಯ್ಯ ಕೂಡ ದ್ವಾರಕೀಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ :ಈ ಶುಕ್ರವಾರ ತೆರೆಗೆ ಬರ್ತಿದೆ ‘ನಾಲ್ಕನೇ ಆಯಾಮ’..ಯುವ ಪ್ರತಿಭೆ ಗೌತಮ್ ಜೊತೆ ರಚನಾ ಯಾನ
ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಅವರು, ‘ನಾನು ದ್ವಾರಕೀಶ್ಬೆಂಗಳೂರಿನಿಂದ ಮೈಸೂರಿಗೆ ಹೆಲಿಕಾಪ್ಟರ್ನಲ್ಲಿ ಹೋಗಿದ್ವಿ, ಆ ಸಮಯದಲ್ಲಿ ಅನೇಕ ವಿಚಾರಗಳನ್ನ ಚರ್ಚೆ ಮಾಡಿದ್ವಿ ಎಂದು ಸಿಎಂ ಸಿದ್ದರಾಮಯ್ಯ ದ್ವಾರಕೀಶ್ನೆನೆದು ಭಾವುಕರಾದರು.