ನಿಖಿಲ್ ಕುಮಾರಸ್ವಾಮಿ ಕೆಲವು ದಿನಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳಲ್ಲೇ ಹೆಚ್ಚು ಗುರುತಿಸಿಕೊಂಡು ಸಿನಿಮಾದಿಂದ ದೂರ ಉಳಿದಿದ್ದರು. ಆದ್ರೀಗ ಮತ್ತೆ ಹೊಚ್ಚ ಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾವನ್ನು ದಕ್ಷಿಣ ಭಾರತದ ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಐಶ್ವರ್ಯಾ ರೈ, ವಿಕ್ರಂ ಅಂತಹ ದಿಗ್ಗಜರ ಸಿನಿಮಾವನ್ನು ನಿರ್ಮಾಣ ಮಾಡಿದೆ. ದುಬಾರಿ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ಮಿಸಿರುವ ತಮಿಳಿನ ಈ ಪ್ರೊಡಕ್ಷನ್ ಹೌಸ್ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕಾಲಿಟ್ಟಿದೆ. ನಿಖಿಲ್ ಕುಮಾರ್ ಸಿನಿಮಾವನ್ನು ನಿರ್ಮಾಣ ಮಾಡಲು ಮೊದಲಿನಿಂದಲೂ ಉತ್ಸಾಹ ತೋರಿದ್ದ ಸಂಸ್ಥೆ ಈಗ ಸಿನಿಮಾ ಸೆಟ್ಟೇರಿಸಿದೆ.
ಇದನ್ನೂ ಓದಿ ಹೊಸಬರ ಸಿನಿಮಾಗೆ ‘ಚಟ್ಟ’ ಟೈಟಲ್ ಫಿಕ್ಸ್..ನೀವಂದುಕೊಂಡಂತಲ್ಲ ಇದರ ಅರ್ಥ
ಸದ್ಯ ಇನ್ನೂ ಹೆಸರಿಡದ ಈ ಸಿನಿಮಾದ ಶೂಟಿಂಗ್ ಬೆಂಗಳೂರಿನ ದಾಸನಪುರದ ಎಪಿಎಂಸಿಯಲ್ಲಿ ನಡೆಯುತ್ತಿದೆ. ಈ ಸಿನಿಮಾದ ಶೂಟಿಂಗ್ ಸ್ಪಾಟ್‌ಗೆ ದುನಿಯಾ ವಿಜಯ್ ಭೇಟಿ ಕೊಟ್ಟಿದ್ದು, ಫೋಟೊ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ ಹೊಸಬರ ‘ಒನ್ ಅಂಡ್ ಆಫ್’ ಸಿನಿಮಾದ ಫಸ್ಟ್ ಲುಕ್ ಅನಾವರಣ…ಇದು ಸುಲಕ್ಷ್ಮೀ ಫಿಲಂಸ್ ನ ಚೊಚ್ಚಲ ಪ್ರಯತ್ನ
ನಿಖಿಲ್ ಸಿನಿಮಾದ ಶೂಟಿಂಗ್ ಸೆಟ್ಟಿನಲ್ಲಿ ದುನಿಯಾ ವಿಜಯ್ ಬಹಳ ಹೊತ್ತು ಕಾಲ ಕಳೆದಿದ್ದಾರೆ. ನಿಖಿಲ್ ಸಿನಿಮಾದ ಕೆಲವು ಮೇಕಿಂಗ್ ದೃಶ್ಯಗಳನ್ನೂ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಲೈಕಾದಂತಹ ಸಂಸ್ಥೆ ನಿರ್ಮಾಣ ಮಾಡುತ್ತಿರುವುದರಿಂದ ಅದ್ಧೂರಿ ವೆಚ್ಚದಲ್ಲಿಯೇ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ದುನಿಯಾ ವಿಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಆರಂಭಕ್ಕೂ ಮುನ್ನ ಚಿತ್ರತಂಡವೇ ಈ ವಿಷಯವನ್ನು ಖಚಿತ ಪಡಿಸಿತ್ತು. ಹೀಗಾಗಿ ಬ್ಲ್ಯಾಕ್ ಕೋಬ್ರಾ ಅಭಿಮಾನಿಗಳು ಕೂಡ ನಿಖಿಲ್ ಹಾಗೂ ದುನಿಯಾ ವಿಜಯ್ ಜುಗಲ್‌ಬಂಧಿಯನ್ನು ಕಣ್ತುಂಬಿಕೊಳ್ಳುವುದಕ್ಕೆ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ “ದ ಸೂಟ್” ನಾಯಕ ನಾನೇ ನನ್ನ ಕಥೆಗೆ .
ನಿಖಿಲ್ ಸಿನಿಮಾದಲ್ಲಿ ದುನಿಯಾ ವಿಜಯ್ ಪಾತ್ರವೇನು ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ದುನಿಯಾ ವಿಜಯ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆನ್ನುವ ವಿಷಯ ಹೊರಬೀಳುತ್ತಿದ್ದಂತೆ ಖಳನಾಯಕನಾಗಿ ನಟಿಸುತ್ತಿರುಬಹುದು ಎಂಬ ಸುದ್ದಿ ಓಡಾಡಿತ್ತು. ಆದರೆ, ಲೈಕಾ ಪ್ರೊಡಕ್ಷನ್ ಆಗಲಿ, ದುನಿಯಾ ವಿಜಯ್ ಆಗಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸದ್ಯಕ್ಕೀಗ ದುನಿಯಾ ವಿಜಯ್ ಭೀಮಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ‘ಸಲಗ’ ಬಳಿಕ ‘ಭೀಮ’ ಸಿನಿಮಾದ ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಹಾಡು ರಿಲೀಸ್ ಆಗಿದ್ದು ಯುವಕರನ್ನು ಸಖತ್ ಆಗಿಯೇ ಸೆಳೆಯುತ್ತಿದೆ. ಈ ಸಿನಿಮಾವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಆದಷ್ಟು ಬೇಗ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.