ಶಾರುಖ್ ಹಾಗೂ ರಾಜ್ ಕುಮಾರ್ ಹಿರಾನಿ ಕಾಂಬಿನೇಷನ್ ನ ಡಂಕಿ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಡಂಕಿ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಭರ್ಜರಿ ಸೌಂಡ್ ಮಾಡ್ತಿದೆ. ಇದೀಗ ಚಿತ್ರತಂಡ ಡಂಕಿ ಡ್ರಾಪ್-5 ಶೀರ್ಷಿಕೆಯಡಿ ಮತ್ತೊಂದು ಸಾಂಗ್ ರಿಲೀಸ್ ಆಗಿದೆ.ಡಂಕಿ ಸಿನಿಮಾದ ಓ ಮಾಹಿ..ಓ ಮಾಹಿ ಎಂಬ ಮೆಲೋಡಿ ಟ್ರ್ಯಾಕ್ ಅನಾವರಣಗೊಂಡಿದೆ. ಹಾರ್ಡಿ ಮತ್ತು ಮನು ನಡುವಿನ ಪ್ರೇಮಗೀತೆಯಾಗಿರುವ ಈ ಹಾಡಿಗೆ ಅರ್ಜಿತ್ ಸಿಂಗ್ ಗಾಯನ, ಇರ್ಷಾದ್ ಕಾಮಿಲ್ ಸಾಹಿತ್ಯ, ಪ್ರೀತಂ ಸಂಗೀತ ನಿರ್ದೇಶನವಿದೆ.
#AskSRK ನಲ್ಲಿ ಕಿಂಗ್ ಖಾನ್ ತಮ್ಮ ನೆಚ್ಚಿನ ಹಾಡು ಇದೇ ಎಂದು ಹೇಳಿಕೊಂಡಿದ್ದರು. ಹೀಗಾಗಿ ಫ್ಯಾನ್ಸ್ ಎಕ್ಸೈಟ್ ಆಗಿದ್ದರು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಓಮಾಹಿ ಹಾಡು ನೋಡಿ ಕಿಂಗ್ ಫ್ಯಾನ್ಸ್ ಖುಷಿಯಾಗಿದ್ದಾರೆ.
ಇದನ್ನೂ ಓದಿ ಮಂಡ್ಯಹೈದ ಟೀಸರ್ ಟೈಟಲ್ ಸಾಂಗ್ ಲಾಂಚ್, ಇಂಟ್ರಡಕ್ಷನ್ ಹಾಡಲ್ಲಿ ಅಭಯ್ ಹುಕ್ ಸ್ಟೆಪ್ಸ್
ಅಂದಹಾಗೇ ಡಂಕಿ ಸಿನಿಮಾಗೆ ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ Kantara : ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ನಟಿಸಲು ನಿಮಗೂ ಅವಕಾಶ!
ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಈ ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಡಂಕಿ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.